»   » ಸುದೀಪ್ ಕ್ಲಿಕ್ಕಿಸಿದ ಫೋಟೋ: ಈ ಚಿತ್ರದಲ್ಲಿರುವ ನಟಿ ಯಾರು?

ಸುದೀಪ್ ಕ್ಲಿಕ್ಕಿಸಿದ ಫೋಟೋ: ಈ ಚಿತ್ರದಲ್ಲಿರುವ ನಟಿ ಯಾರು?

Posted By:
Subscribe to Filmibeat Kannada

ಪ್ರತಿ ವಾರ 'ಬಿಗ್ ಬಾಸ್' ವೇದಿಕೆಗೆ ಬರುವ ಕಿಚ್ಚ ಸುದೀಪ್ ಸದ್ಯ 'ದಿ ವಿಲನ್' ಚಿತ್ರದ ಶೂಟಿಂಗ್ ಮಾಡುತ್ತಿದ್ದಾರೆ. ಚಿಕ್ಕಮಗಳೂರಿನಲ್ಲಿ 'ವಿಲನ್' ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ನಿರ್ದೇಶಕ ಪ್ರೇಮ್ ಬಿಡುವಿಲ್ಲದೇ ಶೂಟಿಂಗ್ ಮಾಡ್ತಿದ್ದಾರೆ.

ಇದೀಗ, 'ವಿಲನ್' ಅಡ್ಡಾದಿಂದ ಒಂದು ಫೋಟೋ ವೈರಲ್ ಆಗಿದೆ. ಮುಸ್ಸಂಜೆ ವೇಳೆಯಲ್ಲಿ ಸೂರ್ಯಾಸ್ತಮದ ಸಮಯದಲ್ಲಿ ಕೆರೆಯ ದಡದಲ್ಲಿ ಓರ್ವ ಮಹಿಳೆ ನಿಂತಿರುವುದು. ಸೂರ್ಯನ ಕಿರಣಗಳು ಆ ನದಿಯನ್ನ ಮುತ್ತಿಡುತ್ತಿರುವುದು. ಈ ಫೋಟೋ ನೋಡುತ್ತಿದ್ದರೇ, ಅದೇನೋ ಒಂಥರಾ ಚೆಂದವೆನ್ನಿಸುತ್ತಿದೆ.

ಸುದೀಪ್-ಶಿವಣ್ಣ 'ದಿ ವಿಲನ್' ಚಿತ್ರಕ್ಕೆ ಅಸಲಿ ವಿಲನ್ ಎಂಟ್ರಿ.!

Amy jackson photo Taken by Sudeep

ಅಂದ್ಹಾಗೆ, ಇಂತಹ ಅದ್ಭುತವಾದ ಫೋಟೋ ಕ್ಲಿಕ್ ಮಾಡಿರುವುದು ನಟ ಸುದೀಪ್. ಹೌದು, ಕಿಚ್ಚನ ಕೈಚಳಕದಲ್ಲಿ ಸೆರೆಯಾಗಿರುವ ಚಿತ್ರ ಇದು. ಇನ್ನು ಈ ಚಿತ್ರದಲ್ಲಿ ನಿಂತಿರುವ ಹುಡುಗಿ ಯಾರೆಂದು ಈಗಾಗಲೇ ನಿಮಗೆ ಗೊತ್ತಾಗಿರಬಹುದು. ವಿಲನ್ ಬೆಡಗಿ ಆಮಿ ಜಾಕ್ಸನ್.

ಆಮಿ ಜಾಕ್ಸನ್ ಕಡೆಯಿಂದ 'ದಿ ವಿಲನ್' ಚಿತ್ರಕ್ಕೆ ಸಮಸ್ಯೆ!

ಸದ್ಯ, ಚಿಕ್ಕಮಗಳೂರಿನಲ್ಲಿ 'ವಿಲನ್' ಚಿತ್ರದ ಶೂಟಿಂಗ್ ನಡೆಯುತ್ತಿದೆ. ಪ್ರೇಮ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಸುದೀಪ್, ಶಿವರಾಜ್ ಕುಮಾರ್ ಒಟ್ಟಿಗೆ ಅಭಿನಯಿಸುತ್ತಿದ್ದಾರೆ. ಆಮಿ ಜಾಕ್ಸನ್ ನಾಯಕಿಯಾಗಿದ್ದಾರೆ. ಉಳಿದಂತೆ ಶ್ರುತಿ ಹರಿಹರನ್, ಬಾಲಿವುಡ್ ನಟ ಮಿಥುನ್ ಚಕ್ರವರ್ತಿ, ತೆಲುಗು ನಟ ಶ್ರೀಕಾಂತ್ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ.

English summary
Actress Amy jackson pic Taken by Kiccha Sudeep in chikmagalur. ಚಿಕ್ಕಮಗಳೂರಿನ ಸುಂದರ ತಾಣದಲ್ಲಿ ಆಮಿ ಜಾಕ್ಸನ್ ಅವರ ಫೋಟೋ ಕ್ಲಿಕ್ಕಿಸಿದ ಕಿಚ್ಚ ಸುದೀಪ್.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada