»   » ಅಂಬರೀಶ್ ವಯಸ್ಸಾದ್ಮೇಲೆ ತುಂಬ ಬದಲಾದ್ರು

ಅಂಬರೀಶ್ ವಯಸ್ಸಾದ್ಮೇಲೆ ತುಂಬ ಬದಲಾದ್ರು

Posted By:
Subscribe to Filmibeat Kannada

ಮಹದಾಯಿ ಪ್ರತಿಭಟನೆ, ರೈತರ ಹೋರಾಟ, ಕಾಂಗ್ರೆಸ್, ಬಿಜೆಪಿ ಕಿತ್ತಾಟಗಳ ನಡುವೆ ಅಂಬರೀಶ್ ಎಲ್ಲಿದ್ದಾರೆ ಎಂಬ ಮಾತು ಸಹಜ. ರೆಬೆಲ್ ಸ್ಟಾರ್ ಹೊಸ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಶೂಟಿಂಗ್ ನಲ್ಲಿ ಕನ್ನಡ ಚಿತ್ರರಂಗದ ದಿಗ್ಗಜ ತೊಡಗಿಕೊಂಡಿದ್ದಾರೆ.

ಈಗಾಗಲೇ ಗೊತ್ತಿರುವ ಹಾಗೆ, ಅಂಬರೀಶ್ ತಮ್ಮ ಲುಕ್ ಮತ್ತು ಗೆಟಪ್ ನ್ನ ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದಾರೆ. ಜಿಮ್ ಗೆ ಹೋಗಿ ಕಸರತ್ತು ಮಾಡಿರುವ ಅಂಬಿ, ಗಡ್ಡ ಬಿಟ್ಟು ಸ್ವಲ್ಪ ದೈಹಿಕವಾಗಿಯೂ ಬದಲಾಗಿದ್ದಾರೆ. ಇದನ್ನ ನೋಡಿದ ಮಂದಿ, ಅಂಬರೀಶ್ ಅವರಿಗೆ ನಿಜವಾಗಲೂ ವಯಸ್ಸಾಗಿದೆ ಅಂತಿದ್ದಾರೆ. ಅಂಬರೀಶ್ ಅವರ ಹೊಸ ಫೋಟೋವೊಂದು ಬಹಿರಂಗವಾಗಿದ್ದು, ಅಭಿಮಾನಿಗಳಿಗೆ ಕುತೂಹಲ ಹೆಚ್ಚಿಸಿದೆ.

ಟ್ರೈನಿಂಗ್ ಮುಗಿಸಿ ಬಂದ ಅಂಬರೀಶ್ ಲುಕ್ ನೋಡಿ

ambarish new look in ambi ning vysiytho movie

ಅಂಬರೀಶ್ ನಾಯಕನಾಗಿರುವ ಈ ಚಿತ್ರದಲ್ಲಿ ಸುದೀಪ್ ಕೂಡ ಅಭಿನಯಿಸುತ್ತಿದ್ದು, ಯಂಗ್ ರೆಬೆಲ್ ಸ್ಟಾರ್ ಪಾತ್ರದಲ್ಲಿ ಕಿಚ್ಚ ಬಣ್ಣ ಹಚ್ಚಲಿದ್ದಾರೆ. ಶ್ರುತಿ ಹರಿಹರನ್ ಸುದೀಪ್ ಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದಂತೆ ಗುರುದತ್ ಗಾಣಿಗ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಕಿಚ್ಚ ಕ್ರಿಯೇಷನ್ಸ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಜಾಕ್ ಮಂಜು ಬಂಡವಾಳ ಹಾಕಿದ್ದಾರೆ.

English summary
Rebel star ambarish new look in ambi ning vysiytho movie. kiccha sudeep also acting in ambi ning vysaitho film. the movie directed by gurudath ganiga.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X