For Quick Alerts
  ALLOW NOTIFICATIONS  
  For Daily Alerts

  9 ಗಂಟೆಗೆ ಅಂಬಿ ಮೃತ ದೇಹ ಬೆಂಗಳೂರಿಗೆ : ಮಧ್ಯಾಹ್ನದ ವೇಳೆಗೆ ಅಂತ್ಯಕ್ರಿಯೆ

  |

  ನಟ ಅಂಬರೀಶ್ ಅವರ ಪಾರ್ಥಿವ ಶರೀರದ ದರ್ಶನಕ್ಕೆ ಮಂಡ್ಯದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಇಡೀ ರಾತ್ರಿ ಜನ ಸಾಗರ ಹರಿದು ಬಂದು ತಮ್ಮ ಪ್ರೀತಿಯ ನಾಯಕನ ಅಂತಿಮ ದರ್ಶನ ಪಡೆದರು. ಬೆಳಗ್ಗೆ ಆದರೂ ಜನರ ದಂಡು ಮುಗಿಯಲಿಲ್ಲ. ಆ ಮಟ್ಟಿನ ಜನರು ಅಂಬಿಯನ್ನು ಕೊನೆಯ ಬಾರಿ ನೋಡಲು ಬಂದಿದ್ದರು.

  ಮಂಡ್ಯದಿಂದ 9 ಗಂಟೆ ಸುಮಾರಿಗೆ ಅಂಬರೀಶ್ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗುವುದು. ಅಲ್ಲಿಂದ ಸೇನಾ ಹೆಲಿಕಾಫ್ಟರ್ ಮೂಲಕ ಮೃತದೇಹ ಎಚ್ ಎ ಎಲ್ ಏರ್ ಪೋರ್ಟ್ ತಲುಪುತ್ತದೆ. ಬಳಿಕ ಕಂಠೀರವ ಕ್ರೀಡಾಂಗಣಕ್ಕೆ ಅದನ್ನು ರವಾನೆ ಮಾಡಲಾಗುವುದು.

  ನಂತರ ಮೆರವಣಿಗೆ ಮೂಲಕ ಕಂಠೀರವ ಸ್ಟೂಡಿಯೋಗೆ ತೆಗೆದುಕೊಂಡು ಹೋಗಿ ಅಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ. ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗುವುದಿಲ್ಲ. ಕಂಠೀರವ ಕ್ರೀಡಾಂಗಣದಿಂದ ಕಂಠೀರವ ಸ್ಟೂಡಿಯೋಗೆ ಮೆರವಣಿಗೆ ಮೂಲಕ ಪಾರ್ಥಿವ ಶರೀರ ತರಲಾಗುವುದು.

  ಕಂಠೀರವ ಸ್ಟೂಡಿಯೋ ಇಂದು ಮಧ್ಯಾಹ್ನನ ವೇಳೆಗೆ ಅಂತ್ಯಕ್ರಿಯೆ ನಡೆಸಲಾಗುವುದು. ಈಗಾಗಲೇ ಎಲ್ಲ ತಯಾರಿಗಳು ನಡೆದಿದ್ದು, ಒಕ್ಕಲಿಗ ಸಂಪ್ರದಾಯದಂತೆ ಅಗ್ನಿ ಸ್ವರ್ಶ ಮಾಡಲಾಗುವುದು.

  English summary
  Actor Ambareesh body will arrive to bangalore today at 12 PM

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X