»   » ಸದ್ಯವೇ 'ರಣ'ಕಹಳೆ ಭಾರೀ ರಹಸ್ಯ ಬಯಲಾಗಲಿದೆ!

ಸದ್ಯವೇ 'ರಣ'ಕಹಳೆ ಭಾರೀ ರಹಸ್ಯ ಬಯಲಾಗಲಿದೆ!

Posted By:
Subscribe to Filmibeat Kannada
ಈ ಗುರುವಾರ (ಜೂನ್ 07, 2012) ರೆಬಲ್ ಸ್ಟಾರ್ ಅಂಬರೀಷ್ ಹಾಗೂ ಪಂಕಜ್ ಸಂಗಮದ ಚಿತ್ರ ರಣ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಮೊದಲು ಸೆನ್ಸಾರ್ ಸಮಸ್ಯೆಗೆ ಸಿಲುಕಿ ಸಂಕಟದ ಸುದ್ದಿ ಕೊಟ್ಟಿದ್ದ ರಣ ಚಿತ್ರ, ಇದೀಗ ಎಲ್ಲಾ ಸಮಸ್ಯೆಗಳಿಂದ ಮುಕ್ತ ಮುಕ್ತ. ಚಿತ್ರದ 7-8 ದೃಶ್ಯಗಳಿಗೆ ಕತ್ತರಿ ಪ್ರಯೋಗವಾಗಿದೆ.

ಕಥೆಯಲ್ಲಿ ಸಾಹಸವೇ ಪ್ರಧಾನವಾಗಿರುವುದರಿಂದ ಬಹಳಷ್ಟು ಕ್ರೌರ್ಯ ಹಾಗೂ ರಕ್ತಪಾತ ಚಿತ್ರದ ತುಂಬೆಲ್ಲಾ ವ್ಯಾಪಿಸಿದೆ. ಹೀಗಾಗಿ ಪ್ರಾದೇಶಿಕ ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನೀಡಲು ಕೈಚೆಲ್ಲಿ ಕೇಂದ್ರ ಕಛೇರಿ ಮುಂಬೈಗೆ ಕಳಿಹಿಸಿ ಕೈತೊಳೆದುಕೊಂಡಿತ್ತು. ಚಿತ್ರತಂಡದಲ್ಲಿ ಆತಂಕ ಮನೆಮಾಡಿತ್ತು. ಈಗ ಎಲ್ಲವೂ ಸರಿಹೋಗಿ ಬಿಡುಗಡೆಯ ಕ್ಷಣ ಸಮೀಪಿಸಿದೆ.

ಶಿವಾನಂದ ಮಾದಶೆಟ್ಟಿ ನಿರ್ಮಾಣದ ಈ ಚಿತ್ರದಲ್ಲಿ ಹಿರಿಯ ನಟ ಅಂಬರೀಷ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ನಿವೃತ್ತ ನಿರ್ದೇಶಕ ಎಸ್ ನಾರಾಯಣ್ ಪುತ್ರ ಪಂಕಜ್ ಹಾಗೂ ಉಳಿದ ನಾಲ್ಕು ಕಲಾವಿದರು ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ಈ ಚಿತ್ರ ಯಾವುದೇ ಒಬ್ಬ ಹೀರೋ ಸುತ್ತ ಸುತ್ತದೇ ಕಥೆಯ ಸುತ್ತ ಕೇಂದ್ರೀಕೃತವಾಗಿದೆ ಎಂದಿದೆ ಚಿತ್ರತಂಡ.

ಕಥೆಯಲ್ಲಿ ಐದು ಮಂದಿ ನಾಯಕರು ಬಂದುಹೋಗಲಿರುವುದು ವಿಶೇಷ. ಚಿತ್ರದ ತುಂಬೆಲ್ಲಾ ಸಾಹಸ ದೃಶ್ಯಗಳಿದ್ದು ಅವೆಲ್ಲವೂ ಪ್ರೇಕ್ಷಕರನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯಲಿವೆ. ಬಳಸಿರುವ ಕ್ಯಾಮರಾ, ಲೊಕೇಶನ್ ಹಾಗೂ ಚಿತ್ರಕಥೆ ವಿಭಿನ್ನವಾಗಿದ್ದು ಕನ್ನಡ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿರುವುದು ಗ್ಯಾರಂಟಿ ಎಂದಿದೆ ರಣ ಟೀಮ್.

ಶ್ರೀನಿವಾಸ್ ಮೂರ್ತಿ ನಿರ್ದೇಶನದ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರುವವರು ಲಕ್ಷ್ಮಣ್. "ಪಕ್ಕಾ ಆಕ್ಷನ್ ಚಿತ್ರವಾದರೂ ಇದರಲ್ಲಿ ಲವ್, ಸೆಂಟಿಮೆಂಟ್ ಮತ್ತು ಹಾಸ್ಯವೂ ಸೇರಿದೆ. ಇಲ್ಲಿ ನಾಯಕರು ಹೊಟ್ಟೆ ಹಸಿವಿಗೆ ಹೋರಾಟ ಮಾಡುವುದೇ ಚಿತ್ರದ ಒನ್ ಲೈನ್ ಸ್ಟೋರಿ. ನಾಯಕರದು ರಫ್ ಅಂಡ್ ಟಫ್ ಪಾತ್ರ" ಎಂದಿದ್ದಾರೆ.

ಚಿತ್ರದಲ್ಲಿ ನಾಲ್ಕೈದು ಚಿತ್ರಗಳಿಗೆ ಆಗುವಷ್ಟು ಸರಕು ಇದೆ. ಚಿತ್ರ ನೋಡಿ ಹೊರಬಂದ ಪ್ರೇಕ್ಷಕರಿಗೆ 'ಗುಡ್' ಎಂಬ ಭಾವ ಬರುವುದು ಖಾತ್ರಿ" ಎಂಬದನ್ನೂ ಹೇಳಿದ್ದಾರೆ ಲಕ್ಷ್ಮಣ್. ನಿರ್ಮಾಪಕ ಶಿವಾನಂದ ಮಾದಶೆಟ್ಟಿ ಹಾಗೂ ನಿರ್ದೇಶಕ ಶ್ರೀನಿವಾಸ್ ಮೂರ್ತಿ ಅವರುಗಳೂ ಕೂಡ ಈ ಚಿತ್ರರದ ಮೇಲೆ ಬಹಳಷ್ಟು ಭರವಸೆ ಇಟ್ಟಿದ್ದಾರೆ.

ಅಂದಹಾಗೆ, ಈ ಚಿತ್ರದಲ್ಲಿ ಸುಪ್ರೀತಾ, ಸ್ಪೂರ್ತಿ, ಸೋನಿಯಾ ಗೌಡ ಹಾಗೂ ಅರ್ಚನಾ ಹೀಗೆ ನಾಲ್ಕು ನಾಯಕಿಯರಿದ್ದಾರೆ. ಜೊತೆಗೆ ಸೂರ್ಯನಾರಾಯಣ್, ಸುರೇಶ್ಚಂದ್ರ, ಶೋಭರಾಜ್, ಧರ್ಮ ಮುಂತಾದವರಿದ್ದಾರೆ. ಅಂಬರೀಷ್ ಅವರದು ಪ್ರಮುಖ ಪಾತ್ರ ಎಂಬುದನ್ನು ಯಾರೂ ಮರೆಯುವ ಹಾಗಿಲ್ಲ. ಸದ್ಯದಲ್ಲೇ ಬಿಡುಗಡೆ ಆಗಲಿರುವುದರಿಂದ ನಿರೀಕ್ಷೆಗೆ ಉತ್ತರವೂ ಸದ್ಯದಲ್ಲೇ ಸಿಗಲಿದೆ, ಸ್ವಲ್ಪ ದಿನಗಳು ಕಾಯಬೇಕಷ್ಟೇ. (ಒನ್ ಇಂಡಿಯಾ ಕನ್ನಡ)

English summary
Rana Movie Releases on May 07 2012 all over the Karnataka. Senoir actor Rebel Star Ambarish in Lead Role. Pankaj and others 4 are acted as heros in thismovie. This is totally a action based movie.
Please Wait while comments are loading...