»   » ಮಾಲಾಶ್ರೀ 'ಉಪ್ಪು-ಹುಳಿ-ಖಾರ' ಚಿತ್ರದ ಶೂಟಿಂಗ್ ಮತ್ತೆ ನಿಂತ್ಹೋಯ್ತು.!

ಮಾಲಾಶ್ರೀ 'ಉಪ್ಪು-ಹುಳಿ-ಖಾರ' ಚಿತ್ರದ ಶೂಟಿಂಗ್ ಮತ್ತೆ ನಿಂತ್ಹೋಯ್ತು.!

Posted By:
Subscribe to Filmibeat Kannada

'ಉಪ್ಪು-ಹುಳಿ-ಖಾರ' ಚಿತ್ರವನ್ನ ನೀವೆಲ್ಲಾ ಮರೆಯುವ ಹಾಗೇ ಇಲ್ಲ ಬಿಡಿ. ಯಾಕಂದ್ರೆ, ಮೂರು ದಿನಗಳಲ್ಲಿ ಮೂರ್ನಾಲ್ಕು ಪ್ರೆಸ್ ಮೀಟ್ ಮಾಡಿ, ನಟಿ ಮಾಲಾಶ್ರೀ ಗೊಳೋ ಅಂತ ಅತ್ತಿದ್ದು, ಪತಿ ರಾಮು ಗುಡುಗಿದ್ದು, ಕೆ.ಮಂಜು ಮತ್ತು ಇಮ್ರಾನ್ ಸರ್ದಾರಿಯಾ ಮೊದಲು ತಮ್ಮನ್ನ ತಾವು ಸಮರ್ಥಿಸಿಕೊಂಡು ನಂತರ 'ಕನಸಿನ ರಾಣಿ'ಗೆ 'ಸಾರಿ ಮೇಡಂ' ಅಂದಿದ್ದು ನಿಮಗೆಲ್ಲಾ ಪಿನ್ ಟು ಪಿನ್ ಗೊತ್ತಿದೆ.

ಅಂದು ಎಲ್ಲಾ ವಿವಾದಗಳಿಗೆ ಫುಲ್ ಸ್ಟಾಪ್ ಇಟ್ಟು ಶೂಟಿಂಗ್ ಶುರು ಮಾಡಿದ್ದ 'ಉಪ್ಪು ಹುಳಿ ಖಾರ' ಸಿನಿಮಾ ಇಂದು ಮತ್ತೆ ಶೂಟಿಂಗ್ ನಿಲ್ಲಿಸಿದೆ. [ತುರ್ತು ಸುದ್ದಿಗೋಷ್ಠಿ ಕರೆದು ನಟಿ ಮಾಲಾಶ್ರೀ ಕಣ್ಣೀರಿಟ್ಟಿದ್ದು ಯಾಕೆ?]

ಅದಕ್ಕೆ ಕಾರಣ ಏನು ಎಂಬುದನ್ನ ಸಂಪೂರ್ಣವಾಗಿ ಹೇಳ್ತೀವಿ, ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ ಓದಿರಿ....

'ಉಪ್ಪು ಹುಳಿ ಖಾರ' ಸಿನಿಮಾದ ಶೂಟಿಂಗ್ ನಿಂತಿದ್ದು ಯಾಕೆ?

ನಿಮಗೆ ನೆನಪಿದ್ದರೆ, ಇಂದು ಕನ್ನಡ ಚಿತ್ರೋದ್ಯಮ ಬಂದ್ ಆಗಿದೆ. ರೆಬೆಲ್ ಸ್ಟಾರ್ ಅಂಬರೀಶ್ ರವರನ್ನ ಕ್ಯಾಬಿನೆಟ್ ನಿಂದ ಕೈಬಿಟ್ಟಿದ್ದಕ್ಕೆ ಇವತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ 'ಸ್ಯಾಂಡಲ್ ವುಡ್ ಬಂದ್' ಮಾಡುವಂತೆ ಸೂಚನೆ ನೀಡಿದೆ. ಅದರಂತೆ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಯಾವುದೇ ಚಿತ್ರದ ಚಿತ್ರೀಕರಣ ನಡೆಯುವುದಿಲ್ಲ. [ಕ್ಯಾಬಿನೆಟ್ ನಿಂದ ಅಂಬರೀಶ್ ಡ್ರಾಪ್: ಟ್ವಿಟ್ಟರ್ ನಲ್ಲಿ ಗುಡುಗಿದ ಪತ್ನಿ ಸುಮಲತಾ]

ಹೀಗಾಗಿ, 'ಉಪ್ಪು ಹುಳಿ ಖಾರ' ಶೂಟಿಂಗ್ ಸ್ಟಾಪ್.!

ನಿಜ ಹೇಳುವುದಾದರೆ, 'ಉಪ್ಪು ಹುಳಿ ಖಾರ' ಚಿತ್ರತಂಡಕ್ಕೆ ಇಂದು 'ಸ್ಯಾಂಡಲ್ ವುಡ್ ಬಂದ್' ಎನ್ನುವ ಮಾಹಿತಿ ಇರ್ಲಿಲ್ಲ. ಮಹಾಲಕ್ಷ್ಮಿ ಲೇಔಟ್ ನಲ್ಲಿ ಇಂದು ಶೂಟಿಂಗ್ ಫಿಕ್ಸ್ ಆಗಿತ್ತು. ಎಲ್ಲರೂ ಶೂಟಿಂಗ್ ಸ್ಪಾಟ್ ಗೆ ಬಂದಿದ್ದರು. ನಂತರ ಇಂದು 'ಬಂದ್' ಅಂತ ಗೊತ್ತಾದ್ಮೇಲೆ ಚಿತ್ರೀಕರಣಕ್ಕೆ ಬ್ರೇಕ್ ಹಾಕಿದ್ದಾರೆ. [ಸಂಪುಟದಿಂದ ಅಂಬರೀಶ್ ಕಿಕ್ ಔಟ್: ಕನ್ನಡ ಚಿತ್ರೋದ್ಯಮ ಬಂದ್.!]

'ಬೆಂಗಳೂರು ಅಂಡರ್ ವರ್ಲ್ಡ್' ಕೂಡ ನಿಲ್ತು.!

ಅಂಬರೀಶ್ ರವರಿಗೆ ಬೆಂಬಲ ಸೂಚಿಸುವ ಸಲುವಾಗಿ ಆದಿತ್ಯ ನಟನೆಯ 'ಬೆಂಗಳೂರು ಅಂಡರ್ ವರ್ಲ್ಡ್' ಸಿನಿಮಾ ಕೂಡ ಇಂದು ಶೂಟಿಂಗ್ ನಿಲ್ಲಿಸಿದೆ.

'ಸಂತು Straight Forward' ಶೂಟಿಂಗ್ ಸ್ಥಗಿತ

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅಭಿನಯದ 'ಸಂತು Straight Forward' ಚಿತ್ರದ ಶೂಟಿಂಗ್ ಕೂಡ ಇಂದು ಸ್ಥಗಿತಗೊಂಡಿದೆ.

ಅಂಬರೀಶ್ ಗೆ ಜೈ ಎಂದ 'ಕಿರಿಕ್ ಪಾರ್ಟಿ'

ಅಂಬರೀಶ್ ರವರಿಗೆ ಜೈ ಎನ್ನುತಾ ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ಚಿತ್ರದ ಶೂಟಿಂಗ್ ಕೂಡ ಇಂದು ನಿಲ್ಲಿಸಲಾಗಿದೆ.

ಇಡೀ ಸ್ಯಾಂಡಲ್ ವುಡ್ ಸಪೋರ್ಟ್.!

ಬರೀ ಈ ಚಿತ್ರಗಳು ಮಾತ್ರ ಅಲ್ಲ, ಶೂಟಿಂಗ್ ಹಂತದಲ್ಲಿರುವ ಎಲ್ಲಾ ಚಿತ್ರಗಳ ಶೂಟಿಂಗ್ ಕೂಡ ಇಂದು ಸ್ಟಾಪ್ ಮಾಡಿ 'ರೆಬೆಲ್ ಸ್ಟಾರ್' ಗೆ ಬೆಂಬಲ ಸೂಚಿಸಿದೆ.

English summary
Since, Kannada Actor, Congress Politician, Housing Minister Ambareesh dropped from C.M Siddaramaiah's Cabinet, Karnataka Film Chamber of Commerce has called for Kannada Film Industry Bandh today (June 20th). Hence, Kannada Films such as 'Uppu Huli Khara', 'Santhu Straight Forward', 'Bangalore Underworld', 'Kirik Party' shooting has stopped.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada