Just In
Don't Miss!
- News
ಉದ್ಯಮಿ ಅಜೀಂ ಪ್ರೇಮ್ಜಿ ವಿರುದ್ಧದ ಪ್ರಕರಣ ರದ್ದು
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಂಬರೀಶ್ ಮಗನ ಚೊಚ್ಚಲ ಚಿತ್ರದ ಟೈಟಲ್ ಬಗ್ಗೆ ಹೊಸ ಸುದ್ದಿ

'ಅಂಬಿ ನಿಂಗ್ ವಯಸಾಯ್ತೋ' ಚಿತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಜೊತೆ ಅಂಬರೀಶ್ ಅವರ ಮಗನ ಸಿನಿಮಾ ಬಗ್ಗೆ ಕೂಡ ದೊಡ್ಡ ಮಟ್ಟದ ಕುತೂಹಲ ಹುಟ್ಟುಹಾಕಿದೆ.
ಎಲ್ಲ ಅಂದುಕೊಂಡಂತೆ ಆದ್ರೆ, ಮಾರ್ಚ್ ತಿಂಗಳಲ್ಲಿ ಅಂಬಿ ಮಗನ ಮೊದಲ ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ. ಈಗಾಗಲೇ ಚಿತ್ರದ ನಿರ್ದೇಶಕ, ನಿರ್ಮಾಪಕರು ಅಂತಿಮವಾಗಿದ್ದು, ಕಲಾವಿದರ ಆಯ್ಕೆಯಲ್ಲಿದೆ ಚಿತ್ರತಂಡ.
ಈ ಮಧ್ಯೆ ಅಭಿಷೇಕ್ ಅಂಬರೀಶ್ ಅವರ ಚೊಚ್ಚಲ ಚಿತ್ರಕ್ಕೆ 'ಜಲೀಲಾ' ಎಂದು ಟೈಟಲ್ ಇಡಲು ಚಿಂತಿಸಲಾಗಿತ್ತು. ಆದ್ರೀಗ, ಮತ್ತೊಂದು ಹೆಸರು ಕೇಳಿ ಬರುತ್ತಿದೆ. 'ಜಲೀಲಾ' ಟೈಟಲ್ ಬದಲು 'ಅಮರ್' ಎಂದು ಹೆಸರಿಡಲು ಯೋಜನೆ ಮಾಡಲಾಗುತ್ತಿದೆಯಂತೆ.
ಅಂಬಿ ಮಗನ ಚೊಚ್ಚಲ ಚಿತ್ರದಲ್ಲಿ ಮತ್ತೊಂದು ಟ್ವಿಸ್ಟ್.!
ಅಂಬರೀಶ್ ಅವರ ಚಿತ್ರಗಳಲ್ಲಿಯೇ ಅಂಬಿ ಮಗನ ಚಿತ್ರಕ್ಕೆ ಟೈಟಲ್ ಹುಡುಕುತ್ತಿದೆಯಂತೆ. ಅದರಲ್ಲೂ 80ರ ದಶಕದ ಸೂಪರ್ ಹಿಟ್ ಸಿನಿಮಾ 'ಅಮರ್ ನಾಥ್' ಚಿತ್ರದ ಹೆಸರನ್ನೆ ಬಳಸಿಕೊಂಡು ಈಗ 'ಅಮರ್' ಎಂದು ಫೈನಲ್ ಮಾಡಲಾಗಿದೆಯಂತೆ.
ಅಂಬಿ ಪುತ್ರನಿಗೆ 'ಒಡೆಯರ್' ಆಕ್ಷನ್ ಕಟ್: ದರ್ಶನ್ 'ಒಡೆಯರ್' ಏನಾಯ್ತು?
ಇನ್ನುಳಿದಂತೆ 'ಬಹುದ್ದೂರ್', 'ಭರ್ಜರಿ' ಖ್ಯಾತಿಯ ನಿರ್ದೇಶಕ ಚೇತನ್ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟಗ್ ಹೇಳುವ ಸಾಧ್ಯತೆ ಇದೆ. ಸಂದೇಶ್ ನಾಗರಾಜ್ ಅವರ ನಿರ್ಮಾಣದಲ್ಲಿ ರೆಬಲ್ ಪುತ್ರನ ಎಂಟ್ರಿಯಾಗುವುದು ಬಹುತೇಕ ಖಚಿತವಾಗಿದೆ.