'ದರ್ಶನ್ ದಂಪತಿ ಕುರಿತು ಶೀಘ್ರವೇ ಒಳ್ಳೆಯ ಸುದ್ದಿ ನೀಡುವೆ' - ಅಂಬರೀಶ್

By Harshitha

ಚಾಲೆಂಜಿಂಗ್ ಸ್ಟಾರ್ ದರ್ಶನ್ ದಂಪತಿಯ ಕಲಹ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಸದ್ಯದಲ್ಲೇ ಪ್ರಕರಣಕ್ಕೆ ಸುಖಾಂತ್ಯ ಹಾಡುವ ಸೂಚನೆ ನೀಡಿದ್ದಾರೆ ರೆಬೆಲ್ ಸ್ಟಾರ್ ಅಂಬರೀಶ್.

ಇಂದು ನಟ ದರ್ಶನ್ ಜೊತೆ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದ ನಂತರ 'ಶೀಘ್ರದಲ್ಲೇ ಒಳ್ಳೆಯ ಸುದ್ದಿ ನೀಡುವೆ' ಅಂತ ಅಂಬರೀಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. [ಕೌಟುಂಬಿಕ ಕಲಹ ; ದರ್ಶನ್ ಕಿವಿ ಹಿಂಡಿದ 'ಅಪ್ಪಾಜಿ' ಅಂಬರೀಶ್]

ಮೊದಲು ಬೆಂಗಳೂರಿನ ತ್ಯಾಗರಾಜನಗರದಲ್ಲಿರುವ ಎಸಿಪಿ ಕಛೇರಿಗೆ ಭೇಟಿ ಕೊಟ್ಟು, ಮೊನ್ನೆ ಪ್ರೆಸ್ಟೀಜ್ ಸೌತ್ ರಿಡ್ಜ್ ಅಪಾರ್ಟ್ ಮೆಂಟ್ ನಲ್ಲಿ ಆದ ಗಲಾಟೆ ಬಗ್ಗೆ ಪೊಲೀಸರಿಗೆ ವಿವರಣೆ ನೀಡಿದ ನಟ ದರ್ಶನ್, ಬಳಿಕ ಅಲ್ಲಿಂದ ನೇರವಾಗಿ ಜೆ.ಪಿ.ನಗರದಲ್ಲಿರುವ ಅಂಬರೀಶ್ ಮನೆ ಕಡೆಗೆ ನಡೆದರು. ಮುಂದೆ ಓದಿ...[ಸಂಥಿಂಗ್ ವಿತ್ ಶಾಮ್ ನಲ್ಲಿ ಮಲ್ಯ, ದರ್ಶನ್ ಬಗ್ಗೆ, ಕ್ಲಿಕ್ ಮಾಡಿ]

'ಅಪ್ಪಾಜಿ' ಆಶೀರ್ವಾದ ಪಡೆದ ನಟ ದರ್ಶನ್

'ಅಪ್ಪಾಜಿ' ಆಶೀರ್ವಾದ ಪಡೆದ ನಟ ದರ್ಶನ್

ಅಂಬರೀಶ್ ರನ್ನ 'ಅಪ್ಪಾಜಿ' ಅಂತ ಕರೆಯುವ ನಟ ದರ್ಶನ್, ಪೊಲೀಸರ ವಿಚಾರಣೆ ಬಳಿಕ ನೇರವಾಗಿ ಅಂಬರೀಶ್ ಮನೆಗೆ ಭೇಟಿ ಕೊಟ್ಟು ಅವರ ಆಶೀರ್ವಾದ ಪಡೆದರು. ['ಇನ್ಮುಂದೆ ಪತ್ನಿ ಜೊತೆ ಗಲಾಟೆ ಮಾಡಲ್ಲ' ಎಂದ ನಟ ದರ್ಶನ್]

ಅಂಬಿ ಜೊತೆ ಚರ್ಚೆ

ಅಂಬಿ ಜೊತೆ ಚರ್ಚೆ

ತಮ್ಮ ಕೌಟುಂಬಿಕ ಸಮಸ್ಯೆಗಳ ಬಗ್ಗೆ ಹಿರಿಯ ನಟ ಹಾಗೂ ವಸತಿ ಸಚಿವ ಅಂಬರೀಶ್ ಜೊತೆ ದರ್ಶನ್ ಚರ್ಚೆ ನಡೆಸಿದರು. ಇದೇ ವೇಳೆ ನಿರ್ಮಾಪಕ ಸಂದೇಶ್ ನಾಗರಾಜ್ ಕೂಡ ಹಾಜರಿದ್ದರು. [ಹೆಂಡತಿಯನ್ನು ಕೀಳು ಭಾಷೆಯಲ್ಲಿ ನಿಂದಿಸುವ "ದರ್ಶನ್" ಆಡಿಯೋ ಕ್ಲಿಪ್]

ಮಾಧ್ಯಮಗಳ ಜೊತೆ ಮಾತನಾಡದ ನಟ ದರ್ಶನ್

ಮಾಧ್ಯಮಗಳ ಜೊತೆ ಮಾತನಾಡದ ನಟ ದರ್ಶನ್

ಅಂಬರೀಶ್ ಜೊತೆ ಮಾತುಕತೆ ನಡೆಸಿದ ಬಳಿಕ ದರ್ಶನ್ ಸೀದಾ ತಮ್ಮ ಕಾರು ಕತ್ತಿ ಹೊರಟರು. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ['ಗಲಾಟೆ ಸಂಸಾರ'; ದರ್ಶನ್ ಬೆಟ್ಟು ಮಾಡುತ್ತಿರುವ 'ಅವರು' ಯಾರು?]

ಅಂಬರೀಶ್ ಏನಂದರು?

ಅಂಬರೀಶ್ ಏನಂದರು?

''ದರ್ಶನ್ ಕಡೆಯಿಂದ ಸಂಪೂರ್ಣ ಮಾಹಿತಿ ಕಲೆಹಾಕಿರುವೆ. ವಿಜಯಲಕ್ಷ್ಮಿ ಕಡೆಯಿಂದ ಮಾಹಿತಿ ಪಡೆಯುವೆ. ಅವರ ತಪ್ಪುಗಳು ಅವರಿಗೆ ಅರ್ಥವಾಗಿದೆ. ಎಲ್ಲವೂ ಸುಖಾಂತ್ಯ ಕಾಣುತ್ತೆ. ಅವರು ಚೆನ್ನಾಗಿರಲಿ ಅನ್ನೋದೇ ನಮ್ಮ ಹಾರೈಕೆ. ಪಾಸ್ಟ್ ಈಸ್ ಪಾಸ್ಟ್. ಶೀಘ್ರವೇ ಒಳ್ಳೆ ಸುದ್ದಿ ನೀಡುವೆ'' ಅಂತ ಅಂಬರೀಶ್, ದರ್ಶನ್ ಜೊತೆಗಿನ ಚರ್ಚೆ ಬಳಿಕ ಮಾಧ್ಯಮಗಳಿಗೆ ತಿಳಿಸಿದರು. [ಬ್ರೇಕಿಂಗ್ ನ್ಯೂಸ್ - ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ರಾ ದರ್ಶನ್?]

ನಿರ್ಮಾಪಕ ಸಂದೇಶ್ ನಾಗರಾಜ್ ಏನಂತಾರೆ?

ನಿರ್ಮಾಪಕ ಸಂದೇಶ್ ನಾಗರಾಜ್ ಏನಂತಾರೆ?

''ಇವತ್ತು ಚರ್ಚೆ ಮಾಡಿದಾಗ ದರ್ಶನ್ ಹೇಳಿದ್ದಾರೆ, 'ನನಗೂ ವಿಜಯಲಕ್ಷ್ಮಿಗೂ ಯಾವುದೇ ಸಮಸ್ಯೆ ಇಲ್ಲ. ಬೆಳಗ್ಗೆ ಕೂಡ ಚೆನ್ನಾಗಿ ಮಾತನಾಡಿದ್ದೇವೆ. ನೀವು ಹೇಗೆ ಹೇಳ್ತೀರೋ ಹಾಗೇ ಕೇಳ್ತೀನಿ' ಅಂತ. ಆದ್ದರಿಂದ ಪ್ರಕರಣ ಸುಖಾಂತ್ಯದಲ್ಲಿ ಮುಕ್ತಾಯ ಆಗಲಿದೆ. ಮಗು ಬಿಡುವುದಕ್ಕೆ ಇಬ್ರೂ ರೆಡಿಯಿಲ್ಲ. ಹೀಗಾಗಿ ಎಲ್ಲವೂ ಶುಭಾಂತ್ಯವಾಗಲಿದೆ'' ಅಂತಾರೆ ನಿರ್ಮಾಪಕ ಸಂದೇಶ್ ನಾಗರಾಜ್. [ನಟ ದರ್ಶನ್ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪತ್ನಿ ವಿಜಯಲಕ್ಷ್ಮಿ]

ಅಂಬರೀಶ್ ಮನೆ ಮುಂದೆ ಜನಸ್ತೋಮ

ಅಂಬರೀಶ್ ಮನೆ ಮುಂದೆ ಜನಸ್ತೋಮ

ಅಂಬರೀಶ್ ಮನೆಗೆ ದರ್ಶನ್ ಭೇಟಿ ಕೊಡುತ್ತಾರೆ ಅಂತ ತಿಳಿಯುತ್ತಿದ್ದ ಕೂಡಲೆ, ಜೆ.ಪಿ.ನಗರದಲ್ಲಿರುವ ಅಂಬರೀಶ್ ಮನೆ ಮುಂದೆ ಜನ ಜಮಾಯಿಸಿದ ಪರಿ ಇದು. [ಬಾಯ್ ಫ್ರೆಂಡ್ ಇದ್ದಾನಾ? ದರ್ಶನ್ ಪತ್ನಿ ವಿಜಯಲಕ್ಷ್ಮಿ ಏನಂದ್ರು ಗೊತ್ತಾ?]

ಮನೆ ಮೇಲೂ ಜನ!

ಮನೆ ಮೇಲೂ ಜನ!

ಅಂಬರೀಶ್ ರವರ ಮನೆಯ ಅಕ್ಕ-ಪಕ್ಕದಲ್ಲೂ ಜನರು ತುಂಬಿ ತುಳುಕುತ್ತಿದ್ದರು. [ನನ್ನ ಹೆಂಡ್ತಿ ವಿಜಯಲಕ್ಷ್ಮಿಗೆ ಪ್ರಿಯಕರನಿದ್ದಾನೆ ಎಂದ ದರ್ಶನ್]

ಎಲ್ಲರಿಗೂ ಒಂದೇ ಆಸೆ

ಎಲ್ಲರಿಗೂ ಒಂದೇ ಆಸೆ

ಹಿಂದಿನಂತೆ ದರ್ಶನ್ ದಂಪತಿ ಒಂದಾಗಿ ಸುಖ ಸಂಸಾರ ನಡೆಸಲಿ ಅನ್ನೋದು ಎಲ್ಲಾ ಅಭಿಮಾನಿಗಳ ಹಾರೈಕೆ.

More from Filmibeat

English summary
Following interrogation in Tyagarajanagar Police Station, Kannada Actor Darshan visited Karnataka Housing Minister, Actor Ambareesh's house and spoke over his marital discord. Ambareesh tried making peace between Darshan and Wife Vijayalakshmi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X