For Quick Alerts
  ALLOW NOTIFICATIONS  
  For Daily Alerts

  ಅಂಬಿ ಸಾವಿನ ಸುದ್ದಿ ಕೇಳಿ ಮನನೊಂದ ಅಭಿಮಾನಿ ಆತ್ಮಹತ್ಯೆ

  |

  ಡಾ ರಾಜ್ ಕುಮಾರ್ ಇಹಲೋಕ ತ್ಯಜಿಸಿದಾಗ ಹಲವು ಅಭಿಮಾನಿಗಳು ಆತ್ಮಹತ್ಯೆ ಮಾಡಿದ್ದರು. ಆ ಘಟನೆ ಮತ್ತೆ ಮರುಕಳಿಸಬಾರದು ಎಂದು ಆಲೋಚಿಸಿ ವಿಷ್ಣು ನಿಧನರಾದಾಗ ಭಾರಿ ಎಚ್ಚರಿಕೆ ತೆಗೆದುಕೊಳ್ಳಲಾಗಿತ್ತು. ಆದ್ರು, ಅಲ್ಲಿಯೂ ಕೆಲವು ದುರಂತಗಳು ಸಂಭವಿಸಿತ್ತು.

  ಈ ಎರಡು ಘಟನೆಗಳನ್ನ ಗಮನದಲ್ಲಿಟ್ಟಿಕೊಂಡು ಸರ್ಕಾರ ಮತ್ತು ಅಂಬರೀಶ್ ಅವರ ಕುಟುಂಬದವರು ಪದೇ ಪದೇ ಮನವಿ ಮಾಡಿಕೊಳ್ಳುತ್ತಿದೆ. ದಯವಿಟ್ಟು ಯಾರೂ ಯಾವ ರೀತಿ ಅಪಾಯವನ್ನ ಮಾಡಿಕೊಳ್ಳಬಾರದು ಎಂದು ಕೇಳಿಕೊಳ್ಳುತ್ತಿದ್ದಾರೆ.

  ಹಿರಿಯಣ್ಣ ಅಂಬಿ ಇನ್ನಿಲ್ಲ: ಕಂಬನಿ ಮಿಡಿದ ಕನ್ನಡ ಚಿತ್ರರಂಗ

  ಹೀಗಿದ್ದರೂ, ಮಂಡ್ಯದಲ್ಲಿ ಅಂಬರೀಶ್ ಅವರ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಅಂಬಿಯ ಅಪ್ಪಟ ಫ್ಯಾನ್ಸ್ ಆಗಿದ್ದ ವ್ಯಕ್ತಿಯೊಬ್ಬ, ತಮ್ಮ ನೆಚ್ಚಿನ ಸ್ಟಾರ್ ನಟ ಇನ್ನಿಲ್ಲ ಎಂಬ ಸುದ್ದಿ ಕೇಳಿದ ತೀರಾ ನೊಂದು ಸಾವುಗೀಡಾಗಿದ್ದಾರೆ. ಯಾರು ವ್ಯಕ್ತಿ.? ಎಲ್ಲಿ ನಡೆಯಿತು ಈ ಘಟನೆ.? ಮುಂದೆ ಓದಿ....

  ರೈಲಿಗೆ ತಲೆಕೊಟ್ಟು ಅಭಿಮಾನಿ ಸಾವು

  ರೈಲಿಗೆ ತಲೆಕೊಟ್ಟು ಅಭಿಮಾನಿ ಸಾವು

  ನಟ ಮಾಜಿ ಸಚಿವ ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ಅಭಿಮಾನಿಯೋರ್ವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮದ್ದೂರು ತಾಲೂಕಿನ ಹೊಟ್ಟೆ ಗೌಡನದೊಡ್ಡಿ ಗ್ರಾಮದಲ್ಲಿ ಈ ಘಟನೆ ಜರುಗಿದೆ. ಮೃತ ವ್ಯಕ್ತಿ ಹೊಟ್ಟೆ ಗೌಡನದೊಡ್ಡಿ ಗ್ರಾಮದ ತಮ್ಮಯ್ಯ ಎಂದು ತಿಳಿದು ಬಂದಿದೆ.

  ಅಂಬಿ ಅಂತ್ಯಕ್ರಿಯೆಗೆ ವಿದೇಶದಿಂದ ಬರ್ತಾರಾ 'ಯಜಮಾನ'.?

  ಶಾಂತಿ ಕಾಪಾಡುವಂತೆ ಸಿಎಂ ಮನವಿ

  ಶಾಂತಿ ಕಾಪಾಡುವಂತೆ ಸಿಎಂ ಮನವಿ

  'ಅಂಬರೀಶ್ ಅವರ ಮೇಲೆ ನೀವು ಇಟ್ಟಿರುವ ಪ್ರೀತಿಗೆ ಗೌರವ ನೀಡಿ, ಯಾರೊಬ್ಬರು ಆತ್ಮಹತ್ಯೆ ಮಾಡ್ಕೋಬೇಡಿ, ಏನೂ ಅಪಾಯ ಮಾಡಿಕೊಳ್ಳಬೇಡಿ. ನಿಮಗೊಂದು ಜೀವನ ಇದೆ, ನಿಮ್ಮ ತಂದೆ-ತಾಯಿಗೋಸ್ಕರ ನೀವು ಬದುಕುಬೇಕು ಅಂಬಿ ಇದನ್ನ ಒಪ್ಪುವುದಿಲ್ಲ' ಎಂದು ಮನವಿ ಮಾಡಿಕೊಂಡಿದ್ದಾರೆ.

  ಕೊನೆಯ ದಿನಗಳಲ್ಲಿ ಅಂಬಿಗಿದ್ದ ಎರಡು ಆಸೆ ಈಡೇರಲೇ ಇಲ್ಲ.!

  ನಿಮ್ಮ ಆಸೆಯಂತೆ ಮಂಡ್ಯಕ್ಕೆ ಬರ್ತೀವಿ

  ನಿಮ್ಮ ಆಸೆಯಂತೆ ಮಂಡ್ಯಕ್ಕೆ ಬರ್ತೀವಿ

  ಮಂಡ್ಯ ಜನರ ಆಸೆಯಂತೆ ಅಂಬರೀಶ್ ಅವರ ಪಾರ್ಥಿವ ಶರೀರವನ್ನ ಮಂಡ್ಯಕ್ಕೆ ತೆಗೆದುಕೊಂಡು ಬರಲಾಗುತ್ತಿದೆ. ನಿಮ್ಮ ಅಭಿಮಾನಕ್ಕಾಗಿ ಇದನ್ನ ಮಾಡುತ್ತಿದ್ದೇವೆ. ನಾಲ್ಕು ಗಂಟೆಗೆ ಮಂಡ್ಯದ ವಿಶ್ವೇಶ್ವರಯ್ಯ ಸ್ಟೇಡಿಯಂನಲ್ಲಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಅಲ್ಲಿಗೆ ಬಂದ ಮೇಲೆ ಇಲ್ಲೇ ಸಂಸ್ಕಾರ ಮಾಡಿ ಎಂದು ಒತ್ತಾಯ ಮಾಡಬೇಡಿ'' ಎಂದು ಸಿಎಂ ಹೇಳಿದ್ದಾರೆ.

  ರಾಜ್ ಸ್ಮಾರಕ ಪಕ್ಕದಲ್ಲೇ ಅಂಬರೀಶ್ ಸಮಾಧಿ: ಅಣ್ಣಾವ್ರ ಕುಟುಂಬ ಹೇಳಿದ್ದೇನು.?

  ಅಂಬಿ ಪ್ರೀತಿಗೆ ಗೌರವ ನೀಡಿ

  ಅಂಬಿ ಪ್ರೀತಿಗೆ ಗೌರವ ನೀಡಿ

  'ಅಂಬಿ ಪ್ರೀತಿ ಗೌರವ ಸಲ್ಲಿಸುವುದಾರೇ ನಿಮ್ಮ ಕುಟುಂಬಕ್ಕೆ ನೀವು ನೋವ ತರಬೇಡಿ. ಅಂಬರೀಶ್ ಅವರಿಗೆ ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕು ಎಂಬ ಆಸೆ ಇದೆ. ಮಂಡ್ಯದಲ್ಲಿ ಅಂತ್ಯಕ್ರಿಯೆ ಮಾಡಿದ್ರೆ, ಕರ್ನಾಟಕದ ಜನರು ಅಲ್ಲಿಗೆ ಬರುವುದು ಕಷ್ಟ. ದಯವಿಟ್ಟು ಶಾಂತಿಯಿಂದ ವರ್ತಿಸಿ, ಯಾವುದೇ ಅತಿರೇಕದ ವರ್ತನೆ ಮಾಡಬೇಡಿ'' ಎಂದು ಎಚ್ ಡಿ ಕುಮಾರಸ್ವಾಮಿ ಸ್ಪಷ್ಟಡಿಸಿದ್ದಾರೆ.

  ಅಂಬಿ ಪಾರ್ಥಿವ ಶರೀರದ ಮುಂದೆ ಕಣ್ಣೀರು ಹಾಕಿದ ರಜನಿಕಾಂತ್

  English summary
  Kannada Actor Former Minister Ambareesh (66) passes away. now, ambareesh fan committed suicide at madduru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X