For Quick Alerts
  ALLOW NOTIFICATIONS  
  For Daily Alerts

  'ಮಾವಾ ಐ ಲವ್ ಯೂ' ಗೆ ಅಜೇಯ್ ಜೊತೆ ಅಮೂಲ್ಯ ಡ್ಯುಯೆಟ್

  By Suneetha
  |

  'ಕೃಷ್ಣಲೀಲಾ' ಅಜೇಯ್ ರಾವ್, ನಿರ್ಮಾಪಕ ಉದಯ್ ಮೆಹ್ತಾ ಹಾಗೂ 'ದಿಲ್ ವಾಲಾ' ಡೈರೆಕ್ಟರ್ ಅನಿಲ್ ಕುಮಾರ್ ಜೊತೆ ಹೊಸ ಪ್ರಾಜೆಕ್ಟ್ ಮಾಡ್ತಾ ಇದ್ದಾರೆ ಅಂತ ಇದೇ ಫಿಲ್ಮಿ ಬೀಟಲ್ಲಿ ನಾವು ನಿಮಗೆ ಹೇಳಿದ್ವಿ ತಾನೇ.

  ಇದೀಗ ಆ ಹೊಸ ಪ್ರಾಜೆಕ್ಟ್ ಹೆಸರು ಕೂಡಾ ಪಕ್ಕಾ ಆಗಿದ್ದು, ಅಜೇಯ್ ಹೊಸ ಚಿತ್ರಕ್ಕೆ 'ಮಾವಾ ಐ ಲವ್ ಯೂ' ಅಂತ ಹೆಸರು ಬೇರೆ ಫಿಕ್ಸ್ ಮಾಡಿದ್ದಾರೆ.

  ಸ್ಯಾಂಡಲ್ ವುಡ್ ನಲ್ಲಿ ಅಜೇಯ್ ರಾವ್ ಯಾಕೋ ಕೃಷ್ಣ ಆಗಿಯೇ ಎಲ್ಲರಿಗೂ ಇಷ್ಟ ಆಗ್ತಾರೆ ಅಂತಾನೋ ಅಥವಾ ಕೃಷ್ಣ ಅಂತ ಹೆಸರಿಟ್ಟುಕೊಂಡ ಎಲ್ಲಾ ಚಿತ್ರಗಳು ಹಿಟ್ ಲಿಸ್ಟ್ ಸೇರಿದ ಕಾರಣಕ್ಕೋ ಅಜೇಯ್ ಮತ್ತೆ ಇಲ್ಲಿ 'ಕೃಷ್ಣ-ರುಕ್ಕು' ಸ್ಟೋರಿ ಅಂತ ಅಡಿಬರಹ ಇಟ್ಟುಕೊಂಡು 'ಮಾವಾ ಐ ಲವ್ ಯೂ' ಮೂಲಕ ಮತ್ತೆ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. [ಅಜೇಯ್ ರಾವ್ ಜತೆ ರಾಧಿಕಾ ಅಥವಾ ಅಮೂಲ್ಯಾ ಡ್ಯುಯೆಟ್]

  ಮೊನ್ನೆ ಮೊನ್ನೆ ಚಿತ್ರಕ್ಕೆ ನಾಯಕಿ ರಾಧಿಕಾ ಪಂಡಿತ್ ಅಥವಾ ಅಮೂಲ್ಯನಾ ಅಂತ ತಲೆಕೆಡಿಸಿಕೊಂಡಿದ್ದ ಚಿತ್ರತಂಡ ಕೊನೆಗೂ ಅದಕ್ಕೂ ಫುಲ್ ಸ್ಟಾಪ್ ಇಟ್ಟಿದೆ. ಅಂತೂ-ಇಂತೂ ಅಜೇಯ್ ಜೊತೆ ನಮ್ಮ ಪ್ರೀತಿಯ ಐಶು ಅಲಿಯಾಸ್ ಅಮೂಲ್ಯ ಡ್ಯುಯೆಟ್ ಹಾಡೋದು ಖಂಡಿತ ಅಂತಾಯ್ತು.

  ಇನ್ನೇನು ಇದೇ ಅಗಸ್ಟ್ ತಿಂಗಳಿನಿಂದ ಚಿತ್ರತಂಡ, ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಲಿದೆ. 'ಕೃಷ್ಣಲೀಲಾ' ಚಿತ್ರದಲ್ಲಿ ಭರ್ಜರಿ ಯಶಸ್ಸು ಕಂಡುಕೊಂಡಂತೆ ಅಜೇಯ್ ಇಲ್ಲೂ ಪ್ರೇಕ್ಷಕರ ಮನಸ್ಸು ಗೆಲ್ಲುತ್ತಾರಾ ಅನ್ನೋದನ್ನ ಚಿತ್ರ ಬಿಡುಗಡೆಯಾದ ನಂತರವೇ ನೋಡಬೇಕಿದೆ. ಈ ಚಿತ್ರದ ಹೆಚ್ಚಿನ ಅಪ್ ಡೇಟ್ಸ್ ಗಾಗಿ 'ಫಿಲ್ಮಿಬೀಟ್' ಕನ್ನಡ ನೋಡುತ್ತಿರಿ.

  English summary
  The new film starring Ajay Rao which is being produced by Uday Mehta and directed by Anil of 'Dilwala' fame has been titled as 'Mava I Love You' with a caption of 'Krishna-Rukku Story'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X