»   » ಇಂದು ಅಂಬರೀಶ್ ಹುಟ್ಟುಹಬ್ಬ, ನ್ಯೂಸ್ ಅದಲ್ಲ!

ಇಂದು ಅಂಬರೀಶ್ ಹುಟ್ಟುಹಬ್ಬ, ನ್ಯೂಸ್ ಅದಲ್ಲ!

Posted By:
Subscribe to Filmibeat Kannada

ಕಲಿಯುಗದ ಕರ್ಣ, ಹೃದಯ ಶ್ರೀಮಂತ ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ಇಂದು 63ನೇ ಹುಟ್ಟುಹಬ್ಬದ ಸಂಭ್ರಮ. ಕನ್ನಡ ಚಿತ್ರರಂಗದಲ್ಲಿ 4 ದಶಕಗಳನ್ನ ಪೂರೈಸಿರುವ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಶಿಷ್ಯ ಅಂಬರೀಶ್ ಜನ್ಮದಿನವನ್ನ ಇಂದು ಅಭಿಮಾನಿಗಳು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ.

ಅಂಬರೀಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕೊಂಚ ಫ್ಲ್ಯಾಶ್ ಬ್ಯಾಕ್ ಗೆ ಹೋಗಿ ಬರೋಣ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ, ಅಂಬರೀಶ್ ರದ್ದು ಲವ್ ಮ್ಯಾರೇಜ್. ಅನೇಕ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿರುವ ಅಂಬರೀಶ್ ಮತ್ತು ಸುಮಲತಾ ನಡುವೆ ಪ್ರೀತಿ ಹುಟ್ಟಿದ್ದು ಹೇಗೆ ಅನ್ನೋದೇ ಇಂಟ್ರೆಸ್ಟಿಂಗ್ ಸ್ಟೋರಿ. ಆ ಕಥೆಯನ್ನ ನಾವ್ ಹೇಳ್ತೀವಿ ಕೇಳಿ....


ambareesh-sumalatha

ಅದು 'ನ್ಯೂ ಡೆಲ್ಲಿ' ಚಿತ್ರೀಕರಣದ ಸಮಯ. ಮಾಲೆಯಾಳಂ ಚಿತ್ರದ ರೀಮೇಕ್ ಆಗಿದ್ದ 'ನ್ಯೂ ಡೆಲ್ಲಿ'ಯಲ್ಲಿ ಅಂಬರೀಶ್ ಜೊತೆ ಜೋಡಿಯಾಗಿದ್ದವರು ಸುಮಲತಾ. ದೆಹಲಿಯಲ್ಲಿ ಶೂಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ಸುಮಲತಾ ಅವರ ಹುಟ್ಟುಹಬ್ಬವಿತ್ತು. [ದೊಡ್ಮನೆ ಹುಡುಗ ಚಿತ್ರದಲ್ಲಿ ಸುಮಲತಾ-ಅಂಬಿ ಜೋಡಿ]


ಸ್ಪಾಟ್ ನಲ್ಲೇ ಬರ್ತಡೆ ಪಾರ್ಟಿಯನ್ನ ಸುಮಲತಾ ಅರೇಂಜ್ ಮಾಡಿದ್ದರು. ಹಿಂದಿನ ದಿನ ಅಂಬಿಗೆ ಆಹ್ವಾನ ಕೂಡ ನೀಡಿದ್ದರು. ಆದ್ರೆ, ಅಂದು ಶೂಟಿಂಗ್ ಇದ್ದರೂ, ಅಂಬರೀಶ್ ಅವರ ಶಾಟ್ ಇಲ್ಲದ ಕಾರಣ, ಲೊಕೇಷನ್ ಗೆ ಅಂಬರೀಶ್ ಬಂದಿರಲಿಲ್ಲ. ಬರ್ತೀನಿ ಅಂದು ಅಂಬರೀಶ್ ಕೈ ಕೊಟ್ಟಿದ್ದಕ್ಕೆ ಸುಮಲತಾ ಕಣ್ಣು ಕೆಂಪಾಗಿತ್ತು. [ಬೆಳ್ಳಿತೆರೆಯ ಮೇಲೆ ಮತ್ತೆ ಅಬ್ಬರಿಸಲಿರುವ ಕನ್ವರ್ ಲಾಲ್]


ambareesh-sumalatha

ಇದೇ ಕಾರಣಕ್ಕೆ ಮಾರನೇ ದಿನ ಅಂಬಿ ಶೂಟಿಂಗ್ ಗೆ ಹಾಜರ್ ಆದರೂ, ಅವರನ್ನ ಸುಮಲತಾ ಮಾತನಾಡಿಸಲಿಲ್ಲ. 'ಸಾರಿ' ಅಂತ ಸಾರಿ ಸಾರಿ ಅಂಬಿ ಕೇಳಿದರೂ, ಸುಮಲತಾ ತಿರುಗಿ ನೋಡಲಿಲ್ಲ. 3-4 ದಿನ ಅಂಬಿಯನ್ನ ಸುಮಲತಾ ಅವಾಯ್ಡ್ ಮಾಡಿದ್ದನ್ನ ನೋಡಿ, ಅಂಬಿಗೆ ಏನಾಯ್ತೋ ಏನೋ...ಸಡನ್ನಾಗಿ ಒಂದು ಪ್ಲಾನ್ ಮಾಡಿದರು.


ನೈಟ್ ಶೂಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ಸುಮಲತಾ ಕಾರ್ ನಲ್ಲಿ ಕೂತಿರುವಾಗ ಒಂದು ಗಿಫ್ಟ್ ಪ್ಯಾಕ್ ಮತ್ತು ಅದರ ಜೊತೆ ಒಂದು ಚೀಟಿಯನ್ನ ಬಿಸಾಕಿದರು. ಆ ಚೀಟಿಯಲ್ಲಿ 'ಸಾರಿ', 'ನನ್ನನ್ನ ಕ್ಷಮಿಸು' ಅಂತ ಇಂಗ್ಲೀಷ್, ಕನ್ನಡ, ತೆಲುಗು, ಮಲೆಯಾಳಂನಲ್ಲಿ ಬರೆದು ಕೆಳಗೆ 'ರೆಬೆಲ್ ಇನ್ ಟ್ರಬಲ್' ಅಂತ ಅಂಬಿ ಬರೆದ್ದಿದ್ದರಂತೆ. [ಸುಮಲತಾ ಬಯಲು ಮಾಡಿದ ಅಂಬಿ 'ಮುತ್ತಿ'ನ ರಹಸ್ಯ!]


ambareesh-sumalatha

ಇದನ್ನ ನೋಡಿ ನಗುವುದಕ್ಕೆ ಶುರುಮಾಡಿದ ಸುಮಲತಾ, ನಂತ್ರ ಗಿಫ್ಟ್ ಪ್ಯಾಕ್ ಓಪನ್ ಮಾಡಿದರು. ಸುಮಲತಾ ಹೇಳುವ ಪ್ರಕಾರ ಅದು ಅರ್ಧ ಪಿಂಕ್ ಮತ್ತರ್ಧ ನೀಲಿ ಬಣ್ಣ ಇರುವ ತೀರಾ ಬ್ರೈಟ್ ಮತ್ತು ಅತ್ಯಂತ ಕೆಟ್ಟ ಡ್ರೆಸ್. ಆ ಡ್ರೆಸ್ ನೋಡಿ ಸುಮಲತಾಗೆ ಮತ್ತಷ್ಟು ಕೋಪ ಬಂತಂತೆ.


ಆದ್ರೆ, ಅದನ್ನ ಅಂಬಿ ತಂದಿರಲಿಲ್ಲ. ಸುಮಲತಾ ಅವರನ್ನ ಸಮಾಧಾನ ಮಾಡುವುದಕ್ಕೆ ಸ್ಪಾಟ್ ಬಾಯ್ ಇಂದ ತರಿಸಿದ್ದು ಅಂತ ಅಂಬಿ ಹೇಳಿದ್ಮೇಲೆ ಅವರ ಮನಸ್ಸು ಹಗುರ ಆಯ್ತಂತೆ. ಇಲ್ಲಿಂದ ಶುರುವಾದ ಅಂಬರೀಶ್-ಸುಮಲತಾ ಅನುಬಂಧ ಇಂದಿಗೂ ಗಟ್ಟಿಯಾಗಿದೆ. [ಅಂಬರೀಷ್ ಧರ್ಮಪತ್ನಿ ಸುಮಲತಾ ಬಗ್ಗೆ ಒಂದಿಷ್ಟು]


ambareesh-sumalatha

'ಆಹುತಿ', 'ನ್ಯೂ ಡೆಲ್ಲಿ', 'ಒಲವಿನ ಕಾಣಿಕೆ', 'ಶ್ರೀ ಮಂಜುನಾಥ', 'ಕಲ್ಲರಳಿ ಹೂವಾಗಿ' ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಒಂದಾಗಿ ಕಾಣಿಸಿಕೊಂಡಿರುವ ಈ ಜೋಡಿ ಬೆಳ್ಳಿತೆರೆಮೇಲೆ ಸೂಪರ್ ಹಿಟ್ ಜೋಡಿಯಾದರೆ, ನಿಜಜೀವನದಲ್ಲಿ ಎಲ್ಲರಿಗೂ ಮಾದರಿ. (ಫಿಲ್ಮಿಬೀಟ್ ಕನ್ನಡ)

English summary
Kannada Actor Ambareesh is celebrating his 63rd Birthday today (May 29th). On this Occasion, here is an Interesting Fact on how Ambareesh and Sumalatha love blossomed.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada