For Quick Alerts
  ALLOW NOTIFICATIONS  
  For Daily Alerts

  ನಿರ್ಮಾಪಕ ಮುನಿರತ್ನ ಹೇಳಿಕೆ ವಿರುದ್ಧ ತಿರುಗಿಬಿದ್ದ ದರ್ಶನ್-ಅಂಬಿ ಫ್ಯಾನ್ಸ್

  |
  Lok Sabha Elections 2019 : ನಿರ್ಮಾಪಕ ಮುನಿರತ್ನ ಹೇಳಿಕೆ ವಿರುದ್ಧ ತಿರುಗಿಬಿದ್ದ ದರ್ಶನ್-ಅಂಬಿ ಫ್ಯಾನ್ಸ್

  ನಿರ್ಮಾಪಕ ಹಾಗೂ ಶಾಸಕ ಮುನಿರತ್ನ ಅವರು ಮಂಡ್ಯ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದರು. ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಅವರ ಪರವಾಗಿ ಪ್ರಚಾರ ಭಾಷಣ ಮಾಡಿದ ಮುನಿರತ್ನ, ಅಲ್ಲಿ ಗಂಭೀರವಾದ ವಿಷ್ಯವೊಂದನ್ನ ಪ್ರಸ್ತಾಪಿಸಿದರು.

  ಮುನಿರತ್ನ ಹೇಳಿದ ಈ ಹೇಳಿಕೆ ಈಗ ಅಂಬರೀಶ್ ಅಭಿಮಾನಿಗಳು ಮತ್ತು ದರ್ಶನ್ ಅಭಿಮಾನಗಳನ್ನ ಕೆರಳಿಸುವಂತೆ ಮಾಡಿದೆ. ರೆಬೆಲ್ ಸ್ಟಾರ್ ಅಂಬರೀಶ್ ನಿಧನರಾದಾಗ ನಡೆದ ಘಟನೆಯೊಂದನ್ನ ಮಂಡ್ಯ ಜನರ ಮುಂದೆ ಇಟ್ಟ ಮುನಿರತ್ನ ನಿಖಿಲ್ ಪರ ಮತಯಾಚನೆ ಮಾಡಿದ್ರು.

  ದರ್ಶನ್ ಆಡಿಯೋ ಎನ್ನಲಾಗುತ್ತಿರುವ ಆ ಕ್ಲಿಪ್ ನಲ್ಲಿ ಏನಿದೆ? ಈ ಆಡಿಯೋ ರಹಸ್ಯವೇನು?

  ಆದ್ರೆ, ಮುನಿರತ್ನ ಅವರ ಈ ಹೇಳಿಕೆಯ ವಿರುದ್ಧ ತಿರುಗಿ ಬಿದ್ದಿರುವ ಅಂಬಿ ಅಭಿಮಾನಗಳು, ಇದು ಎಷ್ಟು ನಿಜ ಅಥವಾ ಎಷ್ಟು ಸುಳ್ಳು ಎಂದು ಚರ್ಚೆ ಮಾಡ್ತಿದ್ದಾರೆ. ಈ ಬಗ್ಗೆ ಫಿಲ್ಮಿಬಿಟ್ ಕನ್ನಡದಲ್ಲಿ ವರದಿ ಪ್ರಕಟವಾಗಿತ್ತು. ಈ ಸ್ಟೋರಿಗೆ ಅಂಬಿ ಮತ್ತು ದರ್ಶನ್ ಅಭಿಮಾನಿಗಳು ಕಾಮೆಂಟ್ ಮಾಡಿದ್ದು, ಹಲವು ಪ್ರಶ್ನೆಗಳನ್ನ ಮುಂದಿಟ್ಟಿದ್ದಾರೆ. ಅದರಲ್ಲಿ ಕೆಲವನ್ನ ಆಯ್ಕೆ ಮಾಡಿ ಪ್ರಸ್ತಾಪಿಸಲಾಗಿದೆ. ಮುಂದೆ ಓದಿ....

  ಮುನಿರತ್ನ ಹೇಳಿದ ಆ ವಿಷ್ಯವೇನು?

  ಮುನಿರತ್ನ ಹೇಳಿದ ಆ ವಿಷ್ಯವೇನು?

  ''ನಟ ಅಂಬರೀಶ್ ನಿಧನರಾದಾಗ ಸಂದರ್ಭದಲ್ಲಿ ತಡರಾತ್ರಿ 2 ಗಂಟೆಗೆ ನಾನು, ನಿಖಿಲ್ ಅವರ ಜೊತೆಯಲ್ಲಿದ್ದೆ. ಆ ದಿನ ಅಂಬಿ ಅಂತ್ಯ ಸಂಸ್ಕಾರ ಮಾಡುಲು ಜಾಗ ಗುರುತಿಸಿದ್ದು ಇದೇ ನಿಖಿಲ್. ನಾನು ಪ್ರಮಾಣ ಮಾಡಿ ಹೇಳ್ತಿನಿ'' ಎಂದು ಮುನಿರತ್ನ ಮಂಡ್ಯ ಚುನಾವಣೆ ಪ್ರಚಾರದಲ್ಲಿ ಹೇಳಿದ್ದಾರೆ.

  ಅಂಬರೀಶ್ ಅಂತ್ಯ ಸಂಸ್ಕಾರದ ಗುಟ್ಟೊಂದು ಬಿಚ್ಚಿಟ್ಟ ನಿರ್ಮಾಪಕ ಮುನಿರತ್ನ

  ಅಂದೇ ಯಾಕೆ ಹೇಳಿಲ್ಲಾ?

  ಅಂದೇ ಯಾಕೆ ಹೇಳಿಲ್ಲಾ?

  ಸರಿ, ಅದು ನಿಜಾನೇ ಇರಬಹುದು. ಬಟ್, ಆಗಲೇ ಯಾಕೆ ಈ ವಿಷ್ಯವನ್ನ ಹೇಳಿಲ್ಲ. ಈಗ ಚುನಾವಣೆ ಸಂದರ್ಭದಲ್ಲಿ ಯಾಕೆ ಇದನ್ನ ಮಾತನಾಡುತ್ತಿದ್ದೀರಾ? ಎಂದು ನಿರ್ಮಾಪಕ ಮುನಿರತ್ನ ಅವರನ್ನ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

  ಮಂಡ್ಯದಲ್ಲಿ ದುರ್ಯೋಧನ vs ಅಭಿಮನ್ಯು: ಮುನಿರತ್ನ 'ಕುರುಕ್ಷೇತ್ರ'ಕ್ಕೆ ಫುಲ್ ಟೆನ್ಷನ್.!

  ಜಾಗ ಗುರುತಿಸುವುದಕ್ಕೆ ನಿಖಿಲ್ ಯಾರು?

  ಜಾಗ ಗುರುತಿಸುವುದಕ್ಕೆ ನಿಖಿಲ್ ಯಾರು?

  ಅಷ್ಟಕ್ಕೂ, ಅಂಬರೀಶ್ ಅಂತ್ಯ ಸಂಸ್ಕಾರಕ್ಕೆ ಜಾಗ ಗುರುತು ಮಾಡಲು ನಿಖಿಲ್ ಕುಮಾರ್ ಯಾರು? ಎಂದು ಅಂಬರೀಶ್ ಅಭಿಮಾನಿಗಳು ಗರಂ ಆಗಿದ್ದಾರೆ. ಅಂಬಿ ಅಂತ್ಯ ಸಂಸ್ಕಾರ ಮಾಡಿದ್ದು ಸರ್ಕಾರದ ವತಿಯಿಂದ. ಸರ್ಕಾರದಲ್ಲಿ ನಿಖಿಲ್ ಪಾತ್ರವೇನು? ಸಿಎಂ ಪುತ್ರ ಆದ ಕಾರಣ ಜಾಗ ಗುರುತು ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.

  ಇದೆಲ್ಲಾ ಚುನಾವಣಾ ಗಿಮಿಕ್.!

  ಇದೆಲ್ಲಾ ಚುನಾವಣಾ ಗಿಮಿಕ್.!

  ಇನ್ನು ಮುನಿರತ್ನ ಅವರ ಹೇಳಿಕೆಯನ್ನ ನಂಬದ ಕೆಲವರು ಇದೆಲ್ಲ ಚುನಾವಣೆ ಗಿಮಿಕ್ ಅಷ್ಟೇ ಎನ್ನುತ್ತಿದ್ದಾರೆ. ಇಷ್ಟು ದಿನ ಇಲ್ಲದೇ ಇದ್ದ ವಿಷ್ಯ ಈಗ್ಯಾಕೆ ಹೇಳುತ್ತಿದ್ದಾರೆ. ಸಿಎಂ ಪುತ್ರನನ್ನು ಗೆಲ್ಲಿಸಲು ಈ ರೀತಿ ಹೇಳುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  'ಕುರುಕ್ಷೇತ್ರ' ನೋಡಿದ ರಾಕ್ ಲೈನ್ ಏನಂದ್ರು, ಜಗ್ಗೇಶ್ ನುಡಿದ ಭವಿಷ್ಯವೇನು.?

  'ಕುರುಕ್ಷೇತ್ರ'ದ ವಿರುದ್ಧ ದರ್ಶನ್ ಫ್ಯಾನ್ಸ್ ಗರಂ

  'ಕುರುಕ್ಷೇತ್ರ'ದ ವಿರುದ್ಧ ದರ್ಶನ್ ಫ್ಯಾನ್ಸ್ ಗರಂ

  ದರ್ಶನ್ 50ನೇ ಸಿನಿಮಾ ಎಂದು ಹೇಳಲಾಗುತ್ತಿರುವ ಕುರುಕ್ಷೇತ್ರ ಚಿತ್ರವನ್ನ ನಿರ್ಮಾಣ ಮಾಡಿರುವುದು ಇದೇ ಮುನಿರತ್ನ. ದುರ್ಯೋಧನನ ಪಾತ್ರದಲ್ಲಿ ದರ್ಶನ್ ಅಭಿನಯಿಸಿದ್ರೆ, ಅಭಿಮನ್ಯು ಪಾತ್ರದಲ್ಲಿ ನಿಖಿಲ್ ಕಾಣಿಸಿಕೊಂಡಿದ್ದಾರೆ. ಸಿಎಂ ಗೆ ಆಪ್ತವಾಗಿರುವ ಮುನಿರತ್ನ, ಸಿಎಂ ಪುತ್ರನನ್ನ ಪರ ಹೆಚ್ಚು ಒಲವು ಹೊಂದಿದ್ದಾರೆ. ಕುರುಕ್ಷೇತ್ರ ಸಿನಿಮಾದಲ್ಲೂ ನಿಖಿಲ್ ಗೆ ಹೆಚ್ಚು ಮಹತ್ವ ನೀಡಿದ್ದಾರೆ. ಇದನ್ನ ದರ್ಶನ್ ಫ್ಯಾನ್ಸ್ ವಿರೋಧಿಸಬೇಕು ಎಂದು ಕೆಲವು ಹೇಳುತ್ತಿದ್ದಾರೆ.

  English summary
  Rebel star ambarish and challenging star darshan fans get angry on producer and MLA Munirathna. because, muniratna made statement on ambarish funeral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X