»   » ಕೋಸ್ಟಲ್ ವುಡ್ ನಲ್ಲಿ ಸೆಟ್ಟೇರಲಿದೆ ಹಾಸ್ಯ ಪ್ರಧಾನ ಚಿತ್ರ 'ಅಮ್ಮೆರ್ ಪೊಲೀಸ್'

ಕೋಸ್ಟಲ್ ವುಡ್ ನಲ್ಲಿ ಸೆಟ್ಟೇರಲಿದೆ ಹಾಸ್ಯ ಪ್ರಧಾನ ಚಿತ್ರ 'ಅಮ್ಮೆರ್ ಪೊಲೀಸ್'

Posted By: ಮಂಗಳೂರು ಪ್ರತಿನಿಧಿ
Subscribe to Filmibeat Kannada

ಮಂಗಳೂರು: ತುಳು ಚಲನಚಿತ್ರಗಳ ಸಾಲಿಗೆ ಮತ್ತೊಂದು ಹಾಸ್ಯ ಪ್ರಧಾನ ಚಿತ್ರ ಸೇರ್ಪಡೆ ಆಗಲಿದೆ. 'ಎಕ್ಕಸಕ', 'ಪಿಲಿಬೈಲ್ ಯಮುನಕ್ಕ' ಚಿತ್ರಗಳನ್ನು ನೀಡಿ ಕೋಸ್ಟಲ್ ವುಡ್ ನಲ್ಲಿ ಯಶಸ್ವಿ ನಿರ್ದೇಶಕ ಎನಿಸಿಕೊಂಡಿರುವ ಕೆ.ಸೂರಜ್ ಶೆಟ್ಟಿ ಇದೀಗ ಮತ್ತೊಂದು ಹಾಸ್ಯ ಪ್ರಧಾನ ಚಿತ್ರ ನಿರ್ದೇಶಿಸಲು ಮುಂದಾಗಿದ್ದಾರೆ. ಅದೇ 'ಅಮ್ಮೆರ್ ಪೊಲೀಸ್'.

ಸೆಪ್ಟೆಂಬರ್ 29 ರಂದು ಶ್ರೀ ಕ್ಷೇತ್ರ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ 'ಅಮ್ಮೆರ್ ಪೊಲೀಸ್' ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ.

Ammer police tulu film Muhurtha to be held on Sep 29th

ಲಕುಮಿ ಕ್ರಿಯೇಷನ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ಮೂರನೇ ಚಿತ್ರ ಇದಾಗಿದೆ. ಚಿತ್ರದ ಮುಖ್ಯ ಪಾತ್ರದಲ್ಲಿ ರೂಪೇಶ್ ಶೆಟ್ಟಿ, ಪೂಜಾ ಶೆಟ್ಟಿ ನಟಿಸಲಿದ್ದಾರೆ.

ರಾಜೇಶ್ ಬಿ.ಶೆಟ್ಟಿ ಚಿತ್ರದ ನಿರ್ಮಾಪಕರಾಗಿದ್ದು, ಸಚಿನ್.ಎಸ್.ಶೆಟ್ಟಿ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಈ ಚಿತ್ರಕ್ಕೆ ಸಂದೀಪ್.ಆರ್.ಬಳ್ಳಾಲ್ ಸಂಗೀತ ನಿರ್ದೇಶಕರಾಗಿದ್ದು, ಅರ್ಜುನ್ ಲೂಯಿಸ್ ಚಿತ್ರಕ್ಕೆ ಹಾಡು ಬರೆದಿದ್ದಾರೆ.

English summary
Tulu Movie 'Ammer Police' Muhurtha to be held on Sep 29th. The Movie is directed by Sooraj Shetty.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada