Just In
Don't Miss!
- News
ಸಂಸತ್ ಕಟ್ಟಡದ ಮಹಾತ್ಮ ಗಾಂಧಿ ಪ್ರತಿಮೆ ತರಾತುರಿಯಲ್ಲಿ ಸ್ಥಳಾಂತರ
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಮಲಾ ಪೌಲ್ ನಗ್ನ ನಟನೆ ಬಗ್ಗೆ ಬಾಯ್ ಫ್ರೆಂಡ್ ಹೇಳಿದ್ದೇನು?
ಸೌತ್ ಇಂಡಿಯಾ ನಟಿ ಅಮಲಾ ಪೌಲ್ ಸಿನಿಮಾ, ಖಾಸಗಿ ವಿಚಾರಗಳಿಗೆ ಪದೇ ಪದೇ ಸುದ್ದಿಯಾಗುತ್ತಿದ್ದಾರೆ. ಇತ್ತೀಚಿಗಷ್ಟೆ ಅಮಲಾ ಪೌಲ್ ಅವರ ಮಾಜಿ ಪತಿ ನಿರ್ದೇಶಕ ಎ.ಎಲ್ ವಿಜಯ್ ಎರಡನೇ ಮದುವೆ ಆಗಿದ್ದರು.
ಆ ಕಡೆ ಅಮಲಾ ಪೌಲ್ ತಮ್ಮ ಬಾಯ್ ಫ್ರೆಂಡ್ ಬಗ್ಗೆ ಬಹಿರಂಗಪಡಿಸುವ ಮೂಲಕ ಸರ್ಪ್ರೈಸ್ ಕೊಟ್ಟಿದ್ದರು. ಹೀಗಿರುವಾಗ, ಅಮಲಾ ಪೌಲ್ 'ಅಡೈ' ಚಿತ್ರದ ಮೂಲಕ ಭಾರಿ ಸಂಚಲನ ಸೃಷ್ಟಿಸಿದ್ದರು.
'ಅಡೈ' ಸಿನಿಮಾದಲ್ಲಿ ಅಮಲಾ ಪೌಲ್ ನಗ್ನವಾಗಿ ನಟಿಸಿರುವಂತೆ ಟ್ರೈಲರ್ ನಲ್ಲಿ ಕಂಡು ಬಂದಿದೆ. ಇದು ಸಹಜವಾಗಿ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಇದೀಗ, ಅಮಲಾ ಪೌಲ್ ನಗ್ನ ನಟನೆ ಬಗ್ಗೆ ಬಾಯ್ ಫ್ರೆಂಡ್ ಏನಂದ್ರು ಎಂಬುದು ಕುತೂಹಲ.
ಮಾಜಿ ಪತಿ ಮದುವೆ ಬೆನ್ನಲ್ಲೆ ಬಾಯ್ ಫ್ರೆಂಡ್ ಬಗ್ಗೆ ಬಾಯ್ಬಿಟ್ಟ ಅಮಲಾ ಪೌಲ್
ಈ ಬಗ್ಗೆ ನಟಿ ಅಮಲಾ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ''ನಗ್ನ ನಟನೆಯ ಬಗ್ಗೆ ನನ್ನ ಬಾಯ್ ಫ್ರೆಂಡ್ ಮೆಚ್ಚುಗೆ ವ್ಯಕ್ತಪಡಿಸಿದ್ದು, 'ಫಿಟ್ನೆಸ್ ಕಡೆ ಗಮನ ಹರಿಸು' ಎಂದು ಸಲಹೆ ನೀಡಿದ್ದಾರೆ ಎಂದು ಅಮಲಾ ತಿಳಿಸಿದ್ದಾರೆ. ಆದರೆ, ಆ ಬಾಯ್ ಫ್ರೆಂಡ್ ಯಾರು ಎಂಬುದರ ಬಗ್ಗೆ ಯಾವುದೇ ಸುಳಿವು ಕೊಟ್ಟಿಲ್ಲ.
ಅಮಲಾ ಪೌಲ್ ಮಾಜಿ ಪತಿ ವಿಜಯ್ ಮದುವೆ ಫಿಕ್ಸ್: ಹುಡುಗಿ ಈಕೆನೇ.!
ಅಂದ್ಹಾಗೆ, ಅಡೈ ಸಿನಿಮಾ ಈ ವಾರವಷ್ಟೇ ತೆರೆಕಂಡಿದೆ. ರತ್ನ ಕುಮಾರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಅಮಲಾ, ರಮ್ಯಾ ಸುಬ್ರಮಣ್ಯನ್, ಶ್ರೀರಂಜನಿ, ವಿವೇಕ್ ಪ್ರಸನ್ನ ಸೇರಿದಂತೆ ಹಲವರು ನಟಿಸಿದ್ದಾರೆ.