»   » ''ನಿರ್ಮಾಪಕರು ಭಿಕ್ಷುಕರು'' - ಮಂಡ್ಯದ ಗಂಡು ಅಂಬರೀಶ್

''ನಿರ್ಮಾಪಕರು ಭಿಕ್ಷುಕರು'' - ಮಂಡ್ಯದ ಗಂಡು ಅಂಬರೀಶ್

Posted By:
Subscribe to Filmibeat Kannada

ಅಂಬರೀಶ್ 'ರೆಬೆಲ್' ಆಗಿದ್ದಾರೆ. ನಿರ್ಮಾಪಕರ ವಿರುದ್ಧ ಮಂಡ್ಯದ ಗಂಡು ಸಿಡಿದೆದ್ದಿದ್ದಾರೆ. ''ನಿರ್ಮಾಪಕರು ಭಿಕ್ಷುಕರು. ಅವರಿಗೆ ಆಯ್ಕೆ ಮಾಡುವ ಅಧಿಕಾರ ಇಲ್ಲ. ಕೊಟ್ಟಿದ್ದನ್ನ ಮಾತ್ರ ತೆಗೆದುಕೊಳ್ಳಬೇಕು'' ಅಂತ ಅಂಬಿ ಖಾರವಾಗಿ ನುಡಿದಿದ್ದಾರೆ.

ಕಳೆದ 17 ದಿನಗಳಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಿರ್ಮಾಪಕರ ಪ್ರತಿಭಟನೆ ನಡೆಯುತ್ತಿದೆ. ಖಾಸಗಿ ವಾಹಿನಿಗಳು ಕನ್ನಡ ಚಿತ್ರಗಳ ಪ್ರಸಾರ ಹಕ್ಕುಗಳನ್ನ ಕೊಂಡುಕೊಳ್ಳುತ್ತಿಲ್ಲ. ಆದರೂ, ಸ್ಟಾರ್ ನಟರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿದ್ದಾರೆ. ನಿರ್ಮಾಪಕರ ಕಷ್ಟಕ್ಕೆ ಕಲಾವಿದರು ಸ್ಪಂದಿಸುತ್ತಿಲ್ಲ ಅಂತ ನಿರ್ಮಾಪಕರ ಸಂಘ ಬೀದಿಗಿಳಿದಿದೆ.

ಫಿಲ್ಮ್ ಚೇಂಬರ್ ನಲ್ಲಿ ನಿರ್ಮಾಪಕರು ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ನಿರ್ಮಾಪಕರು ಮತ್ತು ಕಲಾವಿದರ ನಡುವಿನ ಬಿಕ್ಕಟು ಪರಿಹಾರ ಮಾಡುವುದಕ್ಕೆ ಇಂದು ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ, ಕಲಾವಿದರ ಸಂಘದ ಅಧ್ಯಕ್ಷ ಅಂಬರೀಶ್ ಜೊತೆ ಚರ್ಚೆ ನಡೆಸಿದರು.

ಚರ್ಚೆ ಬಳಿಕ ರೆಬೆಲ್ ಸ್ಟಾರ್ 'ರೆಬೆಲ್' ಆಗಿ, ನಿರ್ಮಾಪಕರನ್ನ 'ಭಿಕ್ಷುಕ'ರಿಗೆ ಹೋಲಿಸಿದ್ದಾರೆ. ಅಂಬರೀಶ್ ಏನು ಹೇಳಿದರು? ಮುಂದೆ ಓದಿ.....

'Beggars have no choice'

''Beggars have no choice. You are not a chooser. You cant choose. ನಂಗೆ ಇದು ಬೇಕು. ಅದು ಬೇಕು ಅಂತ ಕೇಳುವ ಹಾಗಿಲ್ಲ. ಮುಂಚೆ ಎಲ್ಲಾ ಭಿಕ್ಷುಕರಿಗೆ ಒಂದು ರೂಪಾಯಿ ಹಾಕಿದ್ರೆ ತೆಗೆದುಕೊಂಡು ಹೋಗೋರು. ಈಗ ಹತ್ತು ರೂಪಾಯಿ ಹಾಕ್ಬೇಕು.'' ಅಂತ ಮಾಧ್ಯಮಗಳ ಮುಂದೆ ಅಂಬರೀಶ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. [''ರೆಬೆಲ್ ಸ್ಟಾರ್ ಅಂಬರೀಶ್ ಗೆ ಧಿಕ್ಕಾರ...ಧಿಕ್ಕಾರ...'']

ನಿರ್ಮಾಪಕರನ್ನ 'ಭಿಕ್ಷುಕ'ರಿಗೆ ಹೋಲಿಕೆ

''ಭಿಕ್ಷುಕರಿಗೆ ಆಯ್ಕೆ ಇರುವುದಿಲ್ಲ. ಅವರಿಗೆ ಆಯ್ಕೆ ಮಾಡುವ ಅಧಿಕಾರ ಇಲ್ಲ. ಕೊಟ್ಟಿದ್ದನ್ನ ಮಾತ್ರ ತೆಗೆದುಕೊಳ್ಳಬೇಕು'' ಅನ್ನುವ ಅರ್ಥದಲ್ಲಿ ಅಂಬರೀಶ್ ಮಾತನಾಡಿದ್ದಾರೆ ಅಂತ ಈಗ ವಿವಾದ ಭುಗಿಲೆದ್ದಿದೆ. ['ಡೆತ್ ನೋಟ್' ಬರೆದಿಟ್ಟು ಆಸ್ಪತ್ರೆ ಸೇರಿದ ನಿರ್ಮಾಪಕ]

ಅಂಬರೀಶ್ ಮನೆಯಲ್ಲಿ ಚರ್ಚೆ

ನಿರ್ಮಾಪಕರು ಮತ್ತು ಕಲಾವಿದರ ನಡುವಿನ ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೆಸಲು, ನಿರ್ಮಾಪಕರಾದ ಮುನಿರತ್ನ, ಕೆ.ಮಂಜು, ರಾಕ್ ಲೈನ್ ವೆಂಕಟೇಶ್ ಇಂದು ಮಧ್ಯಾಹ್ನ ಅಂಬರೀಶ್ ಮನೆಗೆ ಭೇಟಿ ನೀಡಿದ್ದರು. ಚರ್ಚೆ ಬಳಿಕ ಮಾಧ್ಯಮಗಳ ಮುಂದೆ ಬಂದಾಗ ನಿರ್ಮಾಪಕರನ್ನ ಭಿಕ್ಷುಕರಿಗೆ ಹೋಲಿಸಿ ಅಂಬಿ ಕೊಟ್ಟ ಪ್ರತಿಕ್ರಿಯೆ ಅಲ್ಲಿನ ನಿರ್ಮಾಪಕರನ್ನೇ ಧಂಗುಬಡಿಸಿತು. [ಇಂದಿನಿಂದ ನಿರ್ಮಾಪಕರ ಸರಣಿ ಉಪವಾಸ ಸತ್ಯಾಗ್ರಹ]

'ಸಮಸ್ಯೆ ಇರುವುದು ಅವರಿಗೆ'

''ಅವರೆಲ್ಲಾ ನನ್ನ ಕೆಲಸಕ್ಕೋಸ್ಕರ ಬಂದಿಲ್ಲ. ಈಗ ನನ್ನ ವೃತ್ತಿ ಅದಾ? ನಾನು ಬಂದಿದ್ದು ಯಾವುದಕ್ಕಾಗಿ? ಚಿತ್ರರಂಗಕ್ಕೋಸ್ಕರ ಬಂದೆ. ಈಗ ಸಮಸ್ಯೆ ಇರುವುದು ಯಾರಿಗೆ? ನಿರ್ಮಾಪಕರಿಗೆ. ಅಷ್ಟು ತಿಳಿದುಕೊಂಡುಬಿಟ್ಟರೆ ಸಾಕು. ಸಮಸ್ಯೆ ಇಟ್ಟುಕೊಂಡು ದಬ್ಬಾಳಿಕೆ ಮಾಡಬಾರದು. ನಿರ್ಮಾಪಕರಿಗೆ ಮಾತ್ರ ಸಮಸ್ಯೆ ಕಾಣುತ್ತಿದೆ. ಕಲಾವಿದರಿಗೆ ಸಮಸ್ಯೆ ಇಲ್ಲ.'' - ಅಂಬರೀಶ್ [ನಿರ್ಮಾಪಕರು ರೊಚ್ಚಿಗೇಳುವುದಕ್ಕೆ 'ಇವರುಗಳೇ' ಕಾರಣ.!]

'ದಬ್ಬಾಳಿಕೆ ನಡೆಸುವುದರಲ್ಲಿ ಅರ್ಥ ಇಲ್ಲ'

''ದಬ್ಬಾಳಿಕೆ, ಗೂಂಡಾಗಿರಿ ನಡೆಸುವುದರಲ್ಲಿ ಅರ್ಥ ಇಲ್ಲ. ಮಾತುಕತೆ ಇಂದ ಮಾತ್ರ ಸಮಸ್ಯೆ ಪರಿಹಾರ ಸಾಧ್ಯ. ಅವರ ಸಮಸ್ಯೆ ಇತ್ಯರ್ಥ ಆಗಬೇಕು ಅಂದ್ರೆ ಕೂತು ಮಾತನಾಡಲಿ. ಸದ್ಯದಲ್ಲೇ ಕಲಾವಿದರೊಂದಿಗೆ ಚರ್ಚೆ ಮಾಡುತ್ತೇನೆ.'' - ಅಂಬರೀಶ್ [ಹೊಟ್ಟೆಪಾಡಿಗಾಗಿ ಬೀದಿಗಿಳಿದ ಕನ್ನಡ ನಿರ್ಮಾಪಕರು]

'ಪ್ರತಿಭಟನಾ ಸ್ಥಳಕ್ಕೆ ಹೋಗೋದಿಲ್ಲ'

''ನಿರ್ಮಾಪಕರ ಪ್ರತಿಭಟನಾ ಸ್ಥಳಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಬೇಕಾದರೆ, ನನ್ನ ಬಳಿ ಬಂದು ಚರ್ಚೆ ನಡೆಸಲಿ.'' ಅಂತ ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಅಂಬರೀಶ್, ಇಂದು ನಿರ್ಮಾಪಕರನ್ನ 'ಭಿಕ್ಷುಕರು' ಅಂದು ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಇದಕ್ಕೆ ನಿರ್ಮಾಪಕರು ಏನು ಅನ್ನುತ್ತಾರೋ..??!

English summary
Kannada Actor Ambareesh has referred Kannada film producers as 'Beggars'. While reacting to the media, after the meeting Producer Association president Muniratna, Ambareesh has made a statement, ''Beggars have no choice'' which has created a new controversy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada