For Quick Alerts
  ALLOW NOTIFICATIONS  
  For Daily Alerts

  'ಅಂಬಿ' ನಿಂಗ್ ವಯಸ್ಸಾಯ್ತೋ ಸೆಟ್ ನಲ್ಲಿ ಜ್ಯೂನಿಯರ್ 'ರೆಬೆಲ್ ಸ್ಟಾರ್'

  By Naveen
  |

  'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ ಸೆಟ್ ನಿಂದ ಪ್ರತಿ ನಿತ್ಯ ಒಂದೆಲ್ಲಾ ಒಂದು ಸುದ್ದಿ ಬರುತ್ತಲೇ ಇದೆ. ಇತ್ತೀಚಿಗಷ್ಟೆ ನಟಿ ಸುಹಾಸಿನಿ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಅಂಬರೀಶ್ ಜೋಡಿಯಾಗಿ ಸುಹಾಸಿನಿ ಅಭಿನಯ ಮಾಡುತ್ತಿದ್ದು ಒಂದು ವಾರಗಳ ಕಾಲ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.

  ಸದ್ಯ 'ಅಂಬಿ ನಿಂಗ್ ವಯಸ್ಸಾಯ್ತೋ' ಸೆಟ್ ನಿಂದ ಬಂದಿರೋ ಹೊಸ ಸುದ್ದಿ ಅಂದರೆ ನಟ ಅಂಬರೀಶ್ ಪುತ್ರ ಅಭಿಶೇಕ್ ಚಿತ್ರೀಕರಣದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಷ್ಟೇ ಅಲ್ಲದೆ ನಿರ್ದೇಶಕ ಗುರುದತ್ತ್ ಮತ್ತು ಅಪ್ಪನ ಜೊತೆ ಅಭಿಷೇಕ್ ಫೋಟೋ ತೆಗೆದುಕೊಂಡಿದ್ದಾರೆ. ಸಿನಿಮಾ ಟೈಟಲ್ ಗೆ ತದ್ವಿರುದ್ದವಾಗಿರುವಂತಿದೆ ಈ ಫೋಟೋಗಳು.

  'ಕುರುಕ್ಷೇತ್ರ' ಬಗ್ಗೆ ಕಾಡುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆ.?'ಕುರುಕ್ಷೇತ್ರ' ಬಗ್ಗೆ ಕಾಡುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆ.?

  ಅಭಿಶೇಕ್ ಕೂಡ ಸಿನಿಮಾದಲ್ಲಿ ಅಭಿನಯಿಸಲು ತಯಾರಿ ಮಾಡಿಕೊಳ್ಳುತ್ತಿದ್ದು ಅಪ್ಪನ ಸಿನಿಮಾ ಸೆಟ್ ಗೆ ಭೇಟಿ ಕೊಟ್ಟು ಸಿನಿಮಾ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ಅಂಬರೀಶ್, ಅಭಿಷೇಕ್ ಹಾಗೂ ನಿರ್ದೇಶಕ ಗುರು ಮೂವರು ಕೂಲಿಂಗ್ ಗ್ಲಾಸ್ ಹಾಕಿಕೊಂಡು ಕ್ಯಾಮೆರಾಗೆ ಪೋಸ್ ನೀಡಿದ್ದು, ಅಂಬಿ ಲುಕ್ ನೋಡಿಗರನ್ನ ಸಖತ್ ಇಂಪ್ರೆಸ್ ಮಾಡುತ್ತಿದೆ.

  ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದ 80% ರಷ್ಟು ಚಿತ್ರೀಕರಣ ಮುಗಿದಿದ್ದು ಸಿನಿಮಾತಂಡ ಕೆಲವೇ ದಿನಗಳಲ್ಲಿ ಸಾಂಗ್ ಶೂಟ್ ಗಾಗಿ ಕೇರಳಗೆ ಹೊರಡಲಿದೆ. ಜಾಕ್ ಮಂಜು ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದು ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

  ವಯಸ್ಸಾದ ಅಂಬಿಗೆ ಜೊತೆಯಾದ್ರು 'ಮುತ್ತಿನಹಾರ'ದ ಬೆಡಗಿವಯಸ್ಸಾದ ಅಂಬಿಗೆ ಜೊತೆಯಾದ್ರು 'ಮುತ್ತಿನಹಾರ'ದ ಬೆಡಗಿ

  English summary
  Kannada actor Ambarish son has visited Ambi Ning Vasayaitoo's shoot location. The film is directed by Gurudutt Ganiga and Ambarish, Shruthi Hariharan, Suhasini and Sudeep are playing the lead roles.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X