»   » ಸ್ಯಾಂಡಲ್ ವುಡ್ ಗೆ ಬಂದ ಅಮೃತಸರದ ಭಾನುಶ್ರೀ

ಸ್ಯಾಂಡಲ್ ವುಡ್ ಗೆ ಬಂದ ಅಮೃತಸರದ ಭಾನುಶ್ರೀ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಗೆ ಮತ್ತೊಬ್ಬ ಬೆಡಗಿಯ ಆಗಮನವಾಗಿದೆ. ಅಮೃತಸರದ ಭಾನುಶ್ರೀ ಮೆಹ್ರಾ ಇದೇ ಮೊದಲ ಬಾರಿಗೆ ಕೋಮಲ್ ನಾಯಕ ನಟನಾಗಿರುವ 'ಡೀಲ್ ರಾಜ' ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ರಾಜ್ ಗೋಪಿ ಸೂರ್ಯ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ.

ಅಮೃತಸರದಲ್ಲಿ ಸೆಟ್ಲ್ ಆಗಿರುವ ಪಂಜಾಬಿ ಮನೆತನದ ಬೆಡಗಿ ಭಾನುಶ್ರೀ. ಡೆಹ್ರಾಡೂನ್ ನಲ್ಲಿ ವಿದ್ಯಾಭ್ಯಾಸ ಮುಗಿಸಿದ ಭಾನುಶ್ರೀ ಬಳಿಕ ಮುಂಬೈನ ಸೋಫಿಯಾ ಕಾಲೇಜಿನಲ್ಲಿ ಮಾಸ್ ಮೀಡಿಯಾ ಪದವಿ ಪಡೆದಿದ್ದಾರೆ. [ಕನ್ನಡ ಚಿತ್ರರಂಗಕ್ಕೆ ಗುಡ್ ಬೈ ಹೇಳಲಿರುವ ಕೋಮಲ್]

Actress Bhanusri

ತೆಲುಗು ಚಿತ್ರದ ಮೂಲಕ ದಕ್ಷಿಣಕ್ಕೆ ಅಡಿಯಿಟ್ಟ ಈ ಬೆಡಗಿ ಪಂಜಾಬಿ ಭಾಷೆಯ ಕೆಲ ಚಿತ್ರಗಳಲ್ಲೂ ಬಣ್ಣ ಹಚ್ಚಿದ್ದಾರೆ. ತಮಿಳಿನಲ್ಲೂ ಒಂದು ಪಾದ ಊರಿದ್ದಾರೆ. ಮುಂಬೈನಲಿ ಸೆಟ್ಲ್ ಆಗಿರುವ ಈ ತಾರೆ ದಕ್ಷಿಣ ಭಾರತದ ಚಿತ್ರಗಳು ನಮ್ಮಂತಹವರಿಗೆ ಉತ್ತಮ ವೇದಿಕೆ ಎನ್ನುತ್ತಾರೆ.

ಇನ್ನು 'ಡೀಲ್ ರಾಜ' ಚಿತ್ರದಲ್ಲಿ ಅವರದು ಲೇಡಿ ಪೊಲೀಸ್ ಕಾನ್ಸ್ ಟೇಬಲ್ ಪಾತ್ರ. ಕೋಮಲ್ ಎಂದರೆ ಹಾಸ್ಯಕ್ಕೆ ಒತ್ತು. ಅದರಲ್ಲೂ ಈ ರೀತಿಯ ಪಾತ್ರ ಪೋಷಿಸುತ್ತಿರುವುದು ನಿಜಕ್ಕೂ ನನಗೆ ಖುಷಿ ಕೊಡುತ್ತಿದೆ ಎನ್ನುತ್ತಾರೆ ಭಾನುಶ್ರೀ. (ಫಿಲ್ಮಿಬೀಟ್ ಕನ್ನಡ)

English summary
Punjabi girl Bhanusri Mehra makes her first appearance in Kannada cinema ‘Deal Raja’ opposite Komal Kumar. She plays a lady constable in a police station.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada