»   » ಮತ್ತೊಂದು ಸ್ಪೋಟಕ ಕಥೆಯೊಂದಿಗೆ ಬಂದ 'ಅಟ್ಟಹಾಸ'ದ ನಿರ್ದೇಶಕ

ಮತ್ತೊಂದು ಸ್ಪೋಟಕ ಕಥೆಯೊಂದಿಗೆ ಬಂದ 'ಅಟ್ಟಹಾಸ'ದ ನಿರ್ದೇಶಕ

Posted By:
Subscribe to Filmibeat Kannada

'ಸೈನೆಡ್', 'ಗೇಮ್', 'ಅಟ್ಟಹಾಸ' ಹೀಗೆ ವಿಶಿಷ್ಟ ರೀತಿಯ ನೈಜಘಟನೆಗೆ ಸಿನಿಮಾ ರೂಪ ಕೊಟ್ಟು ಪ್ರೇಕ್ಷಕರ ಕಣ್ಣಿಗೆ ಕಟ್ಟುವಂತೆ ತೆರೆ ಮೇಲೆ ತರುವ ನಿರ್ದೇಶಕ ಎ ಎಂ ಆರ್ ರಮೇಶ್. ಗೇಮ್ ಚಿತ್ರದ ನಂತರ 'ಆಸ್ಫೋಟ' ಎನ್ನುವ ಪೋಸ್ಟರ್ ಬಿಡುಗಡೆ ಮಾಡಿ ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಬರುತ್ತಿದ್ದೇನೆ ಎಂದು ಸೂಚನೆ ನೀಡಿದ್ದರು.

ನೈಜ ಘಟನೆಗಳನ್ನ ತೆರೆ ಮೇಲೆ ತರುವ ಪ್ರಯತ್ನ ಸುಲಭವಲ್ಲ ಅದಕ್ಕಾಗಿ ಸಾಕಷ್ಟು ಕಷ್ಟ ಪಡಬೇಕು. ಅದರಂತೆ ಎ ಎಂ ಆರ್ ರಮೇಶ್ ಕೂಡ ಸಿನಿಮಾದ ಸ್ಲ್ರೀಪ್ಟ್ ವರ್ಕ್ ನಲ್ಲಿ ಬ್ಯುಸಿ ಆದರೆ. ಚಿತ್ರಕ್ಕೆ ಬೇಕಾದ ನಾಯಕ ಹಾಗೂ ಮಾಹಿತಿಗಾಗಿ ಇನ್ನು ಸಮಯ ಬೇಕಾಗುತ್ತದೆ ಎಂದು ತಿಳಿದ ಕೂಡಲೇ ರಮೇಶ್ ಮತ್ತೊಂದು ಸ್ಪೋಟಕ ವಿಚಾರವನ್ನ ತೆರೆಗೆ ತರೋ ಪ್ರಯತ್ನವನ್ನ ಸದ್ದಿಲ್ಲದೆ ಮಾಡಿದ್ದಾರೆ.

ಸಾಕಷ್ಟು ತಿಂಗಳಿಂದ ರಮೇಶ್ ವಿದೇಶಗಳನ್ನ ಸುತ್ತಾಡುತ್ತಾ ಕಥೆಯನ್ನ ಸಿದ್ದ ಪಡೆಸಿಕೊಳ್ಳುತ್ತಿದ್ದಾರೆ. ಸೈನೆಡ್ ನಿರ್ದೇಶಕರು ಈ ಬಾರಿ 'ಎಲ್ ಟಿ ಟಿ' ಪ್ರಭಾಕರನ್ ಅವರ ಸ್ಟೋರಿ ಹೇಳಲಿದ್ದಾರೆ. ಅದು ಸಿನಿಮಾ ಮೂಲಕವಲ್ಲ. ವೆಬ್ ಸೀರಿಸ್ ಮೂಲಕ ಸ್ಪೆಷಲ್ ಅಂದರೆ ಸೌತ್ ಇಂಡಿಯಾದ ಬಿಗ್ ಸ್ಟಾರ್ ಗಳು ಈ ವೆಬ್ ಸೀರಿಸ್ ನಲ್ಲಿ ಅಭಿನಯ ಮಾಡುತ್ತಿದ್ದಾರೆ. 'ಎಲ್ ಟಿ ಟಿ ಇ' ವೆಬ್ ಸೀರಿಸ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ

ಎ ಎಂ ಆರ್ ರಮೇಶ್ ವೆಬ್ ಸೀರಿಸ್

ಸೈನೆಡ್, ಅಟ್ಟಹಾಸ ಸಿನಿಮಾವನ್ನ ನಿರ್ದೇಶನ ಮಾಡಿ ಪ್ರೇಕ್ಷಕರ ಗಮನ ಸೆಳೆದಿದ್ದ ಎ ಎಂ ಆರ್ ರಮೇಶ್ ವೆಬ್ ಸೀರಿಸ್ ಡೈರೆಕ್ಟ್ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ. 'ಎಲ್ ಟಿ ಟಿ ಇ' ಹೆಸರಿನಲ್ಲಿ ವೆಬ್ ಸೀರಿಸ್ ಬಿಡುಗಡೆ ಆಗಲಿದ್ದು ಸದ್ಯ ರಮೇಶ್ ಪ್ರೀ ಪ್ರೊಡಕ್ಷನ್ ಗಾಗಿ ವಿದೇಶ ಪ್ರಯಾಣ ಬೆಳೆಸಿದ್ದಾರೆ.

'ಎಲ್ ಟಿ ಟಿ ಇ' ಯಲ್ಲಿ ಸೌತ್ ಸ್ಟಾರ್ಸ್

'ಎಲ್ ಟಿ ಟಿ ಇ' ಪೋಸ್ಟರ್ ಬಿಡುಗಡೆ ಮಾಡಿರುವ ನಿರ್ದೇಶಕರು ಇದಕ್ಕಾಗಿ ಸೌತ್ ನ ಬಿಗ್ ಸ್ಟಾರ್ ಗಳಾದ ವಿಕ್ಟರಿ ವೆಂಕಟೇಶ್ ಹಾಗೂ ರಾಣ ದಗ್ಗುಬಾಟಿ ಅಭಿನಯಿಸುತ್ತಿದ್ದಾರೆ.

ಅಂತರಾಷ್ಟ್ರಿಯ ಮಟ್ಟದಲ್ಲಿ ನಿರ್ಮಾಣ

ಪ್ರತಿ ಸಿನಿಮಾ ನಿರ್ದೇಶನ ಮಾಡುವ ಮೊದಲ ಸಂಶೋಧನೆ ಮಾಡುವ ರಮೇಶ್ 'ಎಲ್ ಟಿ ಟಿ ಇ' ಗಾಗಿ 25 ವರ್ಷದಿಂದ ರಿಸರ್ಚ್ ಮಾಡಿದ್ದಾರಂತೆ. ಸಾಕಷ್ಟು ಕೌತುಕ ಹುಟ್ಟುಸುವ ಕಥೆ ಆಗಿರುವುದರಿಂದ ಅಂತರಾಷ್ಟ್ರೀಯ ಗುಣಮಟ್ಟದಲ್ಲಿ ನಿರ್ಮಾಣ ಮಾಡುವ ಯೋಚನೆಯಲ್ಲಿದ್ದು ವಿಜೇತ ಪಿಚ್ಚರ್ ಬ್ಯಾನರ್ ಅಡಿಯಲ್ಲಿ ಸುರೇಶ್ ನಿರ್ಮಾಣ ಮಾಡುತ್ತಿದ್ದಾರೆ.

ಪ್ರೇಕ್ಷಕರ ಮುಂದೆ ಸತ್ಯಕಥೆ

ಟೈಟಲ್ ಇರುವಂತೆಯೇ ವೆಬ್ ಸೀರಿಸ್ ನಲ್ಲಿಯೂ ಎಲ್ ಟಿ ಟಿ ಇ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಎಳೆಯಾಗಿ ಬಿಚ್ಚಿಡಲು ರಮೇಶ್ ಪ್ರಯತ್ನ ಪಡುತ್ತಿದ್ದಾರೆ. ಸದ್ಯ ಪಾತ್ರಗಳನ್ನ ಆಯ್ಕೆ ಮಾಡಿದ್ದು ಯಾರು ಯಾವ ಪಾತ್ರಗಳನ್ನ ಮಾಡುತ್ತಾರೆ ಎನ್ನುವುದನ್ನ ಇನ್ನೂ ಸೀಕ್ರೆಟ್ ಆಗಿಯೇ ಉಳಿಸಿಕೊಂಡಿದ್ದಾರೆ. ಮೇ ಅಂತ್ಯದ ವೇಳೆಗೆ ಎಲ್ ಟಿ ಟಿ ಇ ಸತ್ಯಕಥೆ ನಿಮ್ಮ ಮುಂದೆ ಬರಲಿದೆ.

English summary
Kannada director AMR Ramesh is directing the Web Series, Rana Daggubati and Victory Venkatesh are acting in a web series named LTT.AMR Ramesh is director of Cyanide and Attahasa movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada