»   » 'ಪರಪ್ಪನ ಅಗ್ರಹಾರ' ವಿವಾದದ ಬಗ್ಗೆ ಬರಲಿದೆ 'ರೂಪಾ ಐಪಿಎಸ್' ಸಿನಿಮಾ.!

'ಪರಪ್ಪನ ಅಗ್ರಹಾರ' ವಿವಾದದ ಬಗ್ಗೆ ಬರಲಿದೆ 'ರೂಪಾ ಐಪಿಎಸ್' ಸಿನಿಮಾ.!

Posted By:
Subscribe to Filmibeat Kannada

ಇತ್ತೀಚೆಗಷ್ಟೇ ಕನ್ನಡದಲ್ಲಿ ಐಪಿಎಸ್ ಶಾಲಿನಿ ರಜನೀಶ್ ಅವರು ಕುರಿತಾಗಿ 'ಶಾಲಿನಿ ಐಪಿಎಸ್' ಎಂಬ ಸಿನಿಮಾ ಸೆಟ್ಟೇರಿತ್ತು. ಈಗ ಐಪಿಎಸ್ ರೂಪಾ ಅವರ ಕುರಿತು ಸಿನಿಮಾ ಮಾಡಲು ಸ್ಯಾಂಡಲ್ ವುಡ್ ಸಿದ್ದವಾಗಿದೆ.

ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಕಳೆದ ಕೆಲವು ದಿನಗಳಿಂದ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದೆ. ಇದಕ್ಕೆ ಕಾರಣ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ಶಶಿಕಲಾ ಅವರಿಗೆ ಜೈಲಿನಲ್ಲಿ ಐಷಾರಾಮಿ ಸವಲತ್ತುಗಳನ್ನ ಒದಗಿಸಲು ಜೈಲಾಧಿಕಾರಿಗಳು 2 ಕೋಟಿ ಲಂಚ ಪಡೆದಿದ್ದಾರೆ ಎಂಬ ದೊಡ್ಡ ಆರೋಪ. ಈ ಅಕ್ರಮವನ್ನ ಬಯಲು ಮಾಡಿದ್ದು ಐಪಿಎಸ್ ಅಧಿಕಾರಿ ರೂಪಾ.

ಇದೇ ಪ್ರಕರಣ ಹಾಗೂ ಐಪಿಎಸ್ ಅಧಿಕಾರಿ ರೂಪಾ ಕುರಿತು ಈಗ ಸಿನಿಮಾ ಮಾಡುವ ತಯಾರಿ ನಡೆಯುತ್ತಿದೆ. ಅಷ್ಟಕ್ಕೂ, ಈ ಸಿನಿಮಾ ಮಾಡಲು ಮುಂದಾಗಿರುವುದು ಯಾರು? ಮುಂದೆ ಓದಿ...

AMR ರಮೇಶ್ ನಿರ್ದೇಶನದಲ್ಲಿ 'ಐಪಿಎಸ್ ರೂಪಾ'

'ಸೈನೆಡ್', 'ಅಟ್ಟಹಾಸ' ಅಂತಹ ನೈಜ ಕಥೆಗಳನ್ನ ತೆರೆ ಮೇಲೆ ತಂದಿರುವ ಖ್ಯಾತ ನಿರ್ದೇಶಕ ಎ.ಎಂ.ಆರ್ ರಮೇಶ್, ಪರಪ್ಪನ ಅಗ್ರಹಾರ ಪ್ರಕರಣ ಹಾಗೂ 'ಐಪಿಎಸ್ ರೂಪಾ' ಅವರ ಕುರಿತು ಸಿನಿಮಾ ಮಾಡಲು ಚಿಂತಿಸಿದ್ದಾರಂತೆ.

ಜೈಲಿನ ಭ್ರಷ್ಟಾಚಾರ ಬಯಲಿಗೆಳೆದ ರೂಪಾಗೆ ವರ್ಗಾವಣೆ ಶಿಕ್ಷೆ

ಜೈಲು ಅಕ್ರಮದ ಬಗ್ಗೆ ನನಗೆ ಮಾಹಿತಿ ಇದೆ

''ಅಟ್ಟಹಾಸ' ಸಿನಿಮಾ ನಿರ್ದೇಶನದ ವೇಳೆ ಅನೇಕ ಜೈಲುಗಳಿಗೆ ಭೇಟಿ ಮಾಡಿದ್ದಾಗ ಇಂತಹ ಅಕ್ರಮಗಳು ಬಗ್ಗೆ ನನಗೆ ಸಾಕಷ್ಟು ಮಾಹಿತಿ ಸಿಕ್ಕಿತ್ತು. ಅಲ್ಲದೆ ರೂಪಾ ಅವರು ದಕ್ಷ ಅಧಿಕಾರಿ ಆಗಿದ್ದಾರೆ. ಈ ಪ್ರಕರಣದ ಸಿನಿಮಾ ಮಾಡಿದರೆ ನಿಷ್ಠಾವಂತ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿರುವುದರ ಬಗ್ಗೆ ಸಮಾಜದ ಗಮನ ಸೆಳೆದಂತೆಯೂ ಆಗುತ್ತದೆ''- ಎ.ಎಂ.ಆರ್ ರಮೇಶ್, ನಿರ್ದೇಶಕ

ಅನ್ಯಾಯ ಬಗ್ಗೆ ಟ್ವೀಟ್ ಮಾಡಿದ ಡಿ ರೂಪಾಗೆ ಭಾರಿ ಬೆಂಬಲ

ಹಿರಿಯ ಪೊಲೀಸರೊಂದಿಗೆ ಚರ್ಚಿಸಿದ್ದೇನೆ

''ಈ ಸಿನಿಮಾ ಸಂಬಂಧ ಪೊಲೀಸ್ ಇಲಾಖೆಯ ಕೆಲವು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಜುಲೈ 29 ರಂದು ಮತ್ತೆ ಚರ್ಚೆ ಇದೆ'' - ಎ.ಎಂ.ಆರ್ ರಮೇಶ್, ನಿರ್ದೇಶಕ

ಛಲಬಿಡದ ರೂಪಾರಿಂದ ಮತ್ತೊಂದು ವರದಿ ಸಲ್ಲಿಕೆ!

ರೂಪಾ ಅವರ ಅನುಮತಿ ಪಡೆದುಕೊಳ್ಳುತ್ತೇನೆ

''ಈ ಸಿನಿಮಾ ಮಾಡುವುದರ ಬಗ್ಗೆ ರೂಪಾ ಅವರನ್ನು ಸಂಪರ್ಕಿಸಿ ಅನುಮತಿ ಪಡೆದುಕೊಳ್ಳುತ್ತೇನೆ. ಯಾಕಂದ್ರೆ, ಚಿತ್ರದ ಟೈಟಲ್ ನಲ್ಲಿ 'ರೂಪಾ' ಬಳಕೆಯಾಗುವುದರಿಂದ ಅವರ ಅನುಮತಿ ಅಗತ್ಯ'' -ಎ.ಎಂ.ಆರ್ ರಮೇಶ್, ನಿರ್ದೇಶಕ

ಸತ್ಯಾಂಶ ತಿಳಿಯಲು ತನಿಖೆ ನಡೆಸಲಿ : ರೂಪಾ ತಿರುಗೇಟು

ಕನ್ನಡ ಹಾಗೂ ತಮಿಳಿನಲ್ಲಿ ರೂಪಾ ಸಿನಿಮಾ

''ಎಲ್ಲ ಅಂದುಕೊಂಡಂತೆ ಆದರೆ, ಕನ್ನಡ ಹಾಗೂ ತಮಿಳಿನಲ್ಲಿ ಈ ಚಿತ್ರ ನಿರ್ದೇಶಿಸಿ, ನಾನೇ ನಿರ್ಮಾಣ ಮಾಡಲಿದ್ದೇನೆ'' ಎಂದು ನಿರ್ದೇಶಕ ಎ.ಎಂ.ಆರ್ ರಮೇಶ್ ತಿಳಿಸಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

'ಆಸ್ಪೋಟ' ಚಿತ್ರದಲ್ಲಿ ಬ್ಯುಸಿ

ಸದ್ಯ, ಎ.ಎಂ.ಆರ್ ರಮೇಶ್ ಅವರು ರಾಜೀವ್ ಗಾಂಧಿ ಅವರ ಹ್ಯತೆಗೆ ಸಂಬಂಧಿಸಿದ 'ಆಸ್ಪೋಟ' ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಇದಾದ ನಂತರ ಪರಪ್ಪನ ಅಗ್ರಹಾರ ಕುರಿತು ಸಿನಿಮಾ ಮಾಡಲಿದ್ದಾರೆ. ಸದ್ಯ, ಸಿನಿಮಾ ಬಗ್ಗೆ ಚಿಂತನೆ ನಡೆಸಿರುವ ನಿರ್ದೇಶಕರು ತಾರಬಳಗವನ್ನ ಆಯ್ಕೆ ಮಾಡಿಕೊಂಡಿಲ್ಲ.

English summary
Kannada Director AMR Ramesh Planning to Do Movie on IPS Officer Roopa.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada