»   » 'ದಿ ವಿಲನ್' ಬಳಿಕ ರಮೇಶ್ ಅರವಿಂದ್ ಸಿನಿಮಾದಲ್ಲಿ ಆಮಿ ಜಾಕ್ಸನ್!

'ದಿ ವಿಲನ್' ಬಳಿಕ ರಮೇಶ್ ಅರವಿಂದ್ ಸಿನಿಮಾದಲ್ಲಿ ಆಮಿ ಜಾಕ್ಸನ್!

Posted By:
Subscribe to Filmibeat Kannada

ಬ್ರಿಟಿಷ್ ಬ್ಯೂಟಿ ಆಮಿ ಜಾಕ್ಸನ್ ಕನ್ನಡಕ್ಕೆ ಬರುವುದು ಪಕ್ಕಾ ಆಗಿತ್ತು. 'ದಿ ವಿಲನ್' ಸಿನಿಮಾದ ಮೂಲಕ ಈ ಚೆಂದದ ಗೊಂಬೆ ಸ್ಯಾಂಡಲ್ ವುಡ್ ಅಂಗಳಕ್ಕೆ ಕಾಲಿಡುತ್ತಿದ್ದಾರೆ. ಇದರ ಜೊತೆಗೆ ರಮೇಶ್ ಅರವಿಂದ್ ಅವರ ಚಿತ್ರದಲ್ಲೂ ಆಮಿ ಜಾಕ್ಸನ್ ನಟಿಸುತ್ತಿದ್ದಾರೆ.

ಜೋಗಿ ಪ್ರೇಮ್ ಕರೆ ತಂದ ಈ ಬೆಡಗಿ ಮೇಲೆ ಈಗ ಸ್ಯಾಂಡಲ್ ವುಡ್ ಮಂದಿಯ ಕಣ್ಣು ಬಿದ್ದಿದೆ. ಸದ್ಯ, ರಜನಿಕಾಂತ್ ಅವರ '2.0' ಸಿನಿಮಾದಲ್ಲಿ ನಟಿಸಿರುವ ಆಮಿ ಜಾಕ್ಸನ್, ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿದ್ದು, ಚಂದನವನದ ರಾಣಿಯಾಗಲು ಹೆಜ್ಜೆ ಇಟ್ಟಿದ್ದಾರೆ.['ದಿ ವಿಲನ್' ಹೀರೋಯಿನ್ ಬಗ್ಗೆ ಬ್ರೇಕ್ ಆಗಿರುವ ಬ್ಲಾಸ್ಟಿಂಗ್ ನ್ಯೂಸ್ ಇದು.!]

'ದಿ ವಿಲನ್' ಚಿತ್ರದ ಜೊತೆ ಆಮಿ ಜಾಕ್ಸನ್ ಅಭಿನಯಿಸುತ್ತಿರುವ ಇನ್ನೊಂದು ಚಿತ್ರ ಯಾವುದು ಎಂದು ತಿಳಿದುಕೊಳ್ಳಲು ಮುಂದೆ ಓದಿ.....

ರಮೇಶ್ ನಿರ್ದೇಶನದ ಚಿತ್ರ

ನಟ ರಮೇಶ್ ಅರವಿಂದ್ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದಲ್ಲಿ ನಟಿ ಆಮಿ ಜಾಕ್ಸನ್ ನಟಿಸಲಿದ್ದಾರೆ.

'ಬಟರ್ ಫ್ಲೈ' ಸಿನಿಮಾ

ರಮೇಶ್ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾ 'ಬಟರ್ ಫ್ಲೈ'ನಲ್ಲಿ ಹಾಟ್ ಬ್ಯೂಟಿ ಆಮಿ ಜಾಕ್ಸನ್ ಕಾಣಿಸಿಕೊಳ್ಳುತ್ತಿದ್ದಾರೆ.[ಕಂಗನಾ ರ 'ಕ್ವೀನ್' ಕನ್ನಡಕ್ಕೆ ರಿಮೇಕ್]

'ಕ್ವೀನ್' ರಿಮೇಕ್

'ಬಟರ್ ಫ್ಲೈ'' ಸಿನಿಮಾ ಬಾಲಿವುಡ್ ನಲ್ಲಿ 2014 ರಲ್ಲಿ ಬಂದ ಕಂಗನಾ ಅಭಿನಯದ 'ಕ್ವೀನ್' ಚಿತ್ರದ ರಿಮೇಕ್ ಆಗಿದೆ.

ಪಾರುಲ್ ಯಾದವ್ ನಾಯಕಿ

ನಟಿ ಪಾರುಲ್ ಯಾದವ್ ಕನ್ನಡದಲ್ಲಿ ನಾಯಕಿಯಾಗಿದ್ದಾರೆ. ನಾಯಕಿಯಷ್ಟೇ ಪ್ರಾಮುಖ್ಯತೆ ಹೊಂದಿರುವ ಮತ್ತೊಂದು ಪಾತ್ರದಲ್ಲಿ ಆಮಿ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಈ ಪಾತ್ರವನ್ನು ಲೀಸಾ ಹೇಡನ್ ನಿರ್ವಹಿಸಿದ್ದರು.[ಯಶ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ 'ಪ್ಯಾರ್ಗೆ' ಪಾರುಲ್: ಏಕೆ ಗೊತ್ತಾ?]

ನಾಲ್ಕು ಭಾಷೆಗಳಲ್ಲಿಯೂ ಆಮಿ ನಟನೆ

'ಕ್ವೀನ್' ರಿಮೇಕ್ ಸಿನಿಮಾ ಸೌತ್ ಚಿತ್ರರಂಗದ ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದ್ದು, ಎಲ್ಲ ಭಾಷೆಗಳಲ್ಲಿ ಆಮಿ ಜಾಕ್ಸನ್ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿಯರು ಮಾತ್ರ ಬದಲಾಗುತ್ತಾರೆ.

ತಮಿಳು, ಮಲಯಾಳಂನಲ್ಲಿ ಯಾರು?

ತಮಿಳಿನಲ್ಲಿ ತಮನ್ನಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದ್ರೆ, ಈ ಚಿತ್ರದ ನಾಯಕಿ ನಟಿ ತಮನ್ನಾ ಹಿಂದೆ ಸರಿದಿದ್ದಾರಂತೆ. ಇನ್ನು ಮಲಯಾಳಂನಲ್ಲಿ ಅಮಲಾ ಪೌಲ್ ನಾಯಕಿಯಾಗುವ ಸಾಧ್ಯತೆ ಇದೆಯಂತೆ.

ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ

'ಕ್ವೀನ್' ಸಿನಿಮಾ 2015 ರಲ್ಲಿ ನಾಲ್ಕು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದ ಸಿನಿಮಾವಾಗಿದೆ. ಈ ಕಾರಣದಿಂದ ಸೌತ್ ನಲ್ಲಿ ಮೂಡಲಿರುವ 'ಕ್ವೀನ್' ಬಗ್ಗೆ ನಿರೀಕ್ಷೆ ಬಹಳ ದೊಡ್ಡದಿದೆ.

English summary
Actress Amy jackson is selected to play a special role in 'butter fly' kannada movie directed by ramesh aravind.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada