For Quick Alerts
  ALLOW NOTIFICATIONS  
  For Daily Alerts

  ನಿಲ್ಲದ 'ಲೀಡರ್' ಟೈಟಲ್ ವಿವಾದ: ಫಿಲ್ಮ್ ಚೇಂಬರ್ ವಿರುದ್ಧ AMR ರಮೇಶ್ ಕೆಂಡಾಮಂಡಲ

  By Harshitha
  |

  ''ವಸಿಸ್ಠ ಪಿಕ್ಚರ್ಸ್' ಬ್ಯಾನರ್ ಅಡಿಯಲ್ಲಿ 2010 ರಲ್ಲಿಯೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ 'ಲೀಡರ್' ಶೀರ್ಷಿಕೆ ನೋಂದಣಿ ಆಗಿದೆ. ಹೀಗಿದ್ದರೂ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರವರ ಚಿತ್ರಕ್ಕೆ 'ಲೀಡರ್' ಶೀರ್ಷಿಕೆ ನೀಡಲಾಗಿದೆ. ದೊಡ್ಡ ನಟರ ಸಿನಿಮಾಗಳಿಗೊಂದು ನ್ಯಾಯ, ಬೇರೆಯವರಿಗೊಂದು ನ್ಯಾಯ... ಫಿಲ್ಮ್ ಚೇಂಬರ್ ಮಲತಾಯಿ ಧೋರಣೆ ಅನುಸರಿಸುತ್ತಿದೆ'' ಅಂತ ಮೊನ್ನೆಯಷ್ಟೇ ವಾಣಿಜ್ಯ ಮಂಡಳಿ ಎದುರು ಕಪ್ಪು ಬಟ್ಟೆ ಧರಿಸಿ ನಿರ್ದೇಶಕ ಎ.ಎಮ್.ಆರ್ ರಮೇಶ್ ಪ್ರತಿಭಟನೆ ನಡೆಸಿದ್ದರು.[ಶಿವಣ್ಣನ 'ಲೀಡರ್' ಚಿತ್ರಕ್ಕೆ ಮಗದೊಂದು ಬಾರಿ ಶೀರ್ಷಿಕೆ ಕಂಟಕ.!]

  ಪ್ರತಿಭಟನೆಯ ಬಳಿಕ 'ಲೀಡರ್' ಶೀರ್ಷಿಕೆಯನ್ನ 'ತರುಣ್ ಟಾಕೀಸ್' ರವರಿಗೆ ಬಿಟ್ಟುಕೊಡಲು ಮುಂದಾಗಿರುವ ಎ.ಎಮ್.ಆರ್.ರಮೇಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಮುಂದೆ ಓದಿ...

  ಫೇಸ್ ಬುಕ್ ನಲ್ಲಿ ಬೇಸರ ಹೊರಹಾಕಿರುವ ಎ.ಎಂ.ಆರ್.ರಮೇಶ್

  ಫೇಸ್ ಬುಕ್ ನಲ್ಲಿ ಬೇಸರ ಹೊರಹಾಕಿರುವ ಎ.ಎಂ.ಆರ್.ರಮೇಶ್

  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಇರುವ ಡಾ.ರಾಜ್ ಪ್ರತಿಮೆ ಎದುರು ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಿದ ನಂತರ ಫೇಸ್ ಬುಕ್ ನಲ್ಲಿ ತಮ್ಮ ಬೇಸರವನ್ನ ನಿರ್ದೇಶಕ ಎ.ಎಂ.ಆರ್.ರಮೇಶ್ ಹೊರಹಾಕಿದ್ದಾರೆ.

  ನಿರ್ಮಾಪಕರ ಶ್ರಮಕ್ಕೆ ಸ್ಪಂದನೆ

  ನಿರ್ಮಾಪಕರ ಶ್ರಮಕ್ಕೆ ಸ್ಪಂದನೆ

  ''ಚಿತ್ರವೊಂದಕ್ಕೆ ನಿರ್ಮಾಪಕ ಹಾಕುವ ದುಡ್ಡು ಹಾಗೂ ಶ್ರಮಕ್ಕೆ ಬೆಲೆ ಕೊಟ್ಟು ನಾನು 'ತರುಣ್ ಟಾಕೀಸ್' ರವರಿಗೆ 'ಮಾಸ್ ಲೀಡರ್' ಶೀರ್ಷಿಕೆ ಬಳಕೆ ಮಾಡಲು ಅನುಮತಿ ನೀಡಲು ನಿರ್ಧರಿಸಿದ್ದೇನೆ'' ಅಂತ ಫೇಸ್ ಬುಕ್ ನಲ್ಲಿ ಎ.ಎಂ.ಆರ್.ರಮೇಶ್ ಬರೆದುಕೊಂಡಿದ್ದಾರೆ.

  ಹೆಚ್ಚು ಕಮ್ಮಿ ಮಾಡುವಂತಿಲ್ಲ.!

  ಹೆಚ್ಚು ಕಮ್ಮಿ ಮಾಡುವಂತಿಲ್ಲ.!

  ''ಲೀಡರ್' ಶೀರ್ಷಿಕೆ ನನ್ನ ಬಳಿಯೇ ಇರಲಿದೆ. ಹೀಗಾಗಿ 'ಮಾಸ್ ಲೀಡರ್' ಶೀರ್ಷಿಕೆ ಬಳಕೆ ಮಾಡಲು ಇರುವ ನಿಯಮಗಳನ್ನ 'ತರುಣ್ ಟಾಕೀಸ್' ಅನುಸರಿಸುತ್ತಾರೆಂದು ಭಾವಿಸುತ್ತೇನೆ. ಒಂದ್ವೇಳೆ ನಿಯಮ ಮುರಿದರೆ, ನ್ಯಾಯಕ್ಕಾಗಿ ನಾನು ಮತ್ತೆ ಹೋರಾಡುತ್ತೇನೆ'' - ಎ.ಎಂ.ಆರ್.ರಮೇಶ್, ನಿರ್ದೇಶಕ.

  20 ದಿನಗಳ ಗಡುವು

  20 ದಿನಗಳ ಗಡುವು

  ''ಲೀಡರ್' ಶೀರ್ಷಿಕೆಯನ್ನ 'ಮಾಸ್ ಲೀಡರ್' ಆಗಿ ಬದಲಿಸಲು ತರುಣ್ ಟಾಕೀಸ್ ರವರಿಗೆ 15-20 ದಿನಗಳ ಗಡುವು ನೀಡುತ್ತೇನೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಡಿರುವ ಅನ್ಯಾಯದಿಂದ ನನಗೆ ನೋವಾಗಿದೆ'' ಎಂದಿದ್ದಾರೆ ಎ.ಎಂ.ಆರ್.ರಮೇಶ್

  'ಲೀಡರ್' ಶೀರ್ಷಿಕೆ ವಿವಾದದ ಇತಿಹಾಸ

  'ಲೀಡರ್' ಶೀರ್ಷಿಕೆ ವಿವಾದದ ಇತಿಹಾಸ

  ಒಂದು ಕಡೆ ಸುದೀಪ್, ಇನ್ನೊಂದು ಕಡೆ ಶಿವಣ್ಣ ರವರ ಚಿತ್ರಕ್ಕೆ ಒಂದೇ ಶೀರ್ಷಿಕೆ (ಲೀಡರ್) ಘೋಷಣೆಯಾಗಿದ್ರಿಂದ ಮೂರು ವರ್ಷಗಳ ಹಿಂದೆ 'ಲೀಡರ್' ಸಿನಿಮಾ ಶೀರ್ಷಿಕೆ ವಿವಾದಕ್ಕೆ ಸಿಲುಕಿತ್ತು.[ಸುದೀಪ್, ಶಿವಣ್ಣ ನಡುವೆ ಹೊಸ ಟೈಟಲ್ ವಿವಾದ]

  ತರುಣ್ ಶಿವಣ್ಣ ಏನಂತಾರೆ.?

  ತರುಣ್ ಶಿವಣ್ಣ ಏನಂತಾರೆ.?

  ''ನಾವು 'ಲೀಡರ್' ಅಂತ ಹೆಸರಿಟ್ಟು ಸಿನಿಮಾ ಮಾಡುವಾಗ, ನಿರ್ಮಾಪಕ ರಘುನಾಥ್ 'ಲೀಡರ್' ಶೀರ್ಷಿಕೆ ನಮ್ಮ ಬಳಿ ಇದೆ. ನೀವು ಬದಲಿಸಿಕೊಳ್ಳಿ ಎಂದರು. ಆಗ ನಾನು ವಾಣಿಜ್ಯ ಮಂಡಳಿಗೆ ಹೋಗಿ 'ದಿ ಲೀಡರ್' ಶೀರ್ಷಿಕೆ ಕೊಡುವಂತೆ ಮನವಿ ಮಾಡಿದೆ. ಆದ್ರೆ, 'ಲೀಡರ್' ಶೀರ್ಷಿಕೆ ನೋಂದಣಿ ಆಗಿದ್ರಿಂದ, ಅದರ ಹಿಂದೆ ಮುಂದೆ ಹೆಸರಿಟ್ಟುಕೊಳ್ಳಲು ಅವಕಾಶ ಇಲ್ಲ ಎಂದಿದ್ದರು. ಕೊನೆಗೆ ಅಜಯ್ ಕುಮಾರ್ ಬಳಿ 'ಮಾಸ್ ಲೀಡರ್' ಶೀರ್ಷಿಕೆ ಇದೆ ಅಂತ ಗೊತ್ತಾಯ್ತು. ಅವರನ್ನ ಕೇಳಿದಾಗ ಅವರು ಖುಷಿಯಿಂದ 'ಮಾಸ್ ಲೀಡರ್' ಶೀರ್ಷಿಕೆಯನ್ನ ನಮಗೆ ಬಿಟ್ಟುಕೊಟ್ಟರು. ಕೊನೆಗೆ, ''ಲೀಡರ್' ಚಿತ್ರವನ್ನ ನಾನು ಮಾಡಲ್ಲ, ನೀವೇ ಬಳಸಿಕೊಳ್ಳಿ'' ಅಂತ ರಘುನಾಥ್ ಹೇಳಿದರು. ಹೀಗಾಗಿ 'ಲೀಡರ್' ಹೆಸರನ್ನ ಫೈನಲ್ ಮಾಡಲಾಯ್ತು. ಈಗ ಎ.ಎಂ.ಆರ್.ರಮೇಶ್ 'ಲೀಡರ್' ಟೈಟಲ್ ನಮ್ಮದು ಅಂತಿದ್ದಾರೆ'' ಎನ್ನುತ್ತಾರೆ ನಿರ್ಮಾಪಕ ತರುಣ್ ಶಿವಪ್ಪ [ಸುದೀಪ್ 'ದಿ ಲೀಡರ್', ಶಿವಣ್ಣ 'ಮಾಸ್ ಲೀಡರ್']

  'ಲೀಡರ್' ಬೇಕಿಲ್ಲ.!

  'ಲೀಡರ್' ಬೇಕಿಲ್ಲ.!

  ''ನಮಗೆ 'ಲೀಡರ್' ಟೈಟಲ್ ಬೇಕಿಲ್ಲ. 'ಮಾಸ್ ಲೀಡರ್' ಅಂತಲೇ ಇಡುತ್ತೇನೆ. ಅವರೇ 'ಲೀಡರ್' ಸಿನಿಮಾ ಮಾಡಲಿ'' ಅಂತ ಹೇಳುತ್ತಾರೆ ತರುಣ್ ಶಿವಪ್ಪ.

  English summary
  Director AMR Ramesh has taken his Facebook Account to permit 'Mass Leader' title.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X