»   » ಬೆಂಗಳೂರಿನಲ್ಲಿ ಅಂಬರೀಶ್ ಪ್ರತ್ಯಕ್ಷ: ಮಧ್ಯಾಹ್ನ ದಿಢೀರ್ ಪ್ರೆಸ್ ಮೀಟ್

ಬೆಂಗಳೂರಿನಲ್ಲಿ ಅಂಬರೀಶ್ ಪ್ರತ್ಯಕ್ಷ: ಮಧ್ಯಾಹ್ನ ದಿಢೀರ್ ಪ್ರೆಸ್ ಮೀಟ್

Posted By:
Subscribe to Filmibeat Kannada

ಕಡೆಗೂ ರೆಬೆಲ್ ಸ್ಟಾರ್ ಅಂಬರೀಶ್ ಪ್ರತ್ಯಕ್ಷವಾಗಿದ್ದಾರೆ. ಕಳೆದ ಮೂರ್ನಾಲ್ಕು ವಾರಗಳಿಂದ 'ನಾಪತ್ತೆ' ಆಗಿದ್ದ 'ಮಂಡ್ಯದ ಗಂಡು' ಇವತ್ತು ಬೆಂಗಳೂರಿಗೆ ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಶ್ವ ಕನ್ನಡ 'ಅಕ್ಕ' ಸಮ್ಮೇಳನದಲ್ಲಿ ಭಾಗವಹಿಸಲು ಸೆಪ್ಟೆಂಬರ್ ಮೊದಲ ವಾರ ಅಮೇರಿಕಾಗೆ ಅಂಬರೀಶ್ ತೆರಳಿದ್ದರು. 'ಅಕ್ಕ' ಸಮ್ಮೇಳನ ಮುಗಿದ ಬಳಿಕ ಆರೋಗ್ಯ ತಪಾಸಣೆಗಾಗಿ ಅಮೇರಿಕಾದಲ್ಲೇ ಇದ್ದರು ಎಂಬ ಸುದ್ದಿ ಹರಿದಾಡಿದ್ದರೂ, ಈವರೆಗೂ ಅಂಬರೀಶ್ ಎಲ್ಲೂ ಪತ್ತೆ ಆಗಿರ್ಲಿಲ್ಲ.

ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಮಂಡ್ಯ ಜಿಲ್ಲೆ ಹೊತ್ತಿ ಉರಿಯುತ್ತಿದ್ದರೂ, ತಲೆ ಕೆಡಿಸಿಕೊಳ್ಳದ ಅದೇ ಮಂಡ್ಯ ಕ್ಷೇತ್ರದ ಶಾಸಕರಾಗಿರುವ ಅಂಬರೀಶ್ ಇಂದು ಮಧ್ಯಾಹ್ನ ಪತ್ರಿಕಾಗೋಷ್ಟಿ ಕರೆದಿದ್ದಾರೆ. ಮುಂದೆ ಓದಿ....

ಇಂದು ಪತ್ರಿಕಾಗೋಷ್ಟಿ ಕರೆದ 'ಮಂಡ್ಯ' ಶಾಸಕ ಅಂಬರೀಶ್

ಇಷ್ಟು ದಿನ 'ಕಾಣದಂತೆ ಮಾಯವಾಗಿದ್ದ' ಅಂಬರೀಶ್ ಇಂದು ಮಧ್ಯಾಹ್ನ 3.30ಕ್ಕೆ ಜಯನಗರದಲ್ಲಿ ಇರುವ ಅವರ ನಿವಾಸದಲ್ಲಿ ಪತ್ರಿಕಾ ಹಾಗೂ ಮಾಧ್ಯಮ ಮಿತ್ರರ ಜೊತೆ ಮಾತನಾಡಲಿದ್ದಾರೆ. [ಕಾವೇರಿ ವಿಶೇಷ ಅಧಿವೇಶನ: 'ಮಂಡ್ಯದ ಗಂಡು' ಅಂಬರೀಶ್ ನಾಪತ್ತೆ]

'ಕಾವೇರಿ' ಕುರಿತು ಅಂಬಿ ಮಾತಾಡ್ತಾರಾ?

ಮಂಡ್ಯ ಕ್ಷೇತ್ರದ ಶಾಸಕರಾಗಿದ್ದರೂ, ಈವರೆಗೂ ರೈತರಿಗೆ ಸಾಥ್ ನೀಡದ ಅಂಬರೀಶ್ ಇಂದು 'ಕಾವೇರಿ' ವಿವಾದದ ಕುರಿತು ಮೌನ ಮುರಿಯುತ್ತಾರಾ? ನೋಡೋಣ....

[ಅಂಬರೀಶಣ್ಣ...ಎಲ್ಲೇ ಇದ್ದರೂ ದಯವಿಟ್ಟು ಮಂಡ್ಯಗೆ ಬನ್ನಿ, ಪ್ಲೀಸ್..]

ಸರ್ವ ಪಕ್ಷ ಸಭೆಗೆ ಪಾಲ್ಗೊಂಡಿಲ್ಲ?

ಅಂಬರೀಶ್ ಬೆಂಗಳೂರಿಗೆ ಕಾಲಿಟ್ಟಿರುವುದೇ ಇಂದು ಮಧ್ಯಾಹ್ನ 2.30ರ ಸುಮಾರಿಗೆ. ಹೀಗಾಗಿ, ಇಂದು ಬೆಳಗ್ಗೆ 9.30ಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ರವರು ಕರೆದಿದ್ದ ಸರ್ವ ಪಕ್ಷ ಸಭೆಯಲ್ಲಿ ಅಂಬರೀಶ್ ಪಾಲ್ಗೊಳ್ಳಲು ಸಾಧ್ಯ ಆಗ್ಲಿಲ್ಲ.

ಇಷ್ಟು ದಿನ ಎಲ್ಲಿದ್ದರು?

ಇಷ್ಟು ದಿನ ಅಂಬರೀಶ್ ಎಲ್ಲಿದ್ದರು? ಏನ್ ಮಾಡುತ್ತಿದ್ದರು? ಕಾವೇರಿ ವಿವಾದದ ಕುರಿತು ಮೌನ ವಹಿಸಿದ್ದು ಯಾಕೆ? ಎಂಬ ಪ್ರಶ್ನೆಗಳಿಗೆ ಪತ್ರಿಕಾಗೋಷ್ಟಿಯಲ್ಲಿ ಅಂಬರೀಶ್ ರವರೇ ಉತ್ತರ ನೀಡಬೇಕು.

ಮಂಡ್ಯಗೆ ಹೋಗ್ತಾರೋ? ಇಲ್ವೋ?

ಇನ್ಮುಂದೆ ಆದರೂ ಮಂಡ್ಯಗೆ ಹೋಗಿ ರೈತರ ಸಮಸ್ಯೆಗಳಿಗೆ ಅಂಬರೀಶ್ ಕಿವಿಗೊಡುತ್ತಾರಾ ಅಂತ ಕಾದು ನೋಡ್ಬೇಕು.

'ದೊಡ್ಮನೆ ಹುಡ್ಗ'ನ ಪ್ರಭಾವ?

ಕಾವೇರಿ ವಿವಾದ ಸಂಬಂಧ ಮೂರ್ನಾಲ್ಕು ಬಾರಿ ಸರ್ವ ಪಕ್ಷ ಸಭೆ ಕರೆದಿದ್ದರೂ ಅಂಬರೀಶ್ ಹಾಜರ್ ಆಗಿಲ್ಲ. ಕಾವೇರಿ ವಿಶೇಷ ಅಧಿವೇಶನದಲ್ಲೂ ಪಾಲ್ಗೊಳ್ಳಲಿಲ್ಲ. 'ಅಂಬರೀಶಣ್ಣ, ಪ್ಲೀಸ್ ಮಂಡ್ಯಗೆ ಬನ್ನಿ' ಅಂತ ಅಭಿಮಾನಿಗಳು ಗೋಗರೆದು ಕರೆದರೂ ಅಂಬರೀಶ್ ಬರ್ಲಿಲ್ಲ. ಹೋರಾಟಗಾರರು ಧಿಕ್ಕಾರ ಕೂಗಿದರೂ, ಅಂಬಿ ಕ್ಯಾರೇ ಎನ್ನಲಿಲ್ಲ. ಈಗ ಪತ್ರಿಕಾಗೋಷ್ಟಿ ಮಾಡಲು ಮುಂದಾಗಿದ್ದಾರೆ ಅಂದ್ರೆ ಅದಕ್ಕೆ 'ದೊಡ್ಮನೆ ಹುಡ್ಗ' ಕಾರಣ ಎನ್ನಬಹುದೇ? [ಅಂಬರೀಶ್ ವಿರುದ್ಧ ಆಕ್ರೋಶ: 'ದೊಡ್ಮನೆ ಹುಡ್ಗ' ಚಿತ್ರಕ್ಕೆ ಕಂಟಕ]

ಮಂಡ್ಯದಲ್ಲಿ 'ದೊಡ್ಮನೆ ಹುಡ್ಗ' ಬಿಡುಗಡೆಗೆ ಕಂಟಕ

ಮಂಡ್ಯದಲ್ಲಿ 'ದೊಡ್ಮನೆ ಹುಡ್ಗ' ಚಿತ್ರ ಬಿಡುಗಡೆ ಮಾಡಿದರೆ, ಚಿತ್ರಮಂದಿರಕ್ಕೆ ಮುತ್ತಿಗೆ ಹಾಕುವುದಾಗಿ ಕಾವೇರಿ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ, ಈಗಾಗಲೇ ನಿಲ್ಲಿಸಲಾಗಿದ್ದ ಅಂಬರೀಶ್ ಕಟೌಟ್ ಗಳನ್ನ ಚೂರು ಚೂರು ಮಾಡಿ ಬೆಂಕಿ ಹಚ್ಚಿರುವ ಕಾರಣ, ಅಂಬಿ ಇಲ್ಲದ 'ದೊಡ್ಮನೆ ಹುಡ್ಗ' ಚಿತ್ರದ ಪೋಸ್ಟರ್ ಗಳನ್ನ ಮಾತ್ರ ಮಂಡ್ಯದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಇದನ್ನೆಲ್ಲಾ ಸೂಕ್ಷವಾಗಿ ಗಮನಿಸಿರುವ ಅಂಬರೀಶ್ ಇಂದು ಪತ್ರಿಕಾಗೋಷ್ಟಿ ಕರೆದಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ['ದೊಡ್ಮನೆ ಹುಡ್ಗ' ರಿಲೀಸ್ ಗೆ ಮಂಡ್ಯದಲ್ಲಿ ಹ್ಯಾಂಡ್ ಬ್ರೇಕ್]

ಎಲ್ಲದಕ್ಕೂ ಉತ್ತರ 3.30ಕ್ಕೆ....

ಪ್ರಶ್ನೆಗಳು, ಅನುಮಾನಗಳು ಸಾವಿರ ಇರಬಹುದು...ಎಲ್ಲದಕ್ಕೂ ಇಂದು ಮಧ್ಯಾಹ್ನ 3.30ಕ್ಕೆ ಉತ್ತರ ಸಿಗಲಿದೆ. ನಾಲ್ಕು ವಾರಗಳ ಬಳಿಕ ಅಂಬರೀಶ್ ಪ್ರತ್ಯಕ್ಷವಾಗುತ್ತಿದ್ದಾರೆ. ನಿರೀಕ್ಷಿಸಿ.....

English summary
Kannada Actor, Congress Politician, Mandya MLA Ambareesh has called for Preemeet at 3.30 PM today (September 28th) at his residence in Jayanagar, Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada