For Quick Alerts
  ALLOW NOTIFICATIONS  
  For Daily Alerts

  ಅಂಬರೀಶ್ ಇತ್ತೀಚೆಗಿನ ಕಾರ್ಯಕ್ರಮದ ಮೆಲುಕು

  By ಉದಯರವಿ
  |

  ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವ ನಟ ರೆಬೆಲ್ ಸ್ಟಾರ್ ಅಂಬರೀಶ್ ಈಗ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಅವರು ಸಂಪೂರ್ಣ ಗುಣಮುಖರಾಗಿ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಅವರು ಆದಷ್ಟು ಬೇಗ ಚೇತರಿಕೊಳ್ಳಲಿ ಎಂಬುದು ನಮ್ಮೆಲ್ಲರ ಹಾರೈಕೆ. ಅವರು ಕೊನೆಯ ಬಾರಿ ಕಾಣಿಸಿಕೊಂಡ ಸಿನಿಮಾ ಕಾರ್ಯಕ್ರಮ ಯಾವುದು?

  ಮೂರು ತಿಂಗಳ ಹಿಂದೆ ಅವರು ಬಹಳ ಲವಲವಿಕೆಯಿಂದ ಕಾಣಿಸಿಕೊಂಡ ಕಾರ್ಯಕ್ರಮ 'ಸ್ಮಗ್ಲರ್' ಆಡಿಯೋ ರಿಲೀಸ್ ಫಂಕ್ಷನ್. ಈ ಕಾರ್ಯಕ್ರಮದಲ್ಲಿ ಅವರು ತಿಳಿಗುಲಾಬಿ ಬಣ್ಣದ ಶರ್ಟ್ ನಲ್ಲಿ ಜಲೀಲನ ಪಾತ್ರವನ್ನು ನೆನಪಿಸುವಂತಿತ್ತು ಅವರ ಗೆಟಪ್.

  ಅಂದು ಅವರು ಅದೆಷ್ಟು ಲವಲವಿಕೆಯಿಂದ ಕಾಣಿಸಿಕೊಂಡರು ಎಂದರೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರೂ ಅಂಬಿ ಮಾತುಗಳಿಗೆ ಬೆರಗಾದರು. ಅದರಲ್ಲೂ ಸ್ಮಗ್ಲರ್ ಚಿತ್ರದ ನಾಯಕಿ ಹಾಗೂ ನಿರ್ಮಾಪಕಿ ಪ್ರಿಯಾ ಹಾಸನ್ ಅವರ ಸಂಭ್ರಮಕ್ಕಂತೂ ಪಾರವೇ ಇರಲಿಲ್ಲ. ಸ್ಲೈಡ್ ನಲ್ಲಿ ಮತ್ತಷ್ಟು ವಿವರಗಳು...

  ಸ್ಮಗ್ಲರ್ ಆಡಿಯೋ ರೀಲೀಸ್ ನಲ್ಲಿ ಅಂಬಿ ಹೈಲೈಟ್

  ಸ್ಮಗ್ಲರ್ ಆಡಿಯೋ ರೀಲೀಸ್ ನಲ್ಲಿ ಅಂಬಿ ಹೈಲೈಟ್

  ಸ್ಮಗ್ಲರ್ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಅಭಿನಯ ಶಾರದೆ ಜಯಂತಿ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ, ದಕ್ಷಿಣ ಚಿತ್ರರಂಗದ ನಟ ಸುಮನ್, ನಿರ್ದೇಶಕ ಓಂ ಸಾಯಿ ಪ್ರಕಾಶ್ ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದರು. ಅಂದಿನ ಕಾರ್ಯಕ್ರಮ ಹೈಲೈಟ್ ಅಂಬರೀಶ್.

  ಪ್ರಿಯಾ ಹಾಸನ್ ಗೆ ಅಂಬಿ ಶುಭಹಾರೈಕೆ

  ಪ್ರಿಯಾ ಹಾಸನ್ ಗೆ ಅಂಬಿ ಶುಭಹಾರೈಕೆ

  ಅಂಬರೀಶ್ ಅವರು ಆಡಿಯೋ ರಿಲೀಸ್ ಮಾಡಿ ಪ್ರಿಯಾ ಹಾಸನ್ ಅವರಿಗೆ ಶುಭಹಾರೈಸಿದರು. ಬಳಿಕ ಅವರು ಮಾತನಾಡುತ್ತಾ, ಒಬ್ಬ ರೈತನ ಮಗಳು ಚಿತ್ರರಂಗಕ್ಕೆ ಬಂದು ನಿರ್ದೇಶಕಿ, ನಿರ್ಮಾಪಕಿ ಹಾಗೂ ನಟಿಯಾಗಿ ಗುರುತಿಸಿಕೊಂಡದ್ದು ಹೆಮ್ಮೆಯ ವಿಷಯ ಎಂದರು.

  ಕನ್ನಡಪರ ಹೋರಾಟದಲ್ಲೂ ಪ್ರಿಯಾ ಹಾಸನ್

  ಕನ್ನಡಪರ ಹೋರಾಟದಲ್ಲೂ ಪ್ರಿಯಾ ಹಾಸನ್

  ಇದಿಷ್ಟೇ ಅಲ್ಲದೆ ಕನ್ನಡಪರ ಹೋರಾಟ ಮಾಡಲು ನಾರಾಯಣಗೌಡ ಅವರ ಜೊತೆ ಕೈಜೋಡಿಸಿರುವುದು ಸಂತಸದ ಸಂಗತಿ. ಅವರು ಒಬ್ಬ ಒಳ್ಳೆಯ ಕೆಲಸಗಾರ್ತಿ. ಅವರಿಗೆ ಎಲ್ಲಾ ವಿಭಾಗಗಳಲ್ಲೂ ಗೆಲುವು ಸಿಗಲಿ. ಸ್ಮಗ್ಲರ್ ಚಿತ್ರದ ಮೂಲಕ ಇನ್ನಷ್ಟು ಗೆಲುವು ಸಿಗುವಂತಾಗಲಿ ಎಂದು ಹಾರೈಸಿದರು.

  ನನಗೆ ಯಾರೂ ಗಾಡ್ ಫಾದರ್ ಇಲ್ಲ

  ನನಗೆ ಯಾರೂ ಗಾಡ್ ಫಾದರ್ ಇಲ್ಲ

  ಚಿತ್ರರಂಗದಲ್ಲಿ ನನಗೆ ಯಾರೂ ಗಾಡ್ ಫಾರ್ ಇಲ್ಲ. ಇಂಡಸ್ಟ್ರಿಗೆ ಅಡಿಯಿಟ್ಟು ಹದಿಮೂರು ವರ್ಷಗಳಾಗಿವೆ. ಈಗ ಅಂಬರೀಶ್ ಅವರು ಸ್ಮಗ್ಲರ್ ಆಡಿಯೋ ಬಿಡುಗಡೆ ಬಂದು ಇನ್ನಷ್ಟು ಸ್ಫೂರ್ತಿ ತುಂಬಿದ್ದಾರೆ. ಅವರ ಪ್ರೋತ್ಸಾಹ ನನಗೆ ಇನ್ನಷ್ಟು ಪ್ರೇರಣೆ ಕೊಟ್ಟಿದೆ ಎಂದಿದ್ದರು ಪ್ರಿಯಾ ಹಾಸನ್.

  ಎಲ್ಲಾ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುವ ಚಿತ್ರ

  ಎಲ್ಲಾ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುವ ಚಿತ್ರ

  ತಮ್ಮ ಸ್ಮಗ್ಲರ್ ಚಿತ್ರ ಎಲ್ಲ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಶೀಘ್ರವೇ ಪ್ರೇಕ್ಷಕರ ಮುಂದೆ ಬರುತ್ತದೆ ಎಂದಿದ್ದರು.

  English summary
  Rebel Star Ambareesh last seen photos from Smuggler FilmAudio Release event. Ambareesh is fast recovering and the doctors are giving him the best treatment. Please don't heed any rumours.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X