»   » ಮೈಸೂರು ಬಾಂಬ್ ಬ್ಲಾಸ್ಟ್: ಕನ್ನಡ ನಿರ್ದೇಶಕರ ಕಲ್ಪನೆ ಸತ್ಯ ಆಗ್ಹೋಯ್ತು.!

ಮೈಸೂರು ಬಾಂಬ್ ಬ್ಲಾಸ್ಟ್: ಕನ್ನಡ ನಿರ್ದೇಶಕರ ಕಲ್ಪನೆ ಸತ್ಯ ಆಗ್ಹೋಯ್ತು.!

Posted By:
Subscribe to Filmibeat Kannada

ಕಂಡ ಕನಸು (ಸಿಹಿಯಾಗಿದ್ದರೆ) ನನಸಾದಾಗ ಆಗುವ ಖುಷಿ ಅಷ್ಟಿಷ್ಟಲ್ಲ. ಅದೇ ಕನಸು ದುರಂತ ಆಗಿದ್ದು, ನಿಜವಾಗಲೂ ಘಟಿಸಿದರೆ ಆಗುವ ಆಘಾತ ಕೂಡ ಹೇಳತೀರದು.

ದೊಡ್ಡ ದೊಡ್ಡ ಕನಸು ಹೊತ್ತು, 'ಡೈರೆಕ್ಟರ್ ಕ್ಯಾಪ್' ತೊಟ್ಟು, ಕನ್ನಡ ಚಿತ್ರರಂಗಕ್ಕೆ 'ರನ್ ಆಂಟನಿ' ಚಿತ್ರದ ಮೂಲಕ ಪದಾರ್ಪಣೆ ಮಾಡಿದ ರಘು ಶಾಸ್ತ್ರಿ ರವರಿಗೆ ಸದ್ಯ ಆಗಿರುವ ದೊಡ್ಡ ಆಘಾತ ಇದೇ 'ಕನಸು' ಹಾಗೂ 'ಕಲ್ಪನೆ' ಸುತ್ತ.!


ಹೌದು, ನಿನ್ನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆದ ಬಾಂಬ್ ಬ್ಲಾಸ್ಟ್ ವಿಚಾರ ನಿಮಗೆ ಗೊತ್ತಿರಬಹುದು. ಪ್ರೆಶರ್ ಕುಕ್ಕರ್ ಬಾಂಬ್ ಬಳಸಿ, ಕೋರ್ಟ್ ಶೌಚಾಲಯವನ್ನ ಸ್ಫೋಟಿಸಲಾಗಿದೆ ಎಂಬುದು ಲಭ್ಯವಾಗಿರುವ ಮಾಹಿತಿ. [ಮೈಸೂರು: ಕೋರ್ಟಿನ ಬಳಿ 'ಕುಕ್ಕರ್ ಬಾಂಬ್' ಇಟ್ಟವರು ಯಾರು?]


ಕಾಕತಾಳೀಯ ಎಂದರೆ, ಈ ಸ್ಫೋಟಕ್ಕೂ, 'ರನ್ ಆಂಟನಿ' ಚಿತ್ರಕ್ಕೂ, ನಿರ್ದೇಶಕ ರಘು ಶಾಸ್ತ್ರಿ ರವರಿಗೂ ಒಂದು 'ಕಲ್ಪನೆ'ಯ ಲಿಂಕ್ ಇದೆ. ಅದೇನು ಅಂತ ತಿಳಿಯಲು ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ....


ಕಂಡ ಕಲ್ಪನೆ ನಿಜವಾದಾಗ....

ಒಂದು ದುರಂತ ಕಲ್ಪನೆ ನಿಜವಾಗಿರುವ ಬಗ್ಗೆ 'ರನ್ ಆಂಟನಿ' ಚಿತ್ರದ ನಿರ್ದೇಶಕ ರಘು ಶಾಸ್ತ್ರಿ, ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಮುಂದಿನ ಸ್ಲೈಡ್ ಕ್ಲಿಕ್ಕಿಸಿ....


ರಘು ಶಾಸ್ತ್ರಿ ಫೇಸ್ ಬುಕ್ ಸ್ಟೇಟಸ್ ನಲ್ಲಿ ಏನಿದೆ.?

''ಮೈಸೂರಿನಲ್ಲಿ ನಿನ್ನೆ ಬಾಂಬ್ ಬ್ಲಾಸ್ಟ್ ಆದ ಕೋರ್ಟ್ ಆವರಣದ ಪಕ್ಕದಲ್ಲೇ ಚಾಮರಾಜಪುರಂ ರೈಲ್ವೇ ಸ್ಟೇಷನ್ ಇದೆ. 'ರನ್ ಆಂಟನಿ' ಚಿತ್ರದ ಸ್ಕ್ರಿಪ್ಟ್ ಬರೆಯುವಾಗ ಪ್ರತಿ ದಿನ ನಾನು ಅದೇ ದಾರಿಯಲ್ಲಿ ಸಾಗುತ್ತಿದ್ದೆ. ನಿಜ ಹೇಳ್ಬೇಕಂದ್ರೆ, ಅದೇ ಚಾಮರಾಜಪುರಂ ರೈಲ್ವೇ ನಿಲ್ದಾಣವನ್ನ ಮನದಲ್ಲಿ ಇಟ್ಕೊಂಡು ನಾನು 'ರನ್ ಆಂಟನಿ' ಚಿತ್ರೀಕರಿಸಿದ್ದು'' ಅಂತ ರಘು ಶಾಸ್ತ್ರಿ ತಮ್ಮ ಫೇಸ್ ಬುಕ್ ವಾಲ್ ಮೇಲೆ ಬರೆದುಕೊಂಡಿದ್ದಾರೆ.


'ರನ್ ಆಂಟನಿ' ಚಿತ್ರದಲ್ಲಿ ಬಾಂಬ್ ಬ್ಲಾಸ್ಟ್ ಸನ್ನಿವೇಶ ಇದೆ.!

'ರನ್ ಆಂಟನಿ' ಚಿತ್ರದ ಬಹುದೊಡ್ಡ ಸಸ್ಪೆನ್ಸ್ ಅಂದ್ರೆ ಅದು 'ಬಾಂಬ್ ಬ್ಲಾಸ್ಟ್' ಸನ್ನಿವೇಶ. [ವಿಮರ್ಶೆ: ಸ್ಲೋ ಮೋಷನ್ ನಲ್ಲಿ ಓಡುವ 'ರನ್ ಆಂಟನಿ']


ರೈಲ್ವೇ ಸ್ಟೇಷನ್ ನಲ್ಲಿ ಬಾಂಬ್ ಬ್ಲಾಸ್ಟ್.!

ಜನಜಂಗುಳಿ ಇರುವ ರೈಲ್ವೇ ನಿಲ್ದಾಣದಲ್ಲಿ ಬಾಂಬ್ ಸ್ಫೋಟಗೊಳ್ಳುವ ದೃಶ್ಯ 'ರನ್ ಆಂಟನಿ' ಚಿತ್ರದಲ್ಲಿ ಇದೆ.


ಸೂಸೈಡ್ ಬಾಂಬರ್ ಬಳಕೆ

ಸೂಸೈಡ್ ಬಾಂಬರ್ ಗಳ ಸುತ್ತ ಹೆಣೆದಿರುವ ಕಥೆ 'ರನ್ ಆಂಟನಿ'. ನಟಿ ರುಕ್ಷಾರ್ ಮಿರ್ ಸೂಸೈಡ್ ಬಾಂಬರ್ ಆಗಿ ಅಭಿನಯಿಸಿದ್ದರು.


ಬಾಂಬ್ ತಯಾರಿಸಿಕೊಳ್ಳುವ ನಾಯಕಿ.!

ಬಾಂಬ್ ಸ್ಫೋಟಗೊಳ್ಳಲು ಬೇಕಾದ ಪ್ರಮುಖ ಸಾಮಗ್ರಿ ಕಳೆದು ಹೋದಾಗ, ಸೂಸೈಡ್ ಬಾಂಬರ್ (ರುಕ್ಷಾರ್ ಮಿರ್) ಪರ್ಫ್ಯೂಮ್, ಕ್ಯಾಮರಾ ಬ್ಯಾಟರಿ ಬಳಸಿ ಕಚ್ಚಾ ಬಾಂಬ್ ತಯಾರಿಸಿಕೊಳ್ಳುವ ಸನ್ನಿವೇಶ 'ರನ್ ಆಂಟನಿ' ಚಿತ್ರದಲ್ಲಿ ಇದೆ.


ನಿಜವಾಗ್ಲೂ ನಡೆದದ್ದು ಕುಕ್ಕರ್ ಬಾಂಬ್ ಸ್ಫೋಟ

ಆದ್ರೆ, ಮೈಸೂರಿನ ಕೋರ್ಟ್ ಆವರಣದಲ್ಲಿ ಪ್ರೆಶರ್ ಕುಕ್ಕರ್ ಬಾಂಬ್ ಸ್ಫೋಟಿಸಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.


ಆಘಾತಗೊಂಡ ನಿರ್ದೇಶಕರು.!

ಕಲ್ಪನೆ ನಿಜವಾಗಿರುವುದರಿಂದ ನಿರ್ದೇಶಕ ರಘು ಶಾಸ್ತ್ರಿ ಆಘಾತಗೊಂಡಿದ್ದಾರೆ.


ಮೈಸೂರಿನ ಹುಡುಗ ರಘು ಶಾಸ್ತ್ರಿ

ನಿರ್ದೇಶಕ ರಘು ಶಾಸ್ತ್ರಿ ಮೂಲತಃ ಮೈಸೂರಿನವರು.


ಭಯೋತ್ಪಾದನೆ ನಿಲ್ಲಿಸಿ....

ತಮ್ಮ ಸ್ಟೇಟಸ್ ಜೊತೆ #Stop #Terrorism ಎಂಬ ಸಂದೇಶ ಕೂಡ ನೀಡಿದ್ದಾರೆ ರಘು ಶಾಸ್ತ್ರಿ.


English summary
There seems to be Kannada Movie 'Run Antony' connection with the Mysuru Bomb Blast which happenned yesterday (Aug 1st). 'Run Antony' directed by Raghu Shastry, is from Mysuru, and the Director took his Facebook to make connection between his movie and the blast.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada