ದೇವರನಾಡಿನತ್ತ ಅಂಬಿ ಪ್ರಯಾಣ, ಏನಿದರ ಕಾರಣ?
Recommended Video

ರೆಬಲ್ ಸ್ಟಾರ್ ಅಂಬರೀಶ್. ಸದ್ಯ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆದುಕೊಂಡು ಆರಾಮಾಗಿ ಸ್ನೇಹಿತರ ಮನೆಗೆ ಭೇಟಿ ನೀಡುತ್ತಾ. ಆಪ್ತರನ್ನು ಮನೆಗೆ ಕರೆಸಿಕೊಂಡು ಔತಣ ಕೊಟ್ಟು ಕುಟುಂಬದ ಜೊತೆಯಲ್ಲಿ ಸಮಯ ಕಳೆಯುತ್ತಿದ್ದಾರೆ.
ಇವುಗಳ ಜೊತೆಯಲ್ಲಿ ಮಗನ ಸಿನಿಮಾಗಾಗಿ ಬೇಕಿರುವ ಎಲ್ಲಾ ರೀತಿಯ ತಯಾರಿಗಳನ್ನೂ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಅಂಬರೀಶ್ ದೇವರನಾಡಿನತ್ತ ಪ್ರಯಾಣ ಬೆಳೆಸಿದ್ದಾರಂತೆ. ಅರೆ ದೇವರ ನಾಡು ಅಂದರೆ ಯಾವುದು ಎಂದು ತಲೆ ಕೆಡಿಸಿಕೊಳ್ಳಬೇಡಿ.

ಅಂಬಿ ಪ್ರಯಾಣ ಬೆಳೆಸಿರುವ ದೇವರ ನಾಡು ಕೇರಳ. ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರತಂಡ ಸಿನಿಮಾದ ಕೊನೆಹಂತದ ಚಿತ್ರೀಕರಣಕ್ಕಾಗಿ ಕೇರಳಾಗೆ ಇಂದು ಪ್ರಯಾಣ ಬೆಳೆಸಿದೆ.
ಅಂಬರೀಶ್ ಹಾಗೂ ಸುಹಾಸಿನಿ ಅಭಿನಯದ ಹಾಡಿನ ಚಿತ್ರೀಕರಣ ಕೇರಳದ ಸುಂದರ ತಾಣಗಳಲ್ಲಿ ಚಿತ್ರೀಕರಿಸಲು ಸಿನಿಮಾತಂಡ ನಿರ್ಧರಿಸಿದ್ದು ನಿರ್ಮಾಪಕ ಜಾಕ್ ಮಂಜು, ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಹಾಗೂ ಅಂಬರೀಶ್ ಮುಂಜಾನೆಯೇ ವಿಮಾನ ಏರಿದ್ದಾರೆ.

ನವ ನಿರ್ದೇಶಕ ಗುರುದತ್ ಗಾಣಿಗ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು ಅಂಬರೀಶ್, ಸುಹಾಸಿನಿ, ಸೇರಿದಂತೆ ಕಿಚ್ಚ ಸುದೀಪ್ ಹಾಗೂ ಶೃತಿ ಹರಿಹರನ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.


Click it and Unblock the Notifications











