»   » ಗಣೇಶ್ ಹಾಗೂ ಶಿಲ್ಪಾ ಗಣೇಶ್ ಗೆ 'ಥ್ಯಾಂಕ್ಸ್' ಹೇಳಿದ ನಟಿ ಅಮೂಲ್ಯ

ಗಣೇಶ್ ಹಾಗೂ ಶಿಲ್ಪಾ ಗಣೇಶ್ ಗೆ 'ಥ್ಯಾಂಕ್ಸ್' ಹೇಳಿದ ನಟಿ ಅಮೂಲ್ಯ

Posted By:
Subscribe to Filmibeat Kannada

'ಗೋಲ್ಡನ್ ಕ್ವೀನ್' ಅಮೂಲ್ಯ ರವರಿಗೆ 'ಗೋಲ್ಡನ್ ಕಿಂಗ್' ಸಿಕ್ಕಿರುವ ಸುದ್ದಿ ನಿಮಗೆ ಗೊತ್ತೇ ಇದೆ. ಮಾರ್ಚ್ 6 ರಂದು ನಟಿ ಅಮೂಲ್ಯ ಹಾಗೂ ಜಗದೀಶ್ ರವರ ನಿಶ್ಚಿತಾರ್ಥ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ.

ಅಂದ್ಹಾಗೆ, ದಿಢೀರ್ ಅಂತ 'ಮದುವೆ' ಸುದ್ದಿ ಕೊಟ್ಟಿರುವ ನಟಿ ಅಮೂಲ್ಯ ಈಗ ಅದೇ ವಿಚಾರವಾಗಿ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಗಣೇಶ್ ರವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಯಾಕೆ ಅಂತೀರಾ.? ಮುಂದೆ ಓದಿ....

ಮೊಟ್ಟ ಮೊದಲ ಸೆಲ್ಫಿ ಕ್ಲಿಕ್ ಮಾಡಿ.. ಧನ್ಯವಾದ ಅರ್ಪಣೆ

ತಾವು ಕೈಹಿಡಿಯಲಿರುವ ಕುವರ ಜಗದೀಶ್ ರವರ ಜೊತೆ ಮೊಟ್ಟ ಮೊದಲ ಸೆಲ್ಫಿ ಕ್ಲಿಕ್ ಮಾಡಿಕೊಂಡು, ನಟ ಗಣೇಶ್ ಹಾಗೂ ಶಿಲ್ಪಾ ಗಣೇಶ್ ರವರಿಗೆ ಅಮೂಲ್ಯ 'ಥ್ಯಾಂಕ್ಸ್' ಹೇಳಿದ್ದಾರೆ.[ನಟಿ ಅಮೂಲ್ಯಗೆ ಕೂಡಿ ಬಂತು ಕಂಕಣ ಭಾಗ್ಯ: ಹುಡುಗ ಯಾರು.?]

ನಾನು ಧನ್ಯ.!

''ಏನೇ ಆದರೂ ನನಗೆ ಬೆನ್ನೆಲುಬಾಗಿ ನಿಂತಿರುವ ನೀವಿಬ್ಬರೂ ನನಗೆ ಸಿಕ್ಕಿರುವುದು ನನ್ನ ಪುಣ್ಯ'' ಎಂತಲೂ ನಟಿ ಅಮೂಲ್ಯ ಟ್ವೀಟ್ ಮಾಡಿದ್ದಾರೆ.[ಮದುವೆ ನಂತರ ನಟನೆಗೆ ಗುಡ್ ಬೈ ಹೇಳ್ತಾರಾ ನಟಿ ಅಮೂಲ್ಯ.?]

ಗಣೇಶ್ ಮನೆಯಲ್ಲಿಯೇ ಅಮೂಲ್ಯ-ಜಗದೀಶ್ ಪರಿಚಯ

ಅಸಲಿಗೆ, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಗಣೇಶ್ ರವರಿಗೆ ಜಗದೀಶ್ ಅತ್ಯಾಪ್ತ. ಗಣೇಶ್ ಕುಟುಂಬದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಜಗದೀಶ್ ರವರಿಗೆ ಅಮೂಲ್ಯ ಪರಿಚಯ ಆಗಿರುವುದು ಗಣಿ ಮನೆಯಲ್ಲಿಯೇ.

ಗಣಿ ಮನೆಯಲ್ಲಿಯೇ ಮದುವೆ ಮಾತುಕತೆ ಆಗಿದ್ದು!

ಇನ್ನೂ, ಅಮೂಲ್ಯ-ಜಗದೀಶ್ ರವರ ಮದುವೆ ಮಾತುಕತೆ ಕೂಡ ನಡೆದದ್ದು ಗಣೇಶ್ ರವರ ನಿವಾಸದಲ್ಲಿಯೇ. ಹೀಗಾಗಿ, ಗಣೇಶ್ ದಂಪತಿಗೆ ಅಮೂಲ್ಯ ಧನ್ಯವಾದ ಸಲ್ಲಿಸಿದ್ದಾರೆ.

English summary
Kannada Actress Amulya has taken her twitter account to thank Kannada Actor Ganesh and Shilpa Ganesh for introducing Jagadeesh to her.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada