»   » ಅಂಬಿ ಸಂಭ್ರಮದಲ್ಲಿ ಕನ್ನಡ ನಟ-ನಟಿಯರ ಕಲರವ

ಅಂಬಿ ಸಂಭ್ರಮದಲ್ಲಿ ಕನ್ನಡ ನಟ-ನಟಿಯರ ಕಲರವ

Posted By:
Subscribe to Filmibeat Kannada
<ul id="pagination-digg"><li class="next"><a href="/news/rebel-star-ambarish-60th-birthday-celebration-065589.html">Next »</a></li></ul>

ರೆಬೆಲ್ ಸ್ಟಾರ್ ಅಂಬರೀಷ್ ನಿನ್ನೆ ಅರುವತ್ತನೇ ವಸಂತಕ್ಕೆ ಕಾಲಿಟ್ಟ ಅಪೂರ್ವ ಕ್ಷಣ. ಕನ್ನಡದ ಈ ಹಿರಿಯ ನಟ, ರೆಬೆಲ್ ಸ್ಟಾರ್ ಹುಟ್ಟುಹಬ್ಬವನ್ನು ಕನ್ನಡ ಚಿತ್ರರಂಗ ಅಭೂತಪೂರ್ವವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಚರಿಸಿತು. ಕನ್ನಡದ ಜನಪ್ರಿಯ ನಟನಿಗೆ ಇಡೀ ಚಿತ್ರರಂಗ ಅದ್ದೂರಿಯಾಗಿ ಶುಭ ಹಾರೈಸಿ ಧನ್ಯತೆ ಅನುಭವಿಸಿತು.

ಮಾನ್ಯ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಕಾರ್ಯಕ್ರಮಕ್ಕೆ ಆಗಮಿಸಿ ರೆಬೆಲ್ ಸ್ಟಾರ್ ಅವರಿಗೆ ಹುಟ್ಟುಹಬ್ಬದ ಶುಭ ಹಾರೈಸಿದರು. ಜೊತೆಗೆ "ಖಳನಟರಾಗಿ ಚಿತ್ರರಂಗಕ್ಕೆ ಬಂದು ಜನನಾಯಕರಾಗಿ ಜನಪ್ರಿಯತೆ ತುಟ್ಟತುದಿಗೇರಿದವರು ಈ ನಮ್ಮ ಅಂಬರೀಷ್" ಎಂದರು. ಕೇಂದ್ರ ಇಂಧನ ಸಚಿವ ಸುಶೀಲ್ ಕುಮಾರ್ ಶಿಂಧೆ, ಡಿಕೆ ಶಿವಕುಮಾರ್, ಹಾಗೂ ಆರ್ ಅಶೋಕ್ ಸಹ ಹಾಜರಿದ್ದರು.

ಬಾಲಿವುಡ್, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದ ಮೇರು ಕಲಾವಿದರು ಕನ್ನಡದ ನಟ ಅಂಬಿಯ ಹುಟ್ಟುಹಬ್ಬಕ್ಕೆ ಬಂದಿದ್ದು ಅಂಬಿ ಜನಪ್ರಿಯತೆಗೆ ಹಿಡಿದ ಕನ್ನಡಿಯಂತಿತ್ತು. ಚಿರಂಜೀವಿ, ರಜನಿಕಾಂತ್, ಮೋಹನ್ ಬಾಬು, ನಂದಮೂರಿ ಬಾಲಕೃಷ್ಣ, ಶತ್ರುಘ್ನ ಸಿನ್ಹಾ, ಸುನೀಲ್ ಶೆಟ್ಟಿ, ದಿಲೀಪ್ ಕುಮಾರ್, ಜಾಕಿ ಶ್ರಾಫ್ ಹೀಗೆ ಭಾರತೀಯ ಚಿತ್ರರಂಗದ ಮೇರು ತಾರೆಗಳು ಅರಮನೆ ಮೈದಾನದಲ್ಲಿ ಆಸೀನರಾಗಿದ್ದರು.

ಅವರೆಲ್ಲರ ಮುಂದೆ ಕನ್ನಡ ಚಿತ್ರತಾರೆಗಳ ಕಾರ್ಯಕ್ರಮದ ಪ್ರದರ್ಶನ ಅಮೋಘವಾಗಿ ನಡೆಯಿತು. ಅರ್ಜುನ್ ಸರ್ಜಾ ನೃತ್ಯದೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಜನರ ಪ್ರಶಂಸೆ ಗಿಟ್ಟಿಸುವುದರ ಜೊತೆಗೆ ಕುತೂಹಲವನ್ನು ಕೆರಳಿಸಿತು. ನಂತರ ಬಂದ ಮುರಳಿ-ನೀತು ಅವರ ಜಯ ಭಾರತ ಜನನಿಯ ತನುಜಾತೆ... ಗೀತೆ ಕನ್ನಡ ನಾಡಿನ ವರ್ಣನೆಗೆ ಕಲಶವಿಟ್ಟಂತಿತ್ತು.

ಮುಂದಿನ ಪ್ರದರ್ಶನವಾಗಿ ತರುಣ್ ಚಂದ್ರ ಹಾಗೂ ಪೂಜಾ ಗಾಂಧಿ ಡಾನ್ಸ್ ಗಮನಸೆಳೆಯಿತು. ದಿಗಂತ್ ಐಂದ್ರಿತಾ ಜೋಡಿಯ ನೃತ್ಯವಂತೂ ನೋಡುಗರು ಅವರಿಬ್ಬರ ಅತ್ಯದ್ಭುತ ಕೆಮಿಸ್ಟ್ರಿಯ ಬಗ್ಗೆ ಮಾತನಾಡುವಂತೆ ಮಾಡಿತು. ಅಂಬಿಯ ಇನ್ನೊಂದು ಹುಟ್ಟುಹಬ್ಬ ಬಂದಾಗಲೂ ದಿಗಂತ್-ಐಂದ್ರಿತಾ ಜೋಡಿಯನ್ನು ಜನ ಮರೆಯಲಾಗದಂತೆ ಅವರು ಡಾನ್ಸ್ ಇತ್ತು.

ಆದಿತ್ಯ-ಚೈತ್ರಾ, ಯೋಗೇಶ್-ಪ್ರಜ್ಞಾ, ಯಶಸ್-ಮೈತ್ರೀಯಾ, ದರ್ಶನ್-ರಮ್ಯಾ, ಪುನೀತ್-ರಮ್ಯಾ, ಗಣೇಶ್-ರಾಧಿಕಾ ಪಂಡಿತ್, ಶಿವರಾಜ್ ಕುಮಾರ್-ರಾಧಿಕಾ ಪಂಡಿತ್, ಯಶ್, ಪಂಕಜ್ ಮುಂತಾದವರ ನೃತ್ಯಗಳು ನೆರೆದಿದ್ದ ಪ್ರೇಕ್ಷಕರಲ್ಲಿ ಅಕ್ಷರಶಃ ಪುಳಕ ಉಂಟುಮಾಡಿದವು.

ನೆನಪಿರಲಿ ಪ್ರೇಮ್, ದುನಿಯಾ ವಿಜಯ್, ಸಾಧುಕೋಕಿಲ, ರಂಗಾಯಣ ರಘು, ದೊಡ್ಡಣ್ಣ, ರಮೇಶ್ ಅರವಿಂದ್, ಹರ್ಷಿಕಾ ಪೂಣಚ್ಚ, ಸಿಂಧೂ ಲೋಕನಾಥ್, ದುನಿಯಾ ರಶ್ಮಿ, ಉಮಾಶ್ರೀ-ಜಗ್ಗೇಶ್ ಕಾಮಿಡಿ ಶೋಗಳು ಜನರನ್ನು ನಗೆಗಡಲಿನಲ್ಲಿ ತೇಲಿಸಿದವು. ಮಧ್ಯೆ ಮಧ್ಯೆ ಚಿತ್ರರಂಗದ ಗಣ್ಯವ್ಯಕ್ತಿಗಳು ಅಂಬರೀಷ್ ಕುರಿತು ಮಾಡುವ ಗುಣಗಾನ ಸಮಯೋಚಿತವಾಗಿತ್ತು.

ಜಯಪ್ರದಾ, ಶತ್ರುಘ್ನ ಸಿನ್ಹಾ, ರಜನಿಕಾಂತ್, ಚಿರಂಜೀವಿ, ಮೋಹನ್ ಲಾಲ್, ಜಾಕಿಶ್ರಾಫ್, ಸುನೀಲ್ ಶೆಟ್ಟಿ, ಖುಷ್ಬೂ, ಅಂಬಿಕಾ ಹೀಗೆ ಒಬ್ಬಬ್ಬರಾಗಿ ವೇದಿಕೆಯೇರಿ ಅಂಬಿಗೆ ಅರುವತ್ತರ ಶುಭ ಹಾರೈಸಿದರು. ಆಗಾಗ ಬರ್ತ್ ಡೇ ಸ್ಟಾರ್ ಅಂಬಿ ವೇದಿಕೆಗೆ ಬಂದು ಪ್ರೇಕ್ಷಕರಿಗೆ ದರ್ಶನ ನೀಡಿದಾಗಲಂತೂ ಜನ ಹುಚ್ಚೆದ್ದು ಶಿಳ್ಳೆ-ಚಪ್ಪಾಳೆಗಳ ಮಳೆ ಸುರಿಸಿದರು. ಮುಂದಿನ ಪುಟ ನೋಡಿ...

<ul id="pagination-digg"><li class="next"><a href="/news/rebel-star-ambarish-60th-birthday-celebration-065589.html">Next »</a></li></ul>
English summary
Rebel Star Ambarish's 60th Birthday Celebrated at Bangalore Palace Ground yesterday, on 29th May 2012. This Grand celebration included Super Star Rajinikanth, Mega Star Chiranjeevi, Nandamoori Balakrishna, shatrughna Sinha, Jockie Shroff, Mohanlal and others participated in this Grand Celebration.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada