»   » ಒಂದೇ ದಿನದಲ್ಲಿ 'ಅಂಬರೀಶ' 3 ಕೋಟಿ ಕಲೆಕ್ಷನ್?

ಒಂದೇ ದಿನದಲ್ಲಿ 'ಅಂಬರೀಶ' 3 ಕೋಟಿ ಕಲೆಕ್ಷನ್?

Posted By:
Subscribe to Filmibeat Kannada

ಇಡೀ ಸ್ಯಾಂಡಲ್ ವುಡ್ ಇತಿಹಾಸದಲ್ಲೇ ಹಿಂದೆಂದಿಗಿಂತಲೂ ಅತಿ ಹೆಚ್ಚು ಮೊತ್ತಕ್ಕೆ ಸ್ಯಾಟೆಲೈಟ್ ರೈಟ್ಸ್ ಸೇಲ್ ಆಗಿ ಭಾರಿ ಸುದ್ದಿ ಮಾಡಿದ್ದ 'ಅಂಬರೀಶ' ಇದೀಗ ಮತ್ತೊಂದು ರೆಕಾರ್ಡ್ ಕ್ರಿಯೇಟ್ ಮಾಡುವ ಮೂಲಕ ಗಾಂಧಿನಗರದ ಹುಬ್ಬೇರಿಸಿದೆ.

ನಿನ್ನೆ (ನವೆಂಬರ್ 20) ರಂದು ರಿಲೀಸ್ ಆದ 'ಅಂಬರೀಶ' ಚಿತ್ರ ಬಾಕ್ಸಾಫೀಸ್ ನ ಚಿಂದಿ ಉಡಾಯಿಸಿದೆ. ಬರೋಬ್ಬರಿ 250 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿರುವ 'ಅಂಬರೀಶ' ಒಂದೇ ದಿನದಲ್ಲಿ ಪೈಸಾ ವಸೂಲ್ ಮಾಡಿರುವುದು ಎಷ್ಟು ಗೊತ್ತಾ? ಅಂದಾಜಿನ ಪ್ರಕಾರ 3 ಕೋಟಿ ಅನ್ನುತ್ತಿವೆ ಮೂಲಗಳು.

ಹಾಗೊಂದು ವೇಳೆ ಅದು ನಿಜವಾಗಿದ್ದರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಕೌಂಟ್ ಗೆ ಮತ್ತೊಂದು ದಾಖಲೆ ಸೇರಿದ ಹಾಗೆ ಲೆಕ್ಕ. ಬಿಡುಗಡೆಗೂ ಮುನ್ನ ಯಾವುದೇ ಪಬ್ಲಿಸಿಟಿ ಮಾಡದೆ, ಪ್ರಮುಖ ಚಿತ್ರಮಂದಿರದ ಸಮಸ್ಯೆಯಲ್ಲೇ ಸಿಲುಕಿದ 'ಅಂಬರೀಶ' ಕಡೆಗೂ ನಗೆ ಬೀರುವಂತಾಗಿದೆ.

Ambareesha first day boxoffice collection 3 crores

ಗಾಂಧಿನಗರದ ಕಟ್ಟುಪಾಡನ್ನು ಮುರಿದು ಕೆ.ಜಿ.ರಸ್ತೆ ಬದಲು ಮಾಗಡಿ ರಸ್ತೆಯಲ್ಲಿರುವ 'ಪ್ರಸನ್ನ' ಚಿತ್ರಮಂದಿರವನ್ನು ಮೇನ್ ಥಿಯೇಟರ್ ಆಗಿ ಮಾಡಿಕೊಂಡ 'ಅಂಬರೀಶ' ಚಿತ್ರತಂಡಕ್ಕೆ ಅಭಿಮಾನಿಗಳ ಶ್ರೀರಕ್ಷೆ ಪ್ರಾಪ್ತಿಯಾಗಿದೆ. [ಅಂಬರೀಶ ಚಿತ್ರ ವಿಮರ್ಶೆ]

ಮುಖ್ಯ ಚಿತ್ರಮಂದಿರದಲ್ಲೇ 6 ಶೋಗಳು ಪ್ರದರ್ಶನವಾಗಿದ್ದು, ಎಲ್ಲೂ ಶೋಗಳು ಹೌಸ್ ಫುಲ್ ಆಗಿತ್ತು. ಇನ್ನೂ ರಾಜ್ಯಾದ್ಯಂತ 250ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ರಿಲೀಸ್ ಆಗಿದ್ದ 'ಅಂಬರೀಶ'ನಿಗೆ ಅದ್ದೂರಿ ಓಪನ್ನಿಂಗ್ ಸಿಕ್ಕಿದೆ. ಹಾಗೆ ಮಲ್ಟಿಪ್ಲೆಕ್ಸ್ ಗಳಲ್ಲೂ ಮೊದಲ ದಿನ ಐದಕ್ಕಿಂತ ಹೆಚ್ಚು ಶೋಗಳು ಪ್ರದರ್ಶನಕಂಡಿದೆ. ಎಲ್ಲೆಡೆ ಟಿಕೆಟ್ಸ್ ಸೋಲ್ಡೌಟ್ ಆಗಿರುವ 'ಅಂಬರೀಶ' 3 ಕೋಟಿಯಷ್ಟು ದೊಡ್ಡ ಮೊತ್ತವನ್ನು ಕಲೆಕ್ಟ್ ಮಾಡುವಲ್ಲಿ ಯಶಸ್ವಿಯಾಗಿದೆ ಅನ್ನುತ್ತಿವೆ ಮೂಲಗಳು. [ದರ್ಶನ್ 'ಅಂಬರೀಶ'ನಿಗೆ ಗುರು ರಾಯರ ಕೃಪೆ]

ಅಲ್ಲಿಗೆ ಗಾಂಧಿನಗರಕ್ಕೆ ಸೆಡ್ಡು ಹೊಡೆದು ನಿಂತ 'ಅಂಬರೀಶ' ನಿಗೆ ಜಯ ಸಿಕ್ಕಂತಾಗಿದೆ. ಚಾಲೆಂಜಿಂಗ್ ಸ್ಟಾರ್ ಹಾಕಿದ ಚಾಲೆಂಜ್ ನಲ್ಲಿ ಗೆದ್ದಂತಾಗಿದೆ. ಮತ್ತೊಮ್ಮೆ ದರ್ಶನ್ ತಾನು 'ಬಾಕ್ಸಾಫೀಸ್ ಸುಲ್ತಾನ್' ಅಂತ ಪ್ರೂವ್ ಮಾಡಿದ್ದಾರೆ. (ಏಜೆನ್ಸೀಸ್) ['ಅಂಬರೀಶ' ಬಗ್ಗೆ ಮೌನ ಮುರಿದ ಚಾಲೆಂಜಿಂಗ್ ಸ್ಟಾರ್]

English summary
Challenging Star Darshan starrer Ambareesha has succeded in collecting rupees 3 crores in box office on the first day of its release, according to Gandhinagara sources.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada