»   » ಕಂಗನಾ ರ 'ಕ್ವೀನ್' ಕನ್ನಡಕ್ಕೆ ರಿಮೇಕ್

ಕಂಗನಾ ರ 'ಕ್ವೀನ್' ಕನ್ನಡಕ್ಕೆ ರಿಮೇಕ್

Posted By:
Subscribe to Filmibeat Kannada

ಬಾಲಿವುಡ್ ಗುಂಗುರು ಕೂದಲ ಬೆಡಗಿ ಕಂಗನಾ ರಣಾವತ್ ಅಭಿನಯದ ''ಕ್ವೀನ್' ಚಿತ್ರ ಈಗ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ರಿಮೇಕ್ ಆಗುತ್ತಿದೆ.[ಅಮೆರಿಕಾ-ಕೆನಡಾದಲ್ಲಿ ಹಾರಲಿದೆ 'ಪುಷ್ಪಕ ವಿಮಾನ'!]

ಕಂಗನಾ ರಣಾವತ್ ಗೆ 'ಕ್ವೀನ್' ಚಿತ್ರ ದೇಶದಾದ್ಯಂತ ಉತ್ತಮ ಪ್ರಶಂಸೆ ಗಿಟ್ಟಿಸಿಕೊಟ್ಟಿತ್ತು. ಎಲ್ಲರೂ ಮೆಚ್ಚಿದಂತ ಈ ಸಿನಿಮಾವನ್ನು ಕನ್ನಡದಲ್ಲಿ ಯಾರು ನಿರ್ದೇಶಿಸಲಿದ್ದಾರೆ, ಕಂಗನಾ ರಣಾವತ್ ಪಾತ್ರವನ್ನು ಯಾವ ನಟಿ ಪೋಷಿಸಲಿದ್ದಾರೆ ಎಂಬಿತ್ಯಾದಿ ಮಾಹಿತಿ ಈ ಕೆಳಗಿನಂತಿದೆ.

ಬಾಲಿವುಡ್ 'ಕ್ವೀನ್' ಕನ್ನಡ ಅವತರಣಿಕೆ ಗೆ ರಮೇಶ್ ಆಕ್ಷನ್ ಕಟ್

ಸೆಂಚುರಿ ಸ್ಟಾರ್ ರಮೇಶ್ ಅರವಿಂದ್ ಅವರು ಬಾಲಿವುಡ್ 'ಕ್ವೀನ್' ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡಲು ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗಿದೆ. ಅಲ್ಲದೇ ಇದೇ ಮೊದಲ ಬಾರಿಗೆ ತೆಲುಗು ಸಿನಿಮಾ ನಿರ್ದೇಶನ ಮಾಡುತ್ತಿದ್ದು, ತೆಲುಗಿನ 'ಕ್ವೀನ್' ರಿಮೇಕ್ ಚಿತ್ರಕ್ಕೂ ಇವರೇ ಆಕ್ಷನ್ ಕಟ್ ಹೇಳುತ್ತಿದ್ದಾರಂತೆ.[ರಮೇಶ್-ಗಣೇಶ್ 'ಸುಂದರಾಂಗ ಜಾಣ' ಚಿತ್ರದ ಸೂಪರ್ ಸ್ಪೆಷಾಲಿಟಿಗಳು]

'ಕ್ವೀನ್' ರಿಮೇಕ್ ಯಾವ್ಯಾವ ಭಾಷೆಗಳಲ್ಲಿ?

ಸದ್ಯದಲ್ಲಿ ಈಗ ದಕ್ಷಿಣ ಭಾರತದ ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಕ್ವೀನ್ ಚಿತ್ರವನ್ನು ರಿಮೇಕ್ ಮಾಡಲಾಗುತ್ತಿದೆ. ಕನ್ನಡ ಮತ್ತು ತೆಲುಗು ರಿಮೇಕ್ ಚಿತ್ರಕ್ಕೆ ನಟ-ನಿರ್ಮಾಪಕ ರಮೇಶ್ ಅರವಿಂದ್ ಆಕ್ಷನ್ ಕಟ್ ಹೇಳಲಿದ್ದಾರೆ. ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಮೂಡಿ ಬರಲಿರುವ ರಿಮೇಕ್ ಚಿತ್ರವನ್ನು ರೇವತಿ ಅವರು ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿದೆ.

ಕನ್ನಡದ 'ಕ್ವೀನ್' ರಿಮೇಕ್ ಚಿತ್ರದಲ್ಲಿ ನಟಿ ಇವರೇ..

ಅಂದಹಾಗೆ ಕನ್ನಡದ 'ಕ್ವೀನ್' ರಿಮೇಕ್ ಚಿತ್ರದಲ್ಲಿ ರಾಣಿಯ ಪಾತ್ರವನ್ನು ಪಾರುಲ್ ಯಾದವ್ ಪೋಷಿಸಲಿದ್ದಾರೆ ಎನ್ನಲಾಗಿದೆ.

ಇತರೆ ಭಾಷೆಗಳಲ್ಲಿ 'ಕ್ವೀನ್' ನಾಯಕಿ ಯಾರು?

'ಕ್ವೀನ್' ತೆಲುಗು ಮತ್ತು ತಮಿಳು ರಿಮೇಕ್ ಚಿತ್ರದಲ್ಲಿ ತಮನ್ನಾ ಭಾಟಿಯಾ ನಾಯಕಿ ಆಗಿ ಕಾಣಿಸಿಕೊಳ್ಳಲಿದ್ದು, ಮಲಯಾಳಂ ರಿಮೇಕ್ ಚಿತ್ರದಲ್ಲಿ ಅಮಲಾ ಪೌಲ್ ನಟಿ ಪಾತ್ರ ನಿರ್ವಹಿಸಲಿದ್ದಾರೆ ಎನ್ನಲಾಗಿದೆ.

'ಕ್ವೀನ್' ರಿಮೇಕ್ ಚಿತ್ರದ ನಿರ್ಮಾಪಕರು ಯಾರು?

ಲಂಡನ್ ಮೂಲದ ನಿರ್ಮಾಪಕರು 'ಕ್ವೀನ್' ರಿಮೇಕ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ ಎಂದು ಮೂಲಗಳ ಪ್ರಕಾರ ತಿಳಿಯಲಾಗಿದ್ದು, ಇವರೇ ರಮೇಶ್ ಅರವಿಂದ್ ಅವರನ್ನು ತೆಲುಗು ಮತ್ತು ಕನ್ನಡ ಅವತರಣಿಕೆ ಚಿತ್ರ ನಿರ್ದೇಶನ ಮಾಡಲು ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ.

'ಕ್ವೀನ್' ರಿಮೇಕ್ ಚಿತ್ರ ನಿರ್ಮಾಣದ ಬಗ್ಗೆ ಫೆಬ್ರವರಿ ಅಂತ್ಯಕ್ಕೆ ಚಿತ್ತೀಕರಣ ಆರಂಭವಾಗುವ ಬಗ್ಗೆ ಮಾಹಿತಿ ಹೊರಬೀಳಲಿದೆ ಎಂದು ತಿಳಿಯಲಾಗಿದೆ.

English summary
Queen remake in kannada, Telugu by Actor and Director Ramesh Aravind. While Parul Yadav will be playing the Queen’s role in Sandalwood, Tamannaah will be seen playing the lead in the Telugu remake of Queen.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada