»   » 'ಕಿಚ್ಚ'ನಿಂದ ಶುರುವಾಯ್ತು 'ಅಂಬಿ'ಗೆ ವಯಸ್ಸಿನ ಪಾಠ

'ಕಿಚ್ಚ'ನಿಂದ ಶುರುವಾಯ್ತು 'ಅಂಬಿ'ಗೆ ವಯಸ್ಸಿನ ಪಾಠ

Posted By:
Subscribe to Filmibeat Kannada
'ಕಿಚ್ಚ'ನಿಂದ ಶುರುವಾಯ್ತು 'ಅಂಬಿ'ಗೆ ವಯಸ್ಸಿನ ಪಾಠ

ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಕಿಚ್ಚ ಸುದೀಪ್ ಅಭಿನಯದ ಹೊಸ ಸಿನಿಮಾ ಸೆಟ್ಟೇರಿದೆ. ಇಂದಿನಿಂದ ಕಿಚ್ಚ ಅಂಬಿಗೆ ವಯಸ್ಸಿನ ಪಾಠ ಹೇಳಲು ಶುರು ಮಾಡಿದ್ದಾರೆ.

ಟೈಟಲ್ ನಿಂದಲೇ ಕುತೂಹಲ ಮೂಡಿಸಿದ್ದ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾದ 'ಮುಹೂರ್ತ' ಇಂದು ನಡೆದಿದೆ. ಇಂದಿನಿಂದಲೇ ಚಿತ್ರೀಕರಣ ಶುರು ಮಾಡಿರುವ ಸಿನಿಮಾತಂಡ ಬೆಳಗ್ಗೆ ರಾಜಾಜಿನಗರದ ಬಳಿ ಇರುವ ಗಣಪತಿ ದೇವಸ್ಥಾನದಲ್ಲಿ ಸಿನಿಮಾದ ಪೂಜೆ ಮಾಡಿ ಮುಗಿಸಿದೆ.

'ಅಂಬಿ ನಿಂಗ್ ವಯಸ್ಸಾಯ್ತೋ' ಎಂದ ಕಿಚ್ಚ

ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಕಿಚ್ಚ ಸುದೀಪ್ ಒಟ್ಟಿಗೆ ಅಭಿನಯಿಸುತ್ತಿರುವ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾದ ಮುಹೂರ್ತ ಇಂದು ಬೆಂಗಳೂರಿನಲ್ಲಿ ನಡೆದಿದೆ. 'ದಿ ವಿಲನ್' ಚಿತ್ರೀಕರಣದಲ್ಲಿ ಸುದೀಪ್ ಬ್ಯುಸಿ ಆಗಿರೋದ್ರಿಂದ ಅಂಬರೀಶ್ ಪೂಜೆಯಲ್ಲಿ ಭಾಗಿಯಾಗಿದ್ದಾರೆ.

ಕಿಚ್ಚನ ಫ್ಯಾಮಿಲಿಯಿಂದ ಶುಭ ಹಾರೈಕೆ

ಮೈಸೂರಿನಲ್ಲಿ ಚಿತ್ರೀಕರಣ ಮಾಡುತ್ತಿರುವ ಸುದೀಪ್ ಅನುಪಸ್ಥಿತಿಯಲ್ಲಿ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾದ ಮುಹೂರ್ತ ನಡೆದಿದೆ. ಕಿಚ್ಚನ ತಾಯಿ ಸಿನಿಮಾಗೆ ಕ್ಲಾಪ್ ಮಾಡಿ ಶುಭಾಶಯ ಹೇಳಿದ್ದಾರೆ.

ಜಾಕ್ ಮಂಜು ನಿರ್ಮಾಣದಲ್ಲಿ ಸಿನಿಮಾ

'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾವನ್ನ ನವ ನಿರ್ದೇಶಕ 'ಗುರುದತ್ತ್ ಗಾಣಿಗ' ನಿರ್ದೇಶನ ಮಾಡ್ತಿದ್ದಾರೆ. ಮೊದಲ ಸಿನಿಮಾದಲ್ಲೇ ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡಿದ್ದು 'ಗುರುದತ್ತ್' ಸಾಕಷ್ಟು ವರ್ಷಗಳಿಂದ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಇನ್ನು ಚಿತ್ರಕ್ಕೆ 'ಜಾಕ್ ಮಂಜು' ಸಿನಿಮಾಗೆ ಬಂಡವಾಳ ಹಾಕಿದ್ದಾರೆ .

ಶೀಘ್ರದಲ್ಲೇ ಟೀಸರ್ ರಿಲೀಸ್ ಮಾಡಲಿರುವ ತಂಡ

'ದಿ ವಿಲನ್' ಸಿನಿಮಾದ ಹಾಡಿನ ಚಿತ್ರೀಕರಣದಲ್ಲಿರುವ ಕಿಚ್ಚ ಸುದೀಪ್ 'ಟ್ವೀಟ್' ಮಾಡುವ ಮೂಲಕ ಸಿನಿಮಾದ ಬಗ್ಗೆ ಮಾಹಿತಿ ಜೊತೆಯಲ್ಲಿ ಸಂತಸವನ್ನ ವ್ಯಕ್ತ ಪಡಿಸಿದ್ದಾರೆ. ಅಂಬರೀಶ್ ಮಾಮನ ಜೊತೆ ಕೆಲಸ ಮಾಡೋದು ಖುಷಿ ಎಂದಿರೋ ಸುದೀಪ್ ನಿರ್ದೇಶಕ -ನಿರ್ಮಾಕರಿಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.

ನಾಯಕಿ ತಲಾಶ್

ಬೆಳಗ್ಗೆ ಮುಹೂರ್ತ ಮಾಡಿರುವ ನಿರ್ದೇಶಕ 'ಗುರುದತ್ತ್' ಇಂದಿನಿಂದಲೇ ಚಿತ್ರೀಕರಣವನ್ನೂ ಪ್ರಾರಂಭ ಮಾಡಿದ್ದಾರೆ. ಸದ್ಯ ಅಂಬರೀಶ್, ಸುದೀಪ್ ಹಾಗೂ ಸುಹಾಸಿನಿ ಪಾತ್ರಗಳ ಆಯ್ಕೆಯಾಗಿದ್ದು ಚಿತ್ರತಂಡ ನಾಯಕಿಯ ಹುಡುಕಾಟ ಶುರು ಮಾಡಿದೆ.

English summary
'Ambi Ning Vayasaytho' shooting to start from today (November 23rd) ಇಂದಿನಿಂದ ಅಂಬರೀಶ್ -ಸುದೀಪ್ ಅಭಿನಯದ ಹೊಸ ಚಿತ್ರ ಅಂಬಿ ನಿಂಗ್ ವಯಸ್ಸಾಯ್ತೋ ಶೂಟಿಂಗ್ ಶುರು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada