»   » 'ದಿ ವಿಲನ್' ಹೀರೋಯಿನ್ ಬಗ್ಗೆ ಬ್ರೇಕ್ ಆಗಿರುವ ಬ್ಲಾಸ್ಟಿಂಗ್ ನ್ಯೂಸ್ ಇದು.!

'ದಿ ವಿಲನ್' ಹೀರೋಯಿನ್ ಬಗ್ಗೆ ಬ್ರೇಕ್ ಆಗಿರುವ ಬ್ಲಾಸ್ಟಿಂಗ್ ನ್ಯೂಸ್ ಇದು.!

Posted By: Naveen
Subscribe to Filmibeat Kannada

'ಜೋಗಿ' ಪ್ರೇಮ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ದಿ ವಿಲನ್' ಸಿನಿಮಾ ಸ್ಯಾಂಡಲ್ ವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಲೇ ಇದೆ. ಕನ್ನಡದಲ್ಲಿ ಮೆಗಾ ಬಜೆಟ್ ಸಿನಿಮಾವಾಗಿರುವ 'ದಿ ವಿಲನ್' ಗಾಗಿ ಟಾಪ್ ನಟಿಯನ್ನೇ ಕರೆತರಬೇಕು ಎಂದು ಪ್ರೇಮ್ ತುಂಬ ಪ್ರಯತ್ನ ಪಟ್ಟಿದ್ದರು. ಪ್ರೇಮ್ ಪ್ರಯತ್ನಕ್ಕೆ ಕಡೆಗೂ ಪ್ರತಿಫಲ ಸಿಕ್ಕಿದೆ.

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ 'ದಿ ವಿಲನ್' ಸಿನಿಮಾಗೆ ಅಂತೂ ನಾಯಕಿ ಸಿಕ್ಕಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿರುವ ಸುರಸುಂದರಿ ಈಗ ಸ್ಯಾಂಡಲ್ ವುಡ್ ಕಡೆ ಮುಖ ಮಾಡಲು ಮನಸ್ಸು ಮಾಡಿದ್ದಾರೆ. ಅದ್ಯಾರು ಅಂತ ತಿಳಿದುಕೊಳ್ಳಲು ಕುತೂಹಲ ಇದ್ದರೆ, ಪೂರ್ತಿ ಮ್ಯಾಟರ್ ಓದಿರಿ.....

'ದಿ ವಿಲನ್' ಚಿತ್ರದಲ್ಲಿ ಬ್ರಿಟಿಷ್ ಬ್ಯೂಟಿ

'ದಿ ವಿಲನ್' ಸಿನಿಮಾದ ಹೀರೋಯಿನ್ ಪಾತ್ರಕ್ಕೆ ಕಾಜಲ್ ಅಗರ್ವಾಲ್, ಶೃತಿ ಹಾಸನ್, ತಾಪ್ಸಿ, ಅನುಷ್ಕಾ ಶೆಟ್ಟಿ, ತಮನ್ನಾ ಸೇರಿದಂತೆ ಸಾಕಷ್ಟು ನಟಿಮಣಿಯರ ಹೆಸರು ಹರಿದಾಡಿತ್ತು. ಆದರೆ, ಈಗ 'ದಿ ವಿಲನ್' ಚಿತ್ರಕ್ಕೆ ಗ್ಲಾಮರ್ ಗೊಂಬೆ ಎಂಟ್ರಿಕೊಟ್ಟಿದ್ದಾರೆ. ಕಾಲಿವುಡ್ ನಲ್ಲಿ ಲೀಡಿಂಗ್ ನಲ್ಲಿರುವ ತಾರೆ ಆಮಿ ಜಾಕ್ಸನ್ ಈಗ ಚಂದನವನಕ್ಕೆ ಬಲಗಾಲಿಟ್ಟು ಬರಲಿದ್ದಾರೆ.

ಗಾಸಿಪ್ ಖಂಡಿತ ಅಲ್ಲ!

ಹೇಳಿ ಕೇಳಿ, ಪ್ರೇಮ್ ಗಿಮಿಕ್ ಮಾಡುವುದರಲ್ಲಿ ಫೇಮಸ್. ಹೀಗಾಗಿ, 'ದಿ ವಿಲನ್' ಚಿತ್ರದಲ್ಲಿ ಆಮಿ ಜಾಕ್ಸನ್ ನಟಿಸುವ ಸುದ್ದಿ ಒನ್ಸ್ ಅಗೇನ್ ಗಾಸಿಪ್ ಇರಬಹುದು ಅಂತ ನೀವು ಭಾವಿಸಬಹುದು. ಆದ್ರೆ ಇದು ಖಂಡಿತ ಗಾಸಿಪ್ ಅಲ್ಲ. ಆಮಿ ಜಾಕ್ಸನ್ 'ದಿ ವಿಲನ್' ಚಿತ್ರದಲ್ಲಿ ನಟಿಸುವುದು ಪಕ್ಕಾ ಆಗಿದೆ.

ಡೇಟ್ಸ್ ಪ್ರಾಬ್ಲಂ ಇತ್ತು

ಸದ್ಯ ಆಮಿ ಜಾಕ್ಸನ್ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ರಜನಿಕಾಂತ್ ಜೊತೆ '2.0' ಸಿನಿಮಾದ ಶೂಟಿಂಗ್ ನಲ್ಲಿ ಆಮಿ ಬಿಜಿಯಾಗಿದ್ದು, ಡೇಟ್ಸ್ ಪ್ರಾಬ್ಲಂ ಆಗಿತ್ತಂತೆ. ಆದರೆ ಈಗ ಡೇಟ್ಸ್ ಸಮಸ್ಸೆ ಬಗೆಹರಿದಿದ್ದು, ಆಮಿ ಜಾಕ್ಸನ್ ಕಾಲ್ ಶೀಟ್ ಸಿಕ್ಕಿದೆಯಂತೆ.

ಆಮಿ ಜಾಕ್ಸನ್ ಆಯ್ಕೆಗೆ ಕಾರಣ

ಪ್ರೇಮ್ ಈ ಚಿತ್ರಕ್ಕೆ ಆಮಿ ಜಾಕ್ಸನ್ ಬೇಕೇ ಬೇಕು ಅಂತ ನಿರ್ಧಾರ ಮಾಡಿದ್ದರು. ಅದರಂತೆ ಆಮಿ ಜಾಕ್ಸನ್ ರವರನ್ನ ಕರೆತಂದಿದ್ದಾರೆ.

ಪಾತ್ರ ಏನು.?

'ದಿ ವಿಲನ್' ಚಿತ್ರಕ್ಕೆ ಆಮಿ ಜಾಕ್ಸನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನುವುದು ಬಿಟ್ಟರೆ, ಸಿನಿಮಾದಲ್ಲಿ ಅವರ ಪಾತ್ರವೇನು ಎಂಬುದು ಇನ್ನೂ ಸಸ್ಪೆನ್ಸ್ ಆಗೇ ಉಳಿದಿದೆ.

ಯಾರಿಗೆ ಜೋಡಿ.?

'ದಿ ವಿಲನ್' ಚಿತ್ರದಲ್ಲಿ ಶಿವಣ್ಣ ಮತ್ತು ಸುದೀಪ್.. ಇಬ್ಬರು ನಟರಿದ್ದಾರೆ. ಈ ಇಬ್ಬರು ಸ್ಟಾರ್ ನಟರ ಪೈಕಿ ಆಮಿ ಯಾರ ಜೋಡಿ ಆಗ್ತಾರೆ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ.

ಬಹು ಬೇಡಿಕೆ

'ಮದರಾಸಿ ಪಟ್ಟಣಂ' ಸಿನಿಮಾದ ಮೂಲಕ ಕಾಲಿವುಡ್ ಗೆ ಪರಿಚಿತರಾದ ಆಮಿ ಜಾಕ್ಸನ್ ಮುಂದೆ ಬಾಲಿವುಡ್ ನಲ್ಲಿ ಕೆಲ ಸಿನಿಮಾಗಳಲ್ಲಿ ನಟಿಸಿದರು. ಶಂಕರ್ ನಿರ್ದೇಶನದ ಸೂಪರ್ ಹಿಟ್ 'ಐ' ಸಿನಿಮಾದಲ್ಲಿ ಆಮಿ ಜಾಕ್ಸನ್ ಅಭಿನಯಿಸಿದ್ದು, ಸದ್ಯ ರಜನಿಕಾಂತ್ ಜೊತೆ '2.0' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

English summary
Actress 'Amy Jackson' to make Sandalwood Debut through Kannada Movie 'The Villain' staring Shivaraj Kumar and Sudeep. The movie directed by Prem.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada