For Quick Alerts
  ALLOW NOTIFICATIONS  
  For Daily Alerts

  'ಅಮರ್' ವೇಷದಲ್ಲಿ ಬಂದೇ ಬಿಟ್ಟರು ಯಂಗ್ ರೆಬಲ್ ಸ್ಟಾರ್

  By Naveen
  |
  ಜೂನಿಯರ್ ರೆಬೆಲ್ ಸ್ಟಾರ್ ಖಡಕ್ ಲುಕ್ | Filmibeat Kannada

  ನಟ ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಈಗ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಜೂನಿಯರ್ ರೆಬಲ್ ಸ್ಟಾರ್ ಅನ್ನು ಸ್ವಾಗತಿಸಲು ಅಭಿಮಾನಿಗಳು ಕಾಯುತ್ತಿದ್ದಾರೆ. 'ಅಮರ್' ಅವತಾರ ಹೊತ್ತು ಅಂಬಿ ಮಗ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ.

  ನಟ ಅಭಿಷೇಕ್ ಅವರ ಮೊದಲ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಇದೀಗ ಬಿಡುಗಡೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಗೆ ಪಾಸಿಟಿವ್ ಆದ ರೆಸ್ಪಾನ್ಸ್ ಸಿಕ್ಕಿದೆ. ಅಂಬರೀಶ್ ಅವರ ಹುಟ್ಟುಹಬ್ಬದ ವಿಶೇಷವಾಗಿ ಈ ಸಿನಿಮಾ ಲಾಂಚ್ ಆಗಲಿದೆ. ಅಂಬರೀಶ್ ಅವರ ಹಳೆಯ ಹೆಸರು ಅಮರ್ ನಾಥ್ ಆಗಿದ್ದು, ಅದೇ ಹೆಸರಿನ ಮೂಲಕ ಅಭಿಷೇಕ್ ಸ್ಯಾಂಡಲ್ ವುಡ್ ನಲ್ಲಿ ಮಿಂಚೋಕ್ಕೆ ಸಿದ್ಧವಾಗಿದ್ದಾರೆ.

  ಪ್ರಭಾಸ್ ಮುಂದೆ ಅಂಬಿ ಪುತ್ರ ಅಭಿಷೇಕ್ ಯಾವುದಕ್ಕೂ ಕಮ್ಮಿ ಇಲ್ಲ.! ಪ್ರಭಾಸ್ ಮುಂದೆ ಅಂಬಿ ಪುತ್ರ ಅಭಿಷೇಕ್ ಯಾವುದಕ್ಕೂ ಕಮ್ಮಿ ಇಲ್ಲ.!

  ಅಂದಹಾಗೆ, ಅಭಿಷೇಕ್ ಅವರ 'ಮೊದಲ ಸಿನಿಮಾ ಅಮರ್' ಚಿತ್ರದ ಕೆಲ ಪ್ರಮುಖ ವಿಷಯಗಳು ಮುಂದಿದೆ ಓದಿ..

  ಫಸ್ಟ್ ಲುಕ್ ರಿಲೀಸ್

  ಫಸ್ಟ್ ಲುಕ್ ರಿಲೀಸ್

  'ಅಮರ್' ಸಿನಿಮಾದ ಫಸ್ಟ್ ಲುಕ್ ಇದೀಗ ರಿಲೀಸ್ ಆಗಿದೆ. ಮಾಸ್ ಲುಕ್ ನಲ್ಲಿ ಅಂಬಿ ಪುತ್ರ ಖಡಕ್ ಲುಕ್ ಕೊಟ್ಟಿದ್ದಾರೆ. ಪೋಸ್ಟರ್ ನಲ್ಲಿ ಯಂಗ್ ರೆಬಲ್ ಸ್ಟಾರ್ ಎಂಬ ಬಿರುದನ್ನು ನಟ ಅಭಿಷೇಕ್ ಅವರಿಗೆ ನೀಡಲಾಗಿದೆ. ಸಿನಿಮಾದ ಫಸ್ಟ್ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ.

  ಅಂಬಿ ಮಗನನ್ನು ಕುಣಿಸಲು ಬಂದರು ಅರ್ಜುನ್ ಜನ್ಯ ಅಂಬಿ ಮಗನನ್ನು ಕುಣಿಸಲು ಬಂದರು ಅರ್ಜುನ್ ಜನ್ಯ

  ಮೇ 28ಕ್ಕೆ ಸರಳವಾಗಿ ಪೂಜೆ

  ಮೇ 28ಕ್ಕೆ ಸರಳವಾಗಿ ಪೂಜೆ

  ಅಂಬರೀಶ್ ಮಗನ ಮೊದಲ ಸಿನಿಮಾದ ಲಾಂಚ್ ಅಂಬರೀಶ್ ಅವರ ಹುಟ್ಟುಹಬ್ಬದ ವಿಶೇಷವಾಗಿ ನಡೆಯಲಿದೆ. ಇದೇ ತಿಂಗಳು 29 ರಂದು ಅಂಬಿ ಬರ್ತ್ ಡೇ ಇದ್ದು, 28 ರಂದು ಜೆ ಪಿ ನಗರದ ದೇವಸ್ಥಾನದಲ್ಲಿ ಸರಳವಾಗಿ ಪೂಜೆ ನಡೆಯಲಿದೆ.

  ಅದ್ದೂರಿ ಕಾರ್ಯಕ್ರಮ

  ಅದ್ದೂರಿ ಕಾರ್ಯಕ್ರಮ

  ಮೊದಲು ಸಿನಿಮಾದ ಸರಳ ಪೂಜೆಯನ್ನು ಮಾಡಲಾಗುತ್ತದೆ. ಆದರೆ ಅದ್ದೂರಿ ಕಾರ್ಯಕ್ರಮದ ಮೂಲಕ 'ಅಮರ್' ಸಿನಿಮಾ ಲಾಂಚ್ ಆಗಲಿದೆ. ಜೂನ್ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ದೊಡ್ಡ ಕಾರ್ಯಕ್ರಮ ಮಾಡುವ ಪ್ಲಾನ್ ಇದ್ದು, ಈ ಕಾರ್ಯಕ್ರಮದಲ್ಲಿ ಕನ್ನಡದ ಜೊತೆಗೆ ಬೇರೆ ಭಾಷೆಯ ದಿಗ್ಗಜ ನಟರು ಭಾಗಿಯಾಗಲಿದ್ದಾರೆ.

  ನಾಗಶೇಖರ್ ನಿರ್ದೇಶನ

  ನಾಗಶೇಖರ್ ನಿರ್ದೇಶನ

  ಅಭಿಷೇಕ್ ಮೊದಲ ಸಿನಿಮಾವನ್ನು 'ಮೈನಾ' ಖ್ಯಾತಿಯ ನಾಗಶೇಖರ್ ನಿರ್ದೇಶನ ಮಾಡುತ್ತಿದ್ದಾರೆ. ಅಂಬರೀಶ್ ಅವರ ಆಪ್ತರಾದ ನಿರ್ಮಾಪಕ ಸಂದೇಶ ನಾಗರಾಜ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಅಂಬಿ ಮಗನ ಚಿತ್ರಕ್ಕೆ ಮೊದಲು ಸಾಕಷ್ಟು ನಿರ್ದೇಶಕರ ಹೆಸರು ಹೇಳಿಬಂತಾದರೂ ಕೊನೆಗೆ ನಾಗಶೇಖರ್ ಈ ಜವಾಬ್ದಾರಿ ತೆಗೆದುಕೊಂಡರು.

  'ಅಮರ್'ಗೆ ನಾಯಕಿ

  'ಅಮರ್'ಗೆ ನಾಯಕಿ

  ವಿಶೇಷ ಅಂದರೆ ನಟ ದರ್ಶನ್ ಜೊತೆಗೆ 'ಯಜಮಾನ' ಸಿನಿಮಾದಲ್ಲಿ ಅಭಿನಯಿಸುತ್ತಿರುವ ನಟಿ ತನ್ಯಾ ಹೊಪೆ 'ಅಮರ್' ಸಿನಿಮಾಗೆ ಸಹ ಆಯ್ಕೆ ಆಗಿದ್ದಾರೆ. ಮಾಡಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ತನ್ಯಾ ಅವರ ಮೂರನೇ ಕನ್ನಡ ಸಿನಿಮಾ ಇದಾಗಿದೆ.

  ಸತ್ಯ ಹೆಗಡೆ ಕ್ಯಾಮರಾ, ಅರ್ಜುನ್ ಜನ್ಯ ಸಂಗೀತ

  ಸತ್ಯ ಹೆಗಡೆ ಕ್ಯಾಮರಾ, ಅರ್ಜುನ್ ಜನ್ಯ ಸಂಗೀತ

  ಉಳಿದಂತೆ, ಸಿನಿಮಾದ ತಾಂತ್ರಿಕ ವರ್ಗದಲ್ಲಿ ಅರ್ಜುನ್ ಜನ್ಯ, ಸತ್ಯ ಹೆಗಡೆ, ದೀಪು ಎಸ್ ಕುಮಾರ್, ಇಮ್ರಾನ್ ಸರ್ದಾರಿಯ, ರಾಮ್ ಲಕ್ಷಣ್, ಮೋಹನ್ ಬಿ ಕೆರೆ, ಡಿಜಿಟಲ್ ಶ್ರೀನಾಥ್, ಸಾನಿಯಾ ಸರ್ದಾರಿಯ, ರಂಗನಾಥ್, ಶಾಂತರಾಮ್ ಇರಲಿದ್ದಾರೆ .

  English summary
  According to the source kannada actor Ambareesh’s son Abhishek debut movie tilted as Amar. The movie will launch on the occasion of Ambareesh’s birthday (May 29th) directed by Nagashekar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X