»   » ನ.21ರಿಂದ ದರ್ಶನ್ 'ಅಂಬರೀಶ' ದರ್ಬಾರ್ ಶುರು

ನ.21ರಿಂದ ದರ್ಶನ್ 'ಅಂಬರೀಶ' ದರ್ಬಾರ್ ಶುರು

Posted By:
Subscribe to Filmibeat Kannada

ಬರೋಬ್ಬರಿ ಒಂದು ವರ್ಷದಿಂದ 'ದರ್ಶನ್' ದರ್ಶನ ಯಾವಾಗ ಅಂತ ಕಾದುಕುಳಿತ್ತಿದ್ದ ಚಾಲೆಂಜಿಂಗ್ ಸ್ಟಾರ್ ಅಭಿಮಾನಗಳಿಗಿಲ್ಲಿದೆ ಸ್ವೀಟ್ ನ್ಯೂಸ್. ಬಹಳ ದಿನಗಳಿಂದ ಗಾಂಧಿನಗರದ ಅಂಗಳದಲ್ಲಿ ಸಿಕ್ಕಾಪಟ್ಟೆ ಸದ್ದು ಸುದ್ದಿ ಮಾಡಿದ್ದ 'ಅಂಬರೀಶ'ನ ದರ್ಶನಕ್ಕೆ ಕೌಂಟ್ ಡೌನ್ ಶುರುವಾಗಿದೆ.

'ಬುಲ್ ಬುಲ್'ನ ಮಾತನಾಡಿಸಿದ್ದಾದ ಮೇಲೆ ಮತ್ತೆ ರೆಬೆಲ್ ಸ್ಟಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ನ ಒಟ್ಟಾಗಿ ನೋಡೋಕೆ ಜಸ್ಟ್ ಹತ್ತೇ ದಿನ ಬಾಕಿ. ಹೌದು, ರೆಬೆಲ್ ಸ್ಟಾರ್ ಹೆಸರಲ್ಲಿ, ರೆಬೆಲ್ ಸ್ಟಾರ್ ಜೊತೆ ಸೇರಿ ಚಾಲೆಂಜಿಂಗ್ ಸ್ಟಾರ್ ಆಕ್ಟ್ ಮಾಡಿರೋ ಸಿನಿಮಾ ಅಂಬರೀಶ ಇದೇ ತಿಂಗಳ 21ಕ್ಕೆ ತೆರೆಗೆ ಅಪ್ಪಳಿಸ್ತಾಯಿದೆ. ['ನಾಡಪ್ರಭು' ಗೆಟಪ್ ನಲ್ಲಿ ರೆಬೆಲ್ ಸ್ಟಾರ್ ಅಂಬರೀಶ್]

ಸಿನಿಮಾ ಅನೌನ್ಸ್ ಆದಾಗಿನಿಂದಲೂ, ಟೈಟಲ್ ನಿಂದ ಭರ್ಜರಿ ಪ್ರಚಾರ ಗಿಟ್ಟಿಸಿಕೊಂಡ 'ಅಂಬರೀಶ' ಅಷ್ಟೇ ಅದ್ದೂರಿಯಾಗಿ ರಿಲೀಸ್ ಆಗೋ ತಯಾರಿಯಲ್ಲಿದೆ. 'ಅಂಬರೀಶ' ಅನ್ನೋ ಟೈಟಲ್ ಇಟ್ಟಿರೋ ಕಾರಣ, ಹೆಚ್ಚು ಜವಾಬ್ದಾರಿಯಿಂದ ಒಂದುವರೆ ವರ್ಷಗಳ ಕಾಲ ಚಿತ್ರೀಕರಣ ನಡೆಸಲಾಗಿತ್ತು.

ಭ್ರಷ್ಟರ ವಿರುದ್ಧ ಅಂಬರೀಶ ಹೋರಾಟ

'ರೆಬೆಲ್ ಸ್ಟಾರ್' ಹೆಸ್ರಿಟ್ಟ ಮಾತ್ರಕ್ಕೆ ಇದು ಅಂಬರೀಶ್ ಲೈಫ್ ಹಿಸ್ಟ್ರಿನೂ ಅಲ್ಲ, ಐತಿಹಾಸಿಕ ಸಿನಿಮಾನೂ ಅಲ್ಲ. ಸ್ವಾತಂತ್ರ್ಯ ಸಿಕ್ಕಿ ದಶಕಗಳೇ ಕಳೆದ್ರೂ, ಭಾರತದ ಮೂಲೆಮೂಲೆಯಲ್ಲೂ ಬೇರೂರಿರುವ ಭ್ರಷ್ಟಾಚಾರ, ಲ್ಯಾಂಡ್ ಮಾಫಿಯಾ, ಅವ್ಯವಸ್ಥೆಯ ವಿರುದ್ಧ ಹೋರಾಡೋ ನಾಯಕನ ಕಥೆಯೇ 'ಅಂಬರೀಶ'.

ಕೂಲಿ ಕಾರ್ಮಿಕನ ಪಾತ್ರದಲ್ಲಿ ದರ್ಶನ್

ಈ ಹಿಂದೆ ''ಸಂಗೊಳ್ಳಿ ರಾಯಣ್ಣ''ನಂತಹ ದೇಶಪ್ರೇಮಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ದರ್ಶನ್, ಅಂಬರೀಶ ಚಿತ್ರದಲ್ಲೂ ನಾಡು-ನುಡಿಗಾಗಿ ಹೋರಾಟ ನಡೆಸಲಿದ್ದಾರೆ. ಸಕ್ಕರೆ ನಾಡಿನ ಸಿಡಿಗುಂಡಾಗಿ, ಕೂಲಿ ಕಾರ್ಮಿಕನ ಪಾತ್ರದಲ್ಲಿ ದರ್ಶನ್ ಮಿಂಚಲಿದ್ದಾರೆ.

ನಾಡಪ್ರಭು ಪಾತ್ರದಲ್ಲಿ ಅಂಬರೀಶ್

ಅನಾರೋಗ್ಯದಿಂದ ಬಳಲುತ್ತಿದ್ದರೂ ಚೇತರಿಸಿಕೊಂಡು, ಬಣ್ಣ ಹಚ್ಚಿದ್ದ ಅಂಬರೀಶ್, ಚಿತ್ರದಲ್ಲಿ ನಾಡಪ್ರಭು ಕೆಂಪೇಗೌಡನಾಗಿ ಮಿಂಚಲಿದ್ದಾರೆ. ಲ್ಯಾಂಡ್ ಮಾಫಿಯಾದಿಂದ ಇಂದು ಹದಗೆಟ್ಟಿರುವ ಬೆಂಗಳೂರು ಮತ್ತು ಕೆಂಪೇಗೌಡರ ಕಾಲದ ಬೆಂಗಳೂರನ್ನ ಈ ಚಿತ್ರದಲ್ಲಿ ತೋರಿಸಿರುವ ನಿರ್ದೇಶಕರು, ನಾಡಪ್ರಭು ಪಾತ್ರಕ್ಕೆ ಅಂಬಿನೇ ಬೆಸ್ಟ್ ಅಂತ ಅವ್ರ ಕಾಲ್ ಶೀಟ್ ಗಾಗಿ ಬಹುಕಾಲ ವೇಯ್ಟ್ ಮಾಡಿದ್ರು.

ಫಸ್ಟ್ ಟೈಮ್ ದರ್ಶನ್ ಜೊತೆ ಪ್ರಿಯಾಮಣಿ

ಇನ್ನೂ ದರ್ಶನ್ ಜೊತೆ ಫಸ್ಟ್ ಟೈಮ್ ಜೋಡಿಯಾಗಿರೋದು ಬೆಂಗಳೂರು ಬೆಡಗಿ ಪ್ರಿಯಾಮಣಿ. ಕಾರ್ಪೊರೇಟ್ ಕಂಪನಿ ಓನರ್ ಆಗಿ ಪ್ರಿಯಾಮಣಿ ನಟಿಸಿದ್ರೆ, ದರ್ಶನ್ ಹಾರ್ಟಲ್ಲಿ ಪ್ರೀತಿಯ ಬಾಣ ಬಿಡೋದು ಬುಲ್ ಬುಲ್ ಬೆಡಗಿ ರಚಿತಾ ರಾಮ್. ಕಾರ್ಪರೇಟ್ ಕನ್ಯಾಮಣಿ ಹಳ್ಳಿ ಹುಡುಗಿ ಇದ್ದಮೇಲೆ 'ಅಂಬರೀಶ'ನದ್ದು ಟ್ರೈಯಾಂಗಲ್ ಲವ್ ಸ್ಟೋರಿ!

ನವೆಂಬರ್ 21ರಿಂದ ಅಂಬರೀಶ ದರ್ಬಾರ್

ಬಾಲಿವುಡ್ ನ ಖ್ಯಾತ ಖಳನಟ ಕೆಲ್ಲಿದೋರ್ಜಿ, ರೇಖಾ, ತುಳಸಿ, ರವಿಕಾಳೆ, ಸಾಧುಕೋಕಿಲರಂತಹ ದೊಡ್ಡ ತಾರಾಗಣ ಚಿತ್ರಕ್ಕಿದೆ. ಇದುವರೆಗೂ 'ಸಾರ್ವಭೌಮ', 'ಸೈನಿಕ'ದಂತ ದೇಶಭಕ್ತಿ ಚಿತ್ರಗಳನ್ನ ಕೊಟ್ಟಿದ್ದ ಮಹೇಶ್ ಸುಖಧರೆ ಅಂಬರೀಶ ಚಿತ್ರಕ್ಕೆ ನಿರ್ದೇಶನದ ಜೊತೆ ನಿರ್ಮಾಣದ ಹೊಣೆಯನ್ನೂ ಹೊತ್ತಿದ್ದಾರೆ. ಪವರ್ ಫುಲ್ ಕಥೆ ಇರೋ 'ಅಂಬರೀಶ'ನ ದರ್ಬಾರ್ ನವೆಂಬರ್ 21ರಿಂದ ಶುರು.

English summary
Sandalwood's most expected movie 'Ambareesha' is releasing on November 21st. Hero Darshan playing a daily wage worker and Rachita ram will be seen opposite him. Actress Priyamani portraying the role of corporate company owner. Rebel star ambareesh has roped in for special character. The detailed report on the movie Ambareesha is here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada