»   » ಬೆಳ್ಳಿತೆರೆಯ ಮೇಲೆ ಮತ್ತೆ ಅಬ್ಬರಿಸಲಿರುವ ಕನ್ವರ್ ಲಾಲ್

ಬೆಳ್ಳಿತೆರೆಯ ಮೇಲೆ ಮತ್ತೆ ಅಬ್ಬರಿಸಲಿರುವ ಕನ್ವರ್ ಲಾಲ್

Posted By:
Subscribe to Filmibeat Kannada

ಮಂಡ್ಯದ ಗಂಡು ಅಂಬರೀಶ್ ಅವರ ವೃತ್ತಿ ಬದುಕಿನ ಅತ್ಯದ್ಭುತ ಚಿತ್ರಗಳಲ್ಲಿ 'ಅಂತ' (1981) ಸಹ ಒಂದು. ಈ ಚಿತ್ರದ ಮೂಲಕ ಅಂಬಿ ರೆಬೆಲ್ ಸ್ಟಾರ್ ಆಗಿ ಸ್ಯಾಂಡಲ್ ವುಡ್ ನಲ್ಲಿ ಗರ್ಜಿಸಿದರು. ಇದೀಗ ಮತ್ತೆ 'ಅಂತ' ಚಿತ್ರ ಮೂವತ್ತು ವರ್ಷಗಳ ಬಳಿಕ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದೆ.

ಇದೇ ಮೇ.29ರಂದು ಅಂಬರೀಶ್ ಅವರು 63ನೇ ವರ್ಷಕ್ಕೆ ಅಡಿಯಿಡುತ್ತಿದ್ದಾರೆ. ಈ ಸಂದರ್ಭದಲ್ಲಿ ಚಿತ್ರ ರೀ ರಿಲೀಸ್ ಆಗುತ್ತಿದೆ. ವಿಶೇಷ ಎಂದರೆ 5.1 ಡಿಜಿಟಲ್ ಸೌಂಡ್ ನಲ್ಲಿ ಚಿತ್ರ ಬಿಡುಗಡೆಯಾಗುತ್ತಿರುವುದು. [ಸುಮಲತಾ ಬಯಲು ಮಾಡಿದ ಅಂಬಿ 'ಮುತ್ತಿ'ನ ರಹಸ್ಯ!]

Antha

"ಕುತ್ತೆ ಕನ್ವರ್ ನಹಿ ಕನ್ವರ್ ಲಾಲ್ ಭೋಲೋ..." ಎಂಬ ಅಬ್ಬರದ ಧ್ವನಿಯನ್ನು ಅಂಬಿ ಅಭಿಮಾನಿಗಳು ಮತ್ತೆ ಕೇಳಲು ತುದಿಗಾಲಲ್ಲಿ ನಿಂತಿದ್ದಾರೆ. ಇದೇ ಮೇ.30 ಚಿತ್ರ ಥಿಯೇಟರ್ ಗಳಿಗೆ ದಾಂಗುಡಿ ಇಡುತ್ತಿದೆ 'ಅಂತ'.

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಹಾಲಿ ಅಧ್ಯಕ್ಷರಾಗಿರುವ ಎಸ್.ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಮೂಡಿಬಂದ ಚಿತ್ರ ಇದಾಗಿದ್ದು, ಲಕ್ಷ್ಮಿ ಹಾಗೂ ಲತಾ ಚಿತ್ರದ ನಾಯಕಿಯರು. ಜಿ.ಕೆ ವೆಂಕಟೇಶ್ ಅವರ ಸಂಗೀತ ಇರುವ ಚಿತ್ರದ ಹಾಡುಗಳನ್ನು ಚಿ ಉದಯಶಂಕರ್, ಆರ್ ಎನ್ ಜಯಗೋಪಾಲ್ ಹಾಗೂ ಗೀತಪ್ರಿಯಾ ಅವರು ರಚಿಸಿದ್ದಾರೆ.

ಅಂಬರೀಶ್ ಅವರ 63ನೇ ಹುಟ್ಟುಹಬ್ಬ ಆದಕಾರಣ ಚಿತ್ರವನ್ನು ಕೇವಲ 63 ಚಿತ್ರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಭಾರತೀಯ ಚಿತ್ರರಂಗದ ಮೊಟ್ಟ ಮೊದಲ ಶುದ್ಧ ರಾಜಕೀಯ ಚಿತ್ರ ಎಂಬ ಹೆಗ್ಗಳಿಕೆ 'ಅಂತ' ಚಿತ್ರ ಪಾತ್ರವಾಗಿದೆ. ಈ ಚಿತ್ರ ತೆಲುಗು (ಖೈದಿ ಆರಂಭಂ) ಹಾಗೂ ಹಿಂದಿ (ಮೇರಿ ಅವಾಜ್ ಸುನೋ) ಭಾಷೆಗಳಿಗೆ ರೀಮೇಕ್ ಆಗಿದೆ.

ಈಚಿತ್ರದಲ್ಲಿನ ಅಮೋಘ ಅಭಿನಯಕ್ಕಾಗಿ ಅಂಬರೀಶ್ ಅವರಿಗೆ ರಾಜ್ಯ ಪ್ರಶಸ್ತಿ, ಅತ್ಯುತ್ತಮ ಚಿತ್ರಕಥೆ (ಎಸ್.ವಿ ರಾಜೇಂದ್ರ ಬಾಬು) ಹಾಗೂ ಅತ್ಯುತ್ತಮ ಛಾಯಾಗ್ರಹಣ (ಪಿ.ಎಸ್ ಪ್ರಕಾಶ್) ಪ್ರಶಸ್ತಿಗಳಿಗೂ ಪಾತ್ರವಾಗಿದೆ. (ಏಜೆನ್ಸೀಸ್)

English summary
Rebel Star Ambareesh's one of the best movie 'Antha' (1981) is re-releasing after 30 years on 30th May, to mark the 63rd birthday of the actor. The film went on become a huge success and is viewed as a milestone in Ambareesh's career.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada