»   » ನೇತ್ರದಾನ ಮಾಡಿದ 'ಹೆಬ್ಬುಲಿ' ಬೆಡಗಿ ಅಮಲಾ ಪೌಲ್

ನೇತ್ರದಾನ ಮಾಡಿದ 'ಹೆಬ್ಬುಲಿ' ಬೆಡಗಿ ಅಮಲಾ ಪೌಲ್

Posted By:
Subscribe to Filmibeat Kannada

ಸೌತ್ ಸಿನಿಮಾರಂಗದ ಸ್ಟಾರ್ ನಟಿ ಅಮಲಾ ಪೌಲ್ ಈಗ ನೇತ್ರದಾನ ಮಾಡಿದ್ದಾರೆ. ತಮ್ಮ ಕಣ್ಣುಗಳನ್ನು ದಾನ ಮಾಡಿ ಎಲ್ಲರಿಗೂ ಆದರ್ಶವಾಗಿದ್ದಾರೆ. ನಿನ್ನೆ (ಮಂಗಳವಾರ) ಪಾಂಡಿಚೇರಿಯಲ್ಲಿ ಇರುವ ಡಾ.ಅಗರ್ವಾಲ್ ಕಣ್ಣಿನ ಆಸ್ಪತ್ರೆಯನ್ನು ಉದ್ಘಾಟನೆ ಮಾಡಿದ ಅಮಲಾ ಪೌಲ್ ಅದೇ ವೇಳೆ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ.

''ಪ್ರತಿಯೊಬ್ಬರು ತಮ್ಮ ಕಣ್ಣುಗಳಿಂದ ಪ್ರಪಂಚವನ್ನು ನೋಡಬೇಕು. ಪ್ರಕೃತಿ ಸೌಂಧರ್ಯವನ್ನು, ಬಣ್ಣಗಳನ್ನು ಕಾಣಬೇಕು. ಅಲ್ಲದೆ ಇಡೀ ಪ್ರಪಂಚದಲ್ಲಿ ಭಾರತ ಅತಿ ಹೆಚ್ಚು ಕುರುಡರಿರುವ ದೇಶಗಳ ಪೈಕಿ ಒಂದಾಗಿದೆ. ಆ ಕಾರಣ ಎಲ್ಲರೂ ನೇತ್ರದಾನ ಮಾಡಬೇಕು'' ಎಂದು ಅಮಲಾ ಹೇಳಿದ್ದಾರೆ. ಇದೇ ಕಾರಣದಿಂದ ಅವರು ನೇತ್ರದಾನ ಮಾಡಿದ್ದಾರಂತೆ. ಅಮಲಾ ಪೌಲ್ ಅವರ ಈ ಒಳ್ಳೆಯ ಕೆಲಸಕ್ಕೆ ಅವರ ಅಭಿಮಾನಿಗಳು ಕೂಡ ಹೆಮ್ಮೆ ಪಡುತ್ತಿದ್ದಾರೆ.

'ನಿನ್ನ ರೇಟ್ ಎಷ್ಟು?' ಎಂದ ಕಾಮುಕನಿಗೆ ಬುದ್ಧಿ ಕಲಿಸಿದ ಅಮಲಾ ಪೌಲ್

ಅಂದಹಾಗೆ, ಈ ಹಿಂದೆ ಕನ್ನಡದ ವರ ನಟ ಕೂಡ ಈ ರೀತಿ ಮಹತ್ತರ ಕೆಲಸ ಮಾಡಿದ್ದಾರೆ. ಬಾಲಿವುಡ್ ನಟರಾದ ಅಮಿತಾಭ್ ಬಚ್ಚನ್, ಅಮಿರ್ ಖಾನ್, ಪ್ರಿಯಾಂಕ ಚೋಪ್ರಾ, ಐಶ್ವರ್ಯ ರೈ ಸೇರಿದಂತೆ ಕೆಲವು ದೊಡ್ಡ ದೊಡ್ಡ ಸ್ಟಾರ್ ಗಳು ಸಹ ತಮ್ಮ ಕಣ್ಣುಗಳನ್ನು ದಾನ ಮಾಡಿ ತಮ್ಮ ಅಭಿಮಾನಿಗಳಿಗೆ ನಿಜವಾದ ಆದರ್ಶವಾಗಿದ್ದಾರೆ.

Amala Paul donates her eyes in Agarwal eye hospital Puducherry.

ಅಂದಹಾಗೆ, ಕಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾ ಮಾಡಿದ್ದ ಅಮಲಾ ಪೌಲ್ 'ಹೆಬ್ಬುಲಿ' ಸಿನಿಮಾದ ಮೂಲಕ ಕನ್ನಡಕ್ಕೆ ಬಂದರು. ಸಿನಿಮಾದಲ್ಲಿ ಕಿಚ್ಚ ಸುದೀಪ್ ಜೊತೆಗೆ ಅಮಲಾ ಪೌಲ್ ನಟಿಸಿದ್ದರು.

English summary
South indian actress Amala Paul donates her eyes in Agarwal eye hospital Puducherry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada