TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಫೆಬ್ರವರಿ 14ಕ್ಕೆ ಅಂಬಿ ಪುತ್ರನ ಸರ್ಪ್ರೈಸ್: ಶುಭಕೋರಿದ ಸುದೀಪ್

ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಗ ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ 'ಅಮರ್' ಪ್ರೇಮಿಗಳ ದಿನಕ್ಕೆ ಸರ್ಪ್ರೈಸ್ ನೀಡುತ್ತಿದೆ. ಫೆಬ್ರವರಿ 14 ರಂದು ಅಮರ್ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದ್ದು, ಸ್ಯಾಂಡಲ್ ವುಡ್ ಗೆ ಇದು ಸ್ಪೆಷಲ್ ಆಗಿದೆ.
ಅಂಬರೀಶ್ ಅವರ ಇಲ್ಲದ ಸಮಯದಲ್ಲಿ ಅಮರ್ ಟೀಸರ್ ಬರ್ತಿದ್ದು, ಅಂಬಿ ಪುತ್ರನ ಸ್ವಾಗತಕ್ಕೆ ಕನ್ನಡ ಕಲಾಕುಟುಂಬ ಸಜ್ಜಾಗಿದೆ. ಈ ವಿಷ್ಯ ತಿಳಿದ ಕಿಚ್ಚ ಸುದೀಪ್ ಟ್ವಿಟ್ಟರ್ ಮೂಲಕ ಅಭಿಷೇಕ್ ಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.
ಅಂಬಿ ಪುತ್ರ ಅಭಿಷೇಕ್ ಮತ್ತು 'ದೊಡ್ಮಗ' ದರ್ಶನ್ ಕೊಟ್ರು ಬ್ರೇಕಿಂಗ್ ನ್ಯೂಸ್
'ಯಂಗ್ ರೆಬೆಲ್ ಅಭಿಗೆ ಸ್ವಾಗತ, ಒಳ್ಳೆಯದಾಗಲಿ' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಇನ್ನುಳಿದಂತೆ ಫೆಬ್ರವರಿ 14 ರಂದು ಆನಂದ್ ಆಡಿಯೋ ಮೂಲಕ ಅಮರ್ ಟೀಸರ್ ತೆರೆಕಾಣುತ್ತಿದೆ.
ಸುದೀಪ್ ಪ್ರಕಾರ ಸ್ಯಾಂಡಲ್ ವುಡ್ ಗೆ ಈ ನಟ 'ಬಾಸ್' ಆಗ್ಬೇಕಂತೆ.!
ನಾಗಶೇಖರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ತಾನ್ಯ ಹೋಪ್ ನಾಯಕಿಯಾಗಿ ನಟಿಸಿದ್ದಾರೆ. ಸಂದೇಶ್ ಕಂಬೈನ್ಸ್ ಅಡಿಯಲ್ಲಿ ಸಂದೇಶ್ ನಾಗರಾಜ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ.
ಈಗಾಗಲೇ ಶೂಟಿಂಗ್ ಮುಗಿಸಿರುವ ಅಮರ್ ಚಿತ್ರತಂಡ ಸದ್ಯ ಟೀಸರ್ ರಿಲೀಸ್ ಮಾಡಿ ಝಲಕ್ ನೀಡಲಿದೆ. ಎಲ್ಲ ಅಂದುಕೊಂಡಂತೆ ಆದ್ರೆ, ಈ ವರ್ಷದಲ್ಲೇ ಅಮರ್ ಸಿನಿಮಾ ತೆರೆಗೆ ಬರಲಿದೆ.