For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬಕ್ಕೆ 'ಮಾಸ್' ಆಗಿ ಎಂಟ್ರಿ ಕೊಡ್ತಾರಂತೆ ಅಂಬಿ

  By Bharath Kumar
  |

  ರೆಬಲ್ ಸ್ಟಾರ್ ಮನೆಯಲ್ಲಿ ಒಂದು ವಾರದಿಂದ ಸಂಭ್ರಮದ ವಾತಾವರಣ. ಮುದ್ದಿನ ಮಗ ಚಿತ್ರರಂಗಕ್ಕೆ ಎಂಟ್ರಿಕೊಡುತ್ತಿರುವ ಖುಷಿಯಲ್ಲಿದ್ದಾರೆ ಸುಮಲತಾ ಹಾಗೂ ಅಂಬರೀಶ್. ಇಂದಿನಿಂದ ಅಧಿಕೃತವಾಗಿ ಅಭಿಷೇಕ್ ಕನ್ನಡ ಸಿನಿಮಾರಂಗದಲ್ಲಿ ನಾಯಕನಾಗಿ ಎಂಟ್ರಿಕೊಟ್ಟಿದ್ದಾರೆ. ಅದರ ಬೆನ್ನಲ್ಲೇ ರೆಬಲ್ ಸ್ಟಾರ್ ಮಾಸ್ ಎಂಟ್ರಿಗೆ ವೇದಿಕೆ ಸಿದ್ಧವಾಗಿದೆ.

  ಹೌದು, ನಾಳೆ ಮಂಡ್ಯದ ಗಂಡು 66ನೇ ವರ್ಷದ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಇದೇ ವಿಶೇಷ ಸಂದರ್ಭದಲ್ಲಿ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ ತಂಡದಿಂದ ವಿಶೇಷವಾದ ಉಡುಗೊರೆಯನ್ನು ಅಂಬಿ ಅಭಿಮಾನಿಗಳಿಗೆ ನೀಡಲು ಮುಂದಾಗಿದ್ದಾರೆ.

  ಅಂಬರೀಶ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ವಿಶೇಷ ಕಾರ್ಯಕ್ರಮಅಂಬರೀಶ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ವಿಶೇಷ ಕಾರ್ಯಕ್ರಮ

  'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಮಾಸ್ ಟೀಸರ್ ನಾಳೆ ರಿಲೀಸ್ ಮಾಡಲು ನಿರ್ದೇಶಕ ಗುರುದತ್ ಗಾಣಿಗ ಹಾಗೂ ನಿರ್ಮಾಪಕ ಜಾಕ್ ಮಂಜು ನಿರ್ಧರಿಸಿದ್ದಾರಂತೆ. ಸ್ಟಾರ್ ಗಳ ಹುಟ್ಟುಹಬ್ಬ ಅಂದ್ಮೇಲೆ ಹೊಸ ಚಿತ್ರಗಳು, ವಿಶೇಷವಾದ ಟ್ರೇಲರ್, ಟೀಸರ್ ರಿಲೀಸ್ ಆಗುವುದು ಮಾಮೂಲು. ಆದರೆ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಟೀಸರ್ ತುಂಬಾನೇ ಸ್ಪೆಷಲ್ ಆಗಿರುತ್ತಂತೆ.

  ಇತ್ತೀಚಿಗಷ್ಟೆ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರತಂಡ ಕೇರಳದ ಸುಂದರ ತಾಣಗಳಲ್ಲಿ ಎಂಟು ದಿನಗಳ ಕಾಲ ಚಿತ್ರೀಕರಣ ಮುಗಿಸಿಕೊಂಡು ಬಂದಿದೆ. ಸದ್ಯ ಶೂಟಿಂಗ್ ಕೊನೆಯ ಹಂತ ತಲುಪಿರುವ ಟೀಂ ಆಗಸ್ಟ್ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಂಡಿವೆ.

  ಚಿತ್ರದಲ್ಲಿ ಸುದೀಪ್, ಶೃತಿಹರಿನ್, ಸುಹಾಸಿನಿ ಹಾಗೂ ಅಂಬಿ ಲುಕ್ ನೋಡಿ ಪ್ರೇಕ್ಷಕರಿಗೆ ಸಿನಿಮಾ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ.

  English summary
  kannada actor Ambhi ning vayassaytho film team planning to release special Teaser for Ambarish birthday. Ambarish is celebrating the 66th birthday tomorrow.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X