»   » ಡಾ.ರಾಜ್ ಮತ್ತು ಪುನೀತ್ ಬಗ್ಗೆ ಅಂಬರೀಶ್ ಮಾಡಿದ ಕಾಮೆಂಟ್ ಏನು?

ಡಾ.ರಾಜ್ ಮತ್ತು ಪುನೀತ್ ಬಗ್ಗೆ ಅಂಬರೀಶ್ ಮಾಡಿದ ಕಾಮೆಂಟ್ ಏನು?

Posted By:
Subscribe to Filmibeat Kannada

ಸಿನಿಮಾ ಜೊತೆ ಜೊತೆಗೆ ರಾಜಕೀಯ ರಂಗದಲ್ಲೂ ರೆಬೆಲ್ ಸ್ಟಾರ್ ಅಂಬರೀಶ್ ಸಖತ್ ಬಿಜಿ. ಆದರೂ, ದಶಕಗಳಿಂದ ಎರಡನ್ನೂ ಬ್ಯಾಲೆನ್ಸ್ ಮಾಡುವಲ್ಲಿ ಅಂಬರೀಶ್ ಯಶಸ್ವಿ ಆಗಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ರಾಜಕಾರಣಿ ಆಗಿರುವ ಅಂಬರೀಶ್ 'ದೊಡ್ಮನೆ ಹುಡ್ಗ' ಚಿತ್ರದಲ್ಲಿ ಅಭಿನಯಿಸಿದ್ದಾರೆ. 'ದೊಡ್ಮನೆ ಹುಡ್ಗ' ಚಿತ್ರದ ಪತ್ರಿಕಾಗೋಷ್ಟಿಗೆ ಆಗಮಿಸಿದ ಅಂಬರೀಶ್, ತಮಗೆ ಸಹಕಾರ ನೀಡಿದ ಪುನೀತ್ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. [ಅಂದು ತಂದೆಗೆ ನಾಯಕಿ, ಇಂದು ಮಗನಿಗೆ ತಾಯಿ: ಸುಮಲತಾ ದಿಲ್ ಖುಷ್!]


ಇದೇ ಸಂದರ್ಭದಲ್ಲಿ ಪುನೀತ್ ತಂದೆ 'ದಿ ಲೆಜೆಂಡ್' ಡಾ.ರಾಜ್ ಕುಮಾರ್ ಜೊತೆಗೆ 'ಒಡಹುಟ್ಟಿದವರು' ಸಿನಿಮಾದಲ್ಲಿ ನಟಿಸಿದ ಅನುಭವವನ್ನ ಮೆಲುಕು ಹಾಕಿದರು. ಓವರ್ ಟು ಅಂಬರೀಶ್....[ರಿಲಯನ್ಸ್ ನಿಂದ ಕಾರಿನ ವಿಮೆ ಮಾಡಿಸಿ, ನಿರಾಳವಾಗಿರಿ]


ಸೂರಿಗೆ ಥ್ಯಾಂಕ್ಸ್

''ದೊಡ್ಮನೆ ಹುಡ್ಗ' ಚಿತ್ರದಲ್ಲಿ ನನಗೆ ಪಾತ್ರ ಮಾಡಲು ಅವಕಾಶ ಕೊಟ್ಟ ಸೂರಿಗೆ ನಾನು ಥ್ಯಾಂಕ್ಸ್ ಹೇಳಲು ಬಯಸುತ್ತೇನೆ. ನನಗೂ ನಿರ್ಮಾಪಕ ಗೋವಿಂದು ರವರಿಗೂ ಬಹಳ ವರ್ಷಗಳಿಂದ ಪರಿಚಯ. ಸಿನಿಮಾ ನಂಟಿಲ್ಲ ನಮಗೆ, ಬೇರೆ ನಂಟಿದೆ. ಅವರು ಬಂದು ಕೇಳಿದಾಗ ನಾನು ಸಂತೋಷದಿಂದ ಒಪ್ಪಿಕೊಂಡೆ'' - ಅಂಬರೀಶ್


[Must Read : ರಿಲಯನ್ಸ್ ನಿಂದ ಕಾರಿನ ವಿಮೆ ಮಾಡಿಸಿ, ನಿರಾಳವಾಗಿರಿ]


43 ವರ್ಷಗಳಲ್ಲಿ ಮೊದಲ ಬಾರಿ...

''ನಾನು ಚಿತ್ರರಂಗಕ್ಕೆ ಬಂದು 43 ವರ್ಷಗಳು ಆದ್ಮೇಲೆ ಮೊದಲ ಬಾರಿ ಪುನೀತ್ ಜೊತೆ ಆಕ್ಟ್ ಮಾಡ್ತಿರೋದು. ಇದು ಪುನೀತ್ ರಾಜ್ ಕುಮಾರ್ ರವರ 25 ನೇ ಸಿನಿಮಾ ಅಂತ ಈಗ ಗೊತ್ತಾಯ್ತು'' - ಅಂಬರೀಶ್


25 ರ ನಂಟು ಬಿಚ್ಚಿಟ್ಟ ಅಂಬರೀಶ್

''ನಾನು ಸಿನಿಮಾ ರಂಗಕ್ಕೆ ಬಂದು 25 ವರ್ಷಗಳ ನಂತರ ಪುನೀತ್ ತಂದೆ ಜೊತೆ 'ಒಡಹುಟ್ಟಿದವರು' ಸಿನಿಮಾದಲ್ಲಿ ಆಕ್ಟ್ ಮಾಡಿದ್ದು. ಈಗ ಪುನೀತ್ ಜೊತೆ 25ನೇ ಸಿನಿಮಾದಲ್ಲಿ ಆಕ್ಟ್ ಮಾಡ್ತಿದ್ದೇನೆ. ಇದು ಒಂಥರಾ ಕೋ-ಇನ್ಸಿಡೆಂಟ್. ಬಹಳ ಸಂತೋಷ ಆಗ್ತಿದೆ'' - ಅಂಬರೀಶ್


ನಾನು ಬರೋದು ಲೇಟು!

''ಶೂಟಿಂಗ್ ಶುರು ಮಾಡುವ ಮುನ್ನವೇ ನಾನು ಹೇಳಿದ್ದೆ, ''ಪುನೀತ್ ನೋಡಪ್ಪಾ, ನೀನು ದೊಡ್ಡ ಹೀರೋ. ನನಗೆ ರಾಜಕೀಯದ ಒತ್ತಡ ಇದೆ. ನಾನು ಸೆಟ್ ಗೆ ಬರುವುದು ತಡ ಆಗುತ್ತೆ'' ಅಂತ'' - ಅಂಬರೀಶ್


ಪುನೀತ್ ದೊಡ್ಡ ಗುಣ

''ಪುನೀತ್ ದೊಡ್ಡ ಗುಣ ಏನು ಅಂದ್ರೆ ದೊಡ್ಡ ನಟ ಆಗಿದ್ರೂ ಪ್ರಸಿದ್ಧಿ, ಪ್ರಖ್ಯಾತಿ ಎಲ್ಲಾ ಇದ್ದರೂ, ''ಮಾಮ ನೀವು ಯಾವಾಗ ಬಂದ್ರೂ, ಅವಾಗ್ಲೇ ಶೂಟಿಂಗ್'' ಅಂದ್ರು. ಹಾಗೇ ಅವರ ತಂದೆ ಕೂಡ'' - ಅಂಬರೀಶ್


ಡಾ.ರಾಜ್ ಬಗ್ಗೆ ಅಂಬರೀಶ್ ಮಾತು

''ಒಡಹುಟ್ಟಿದವರು' ಸಿನಿಮಾದ ಶೂಟಿಂಗ್ ಮಾಡುವಾಗ ಭಗವಾನ್ ರವರು 'ನಾಳೆ ನಿಂದೇ ಮೊದಲ ಶಾಟ್' ಅಂತ ಬಂದು ಹೇಳೋರು. ''ರೀ, ನಂದು ಯಾಕೆ, ಅವರದ್ದು ತೆಗೀರಿ'' ಅಂತ ನಾನು ರಾಜ್ ಕುಮಾರ್ ರವರನ್ನ ತೋರಿಸಿ ಹೇಳುತ್ತಿದೆ. ಆಗ ಭಗವಾನ್, ರಾಜ್ ಅವರತ್ತ ತಿರುಗಿ, ''ಬಾಸ್, ಯಾವಾಗ ಶೂಟಿಂಗ್'' ಅಂತ ಕೇಳಿದ್ರೆ ರಾಜ್ ಕುಮಾರ್ ''Any Time'' ಎನ್ನುತ್ತಿದ್ದರು'' - ಅಂಬರೀಶ್


ಶ್ರದ್ಧೆ ಇಂದ ಸಿನಿಮಾ ಮಾಡಿದ್ದಾರೆ

''ಹಾಗೆ ಮಗ ಕೂಡ ನನಗೆ ಅದೇ ರೀತಿ ಸಹಕಾರ ಮಾಡಿದ್ದಾರೆ. ಸೂರಿ ಚಿಕ್ಕವನಾದರೂ, ಬಹಳ ನಮ್ರತೆ ಇಂದ ಶ್ರದ್ಧೆಯಿಂದ ಸಿನಿಮಾ ಮಾಡಿದ್ದಾರೆ'' - ಅಂಬರೀಶ್


English summary
Kannada Actor, Congress Politician Ambareesh praised Puneeth Rajkumar and his father Dr.Rajkumar during the Press meet of 'Doddmane Hudga' held at Hotel Citadel on August 25th.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada