For Quick Alerts
  ALLOW NOTIFICATIONS  
  For Daily Alerts

  ಎಲೆಕ್ಷನ್ ನಡುವೆಯೂ ಸ್ಯಾಂಡಲ್ ವುಡ್ ನಲ್ಲಿ ನಡೆಯುತ್ತಿದೆ ಸಂಭ್ರಮ

  By Bharath Kumar
  |

  ರಾಜ್ಯಾದ್ಯಂತ ಚುನಾವಣೆಯ ಬಿಸಿ ಜೋರಾಗಿದೆ. ಪ್ರತಿಯೊಂದು ಊರಿನಲ್ಲೂ ಮತ ಹಾಕಲು ಜನರು ಕ್ಯೂನಲ್ಲಿ ನಿಂತಿದ್ದಾರೆ. ಸಿನಿಮಾ ತಾರೆಯರು ಕೂಡ ಸಿನಿಮಾ, ಶೂಟಿಂಗ್ ಗೆ ಬ್ರೇಕ್ ತಗೊಂಡು ವೋಟ್ ಮಾಡಿದ್ದಾರೆ.

  ನಟ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಯಶ್, ಮಾಲಾಶ್ರೀ, ಶ್ರೀಮುರಳಿ, ಧನಂಜಯ್, ರಾಧಿಕಾ ಪಂಡಿತ್, ರವಿಚಂದ್ರನ್, ಧ್ರುವ ಸರ್ಜಾ, ಜಯಮಾಲ, ಜಯಂತಿ, ಲೀಲಾವತಿ ಸೇರಿದಂತೆ ಹಲವು ಸಿನಿಮಾ ನಟಿ-ನಟಿಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.

  ದಿನ ಪೂರ್ತಿ ವೋಟಿಂಗ್ ನಲ್ಲಿ ಮುಳುಗಿಹೋಗಿರುವ ಸ್ಯಾಂಡಲ್ ವುಡ್ ನಲ್ಲಿ ಬೇರೆ ಸಂಭ್ರಮವೂ ಹೆಚ್ಚಾಗಿದೆ. ಕೆಲವು ಸೆಲೆಬ್ರಿಟಿಗಳು ಬರ್ತಡೇ, ವಿವಾಹ ವಾರ್ಷಿಕೋತ್ಸವವನ್ನ ಇಂದೇ ಆಚರಿಸಿಕೊಳ್ಳುತ್ತಿದ್ದಾರೆ. ಯಾರದು.?

  ಅಮೂಲ್ಯ ವಿವಾಹ ವಾರ್ಷಿಕೋತ್ಸವ

  ಅಮೂಲ್ಯ ವಿವಾಹ ವಾರ್ಷಿಕೋತ್ಸವ

  ಚುನಾವಣೆ ದಿನವಾದ ಇಂದು ಗೋಲ್ಡನ್ ಕ್ವೀನ್ ಅಮೂಲ್ಯಗೆ ಮತ್ತೊಂದು ಸಿಹಿ ಸುದ್ದಿ. ಇಂದು ಅಮೂಲ್ಯ ಮತ್ತು ಜಗದೀಶ್ ದಂಪತಿಯ ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವ. ಕಳೆದ ವರ್ಷ ಮೇ 12 ರಂದು ಆದಿಚುಂಚನಗಿರಿಯಲ್ಲಿ ಜಗ್ಗಿ-ಅಮ್ಮು ಸಪ್ತಪದಿ ತುಳಿದಿದ್ದರು.

  ಅಭಿಜಿತ್ ಶುಭ ಲಗ್ನದಲ್ಲಿ ಅಮೂಲ್ಯಗೆ ಜಗದೀಶ್ 'ಮಾಂಗಲ್ಯ ಧಾರಣೆ'ಅಭಿಜಿತ್ ಶುಭ ಲಗ್ನದಲ್ಲಿ ಅಮೂಲ್ಯಗೆ ಜಗದೀಶ್ 'ಮಾಂಗಲ್ಯ ಧಾರಣೆ'

  ನಿರಂಜನ್ ವಿವಾಹ ವಾರ್ಷಿಕೋತ್ಸವ

  ನಿರಂಜನ್ ವಿವಾಹ ವಾರ್ಷಿಕೋತ್ಸವ

  ಅಮೂಲ್ಯ ಮತ್ತು ಜಗದೀಶ್ ಜೋಡಿ ವಿವಾಹವಾದ ದಿನವೇ ನಿರೂಪಕ ಕಮ್ ನಟ ನಿಂರಜನ್ ದೇಶಪಾಂಡೆ ಅವರ ಮದುವೆ ಕೂಡ ನೆರವೇರಿತ್ತು. ಹೀಗಾಗಿ, ನಿರಂಜನ್ ದಂಪತಿಗೂ ಇಂದು ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮವಾಗಿದೆ.

  'ಯಶಸ್ವಿ'ಯಾಗಿ ನೆರವೇರಿದ 'ಬಿಗ್ ಬಾಸ್' ನಿರಂಜನ್ ದೇಶಪಾಂಡೆ ಮದುವೆ'ಯಶಸ್ವಿ'ಯಾಗಿ ನೆರವೇರಿದ 'ಬಿಗ್ ಬಾಸ್' ನಿರಂಜನ್ ದೇಶಪಾಂಡೆ ಮದುವೆ

  ಉಪೇಂದ್ರ ಮಗನ ಹುಟ್ಟುಹಬ್ಬ

  ಉಪೇಂದ್ರ ಮಗನ ಹುಟ್ಟುಹಬ್ಬ

  ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ದಂಪತಿಯ ಮಗ ಆಯುಶ್ ಅವರ ಹುಟ್ಟುಹಬ್ಬ ಕೂಡ ಇದೇ ದಿನ. ಮಗನ ಹುಟ್ಟುಹಬ್ಬಕ್ಕೆ ತಾಯಿ ಟ್ವಿಟ್ಟರ್ ಮೂಲಕ ಶುಭಕೋರಿದ್ದಾರೆ.

  ನಿವೇದಿತಾ ಗೌಡ ಹುಟ್ಟುಹಬ್ಬ

  ನಿವೇದಿತಾ ಗೌಡ ಹುಟ್ಟುಹಬ್ಬ

  ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರಿಗೂ ಇಂದು ಹುಟ್ಟುಹಬ್ಬ. ಮೇ 12ಕ್ಕೆ ನಿವೇದಿತಾ ಗೌಡ 18ನೇ ವರ್ಷದ ಬರ್ತಡೇ ಆಚರಿಸಿಕೊಂಡಿದ್ದಾರೆ. ಇದೇ ವೇಳೆ ತಮ್ಮ ಚೊಚ್ಚಲ ಮತದಾನ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

  ಮೊದಲ ಸಲ ವೋಟ್ ಮಾಡಿದ ನಿವೇದಿತಾ: 'ಗೊಂಬೆ'ಗೆ ಡಬಲ್ ಖುಷಿಮೊದಲ ಸಲ ವೋಟ್ ಮಾಡಿದ ನಿವೇದಿತಾ: 'ಗೊಂಬೆ'ಗೆ ಡಬಲ್ ಖುಷಿ

  English summary
  Kannada actress amulya and jagadish celebrating first wedding anniversary. and actor niranjan deshpande also celebrate his first wedding anniversary.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X