For Quick Alerts
  ALLOW NOTIFICATIONS  
  For Daily Alerts

  ನಟನೆಯಿಂದ ನಿರ್ಮಾಣಕ್ಕೆ ಕೈಹಾಕಿದ 'ಹೆಬ್ಬುಲಿ' ನಟಿ ಅಮಲಾ ಪೌಲ್

  |

  ಹೆಬ್ಬುಲಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಸಿನಿಪ್ರೇಮಿಗಳ ಗಮನ ಸೆಳೆದ ನಟಿ ಅಮಲಾ ಪೌಲ್, ಸೌತ್ ಇಂಡಸ್ಟ್ರಿಯಲ್ಲಿ ಸ್ಟಾರ್ ನಟಿ. ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸುವ ಮೂಲಕ ಯಶಸ್ವಿ ನಾಯಕಿಯಾಗಿರುವ ಅಮಲಾ, ಈಗ ನಟನೆಯಿಂದ ನಿರ್ಮಾಪಕಿಯಾಗುತ್ತಿದ್ದಾರೆ.

  ಹೌದು, ಅಮಲಾ ಪೌಲ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ತಮ್ಮದೇ ಬ್ಯಾನರ್ ನಲ್ಲಿ ಚೊಚ್ಚಲ ಸಿನಿಮಾ ಆರಂಭಿಸಿದ್ದಾರೆ. ತಮ್ಮ ಮ್ಯಾನೇಜರ್ ಜೊತೆ ಸೇರಿ ನಿರ್ಮಾಣ ಸಂಸ್ಥೆ ಹುಟ್ಟುಹಾಕಿರುವ ಅಮಲಾ, ಹೊಸ ಸಿನಿಮಾಗೆ ಚಾಲನೆ ನೀಡಿದ್ದಾರೆ.

  'ನಿನ್ನ ರೇಟ್ ಎಷ್ಟು?' ಎಂದ ಕಾಮುಕನಿಗೆ ಬುದ್ಧಿ ಕಲಿಸಿದ ಅಮಲಾ ಪೌಲ್

  ಮಲಯಾಳಂ ಭಾಷೆಯಲ್ಲಿ 'ಕದವೀರ್' ಎಂಬ ಥ್ರಿಲ್ಲರ್ ಸಿನಿಮಾ ಮಾಡುತ್ತಿದ್ದು, ಇದು ನೈಜ ಅನುಭವಗಳ ಕಥೆ ಹೊಂದಿದೆಯಂತೆ. ಅಭಿಲಾಷ್ ಪಿಳ್ಳೈ ಎಂಬುವರು ಈ ಚಿತ್ರಕ್ಕೆ ಕಥೆ ಬರೆದು, ನಿರ್ದೇಶನ ಮಾಡ್ತಿದ್ದಾರೆ.

  ಮತ್ತೊಂದೆಡೆ ತಮಿಳಿನಲ್ಲಿ ಎರಡು ಸಿನಿಮಾ, ಮಲಯಾಳಂನಲ್ಲಿ ಎರಡು ಸಿನಿಮಾ ಹಾಗೂ ಹಿಂದಿಯ ಒಂದು ಹೊಸ ಚಿತ್ರದಲ್ಲಿ ಅಮಲಾ ನಟಿಸುತ್ತಿದ್ದಾರೆ.

  'ಹೆಬ್ಬುಲಿ' ನಟಿ ಅಮಲಾ ಪೌಲ್ ಮುಂದಿನ ಸನ್ನಿ ಲಿಯೋನ್ ಅಂತೆ.!

  ಹೀರೋಯಿನ್ ಆಗಿ ಸಕ್ಸಸ್ ಕಾಣುತ್ತಿರುವ ನಟಿಯರ ಪೈಕಿ ಸಿನಿಮಾ ನಿರ್ಮಾಣಕ್ಕೂ ಮುಂದಾಗಿರುವ ನಟಿಯರು ಬಹಳ ಅಪರೂಪ. ಆ ಪಟ್ಟಿಗೆ ಈಗ ಅಮಲಾ ಕೂಡ ಸೇರಿಕೊಂಡಿದ್ದಾರೆ. ಕನ್ನಡದಲ್ಲಿ ರಚಿತಾ ರಾಮ್ 'ರಿಷಭಪ್ರಿಯ' ಕಿರುಚಿತ್ರ ನಿರ್ಮಾಣ ಮಾಡಿದ್ದರು.

  English summary
  South actress Amala Paul turned as a producer from acting. she is producing 'cadaver' movie with her manager.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X