»   » ರಾಗಿಣಿ ದ್ವಿವೇದಿ ಕುರಿತ ಕೆಲವು ಸೀಕ್ರೆಟ್ ಸಂಗತಿಗಳು

ರಾಗಿಣಿ ದ್ವಿವೇದಿ ಕುರಿತ ಕೆಲವು ಸೀಕ್ರೆಟ್ ಸಂಗತಿಗಳು

By: ಜೀವನರಸಿಕ
Subscribe to Filmibeat Kannada

ಬೆಳ್ಳಿತೆರೆಗೆ ಅಡಿಯಿಟ್ಟ ಐದೇ ವರ್ಷಗಳಲ್ಲಿ ರಾಗಿಣಿ ದ್ವಿವೇದಿ ಪಂಚಭಾಷಾ ತಾರೆಯಾಗಿ ಬದಲಾಗಿದ್ದಾರೆ. ಸ್ಯಾಂಡಲ್ ವುಡ್ ಚಿತ್ರಗಳ ಜೊತೆಗೆ ಬಾಲಿವುಡ್ ಕಾಲಿವುಡ್, ಟಾಲಿವುಡ್ ಸಹ ಬಾಗಿಲು ತೆರೆದಿದೆ. ಈ ವರ್ಷದ ಮೋಸ್ಟ್ ಬಿಜಿಯಸ್ ತಾರೆ ಎಂದರೆ ರಾಗಿಣಿ.

ಎಲ್ಲಾ ತಾರೆಗಳು ಒಂದಲ್ಲಾ ಒಂದು ಸೀಕ್ರೆಟ್ ಮೇಂಟೇನ್ ಮಾಡ್ತಿರ್ತಾರೆ. ಆದರೆ ಅದು ಹೇಗೋ ಏನೋ ಅವರ ಗುಟ್ಟುಗಳು ರಟ್ಟಾಗುತ್ತಿರುತ್ತವೆ. ಈ ವಿಚಾರದಲ್ಲಿ ರಾಗಿಣಿ ಅಷ್ಟೆಲ್ಲಾ ಸೀಕ್ರೆಟ್ ಮೇಂಟೇನ್ ಮಾಡದಿದ್ದರೂ ಅವರ ಅಭಿಮಾನಿಗಳಿಗೆ ಗೊತ್ತಿಲ್ಲದ ಕೆಲವು ಸಂಗತಿಗಳಿವೆ. [ಕಾಲ್ ಗರ್ಲ್ ಆದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ]

ರಾಗಿಣಿ ಮೇ.24ರಂದು 24ನೇ ವಸಂತಕ್ಕೆ ಅಡಿಯಿಟ್ಟಿದ್ದಾರೆ. ಅವರ ಬರ್ತ್ ಡೇ ಅದ್ದೂರಿಯಾಗಿಯೇ ನಡೆಯಿತು. ರಾಗಿಣಿಯ ಸಿನಿ ಪರಪಂಚ ಕೂಡ ಜೋಶ್ ನಲ್ಲಿ ಸಾಗಿಹೋಗುತ್ತಿದೆ. ಈ ಸಂದರ್ಭದಲ್ಲಿ ಅವರ ರಿಯಲ್ ಲೈಫ್ ನ ಕೆಲವು ಇಂಟರೆಸ್ಟಿಂಗ್ ವಿಷಯಗಳ ಮೇಲೆ ಕಣ್ಣಾಡಿಸೋಣ ಬನ್ನಿ.

ಗ್ಲಾಮರ್ ಡಾಲ್ ಗೆ ಹೂವು ಅಂದ್ರೆ ಪ್ರೀತಿ

ರಾಗಿಣಿ ಎಷ್ಟೇ ಗ್ಲಾಮರಸ್ ಆಗಿದ್ರೂ ಸಿಂಪಲ್ಲಾಗಿರೋ ಹೂವುಗಳನ್ನ ಇಷ್ಟಪಡ್ತಾರೆ. ಅದರಲ್ಲೂ ರೋಸ್, ಮಲ್ಲಿಗೆ ಹೂವು ಅಂದ್ರೆ ರಾಗಿಣಿಗೆ ತುಂಬಾನೇ ಇಷ್ಟ.

ಚಿಕನ್ ಅಂದ್ರೆ ತುಂಬಾ ಇಷ್ಟ

ರಾಗಿಣಿ ನಾನ್ ವೆಜ್ ಇಷ್ಟಪಡ್ತಾರೆ ಅನ್ನೋದಿದ್ರೂ ಚಿಕನ್ ಅಂದ್ರೆ ಅಚ್ಚುಮೆಚ್ಚು. ಚಿಕನ್ ಮನೆಯಲ್ಲಿ ಮಾಡಿದ್ರೆ ಚಪ್ಪರಿಸಿ ತಿಂತಾರೆ ಈ ಚೆಂದುಳ್ಳಿ ಚೆಲುವೆ.

ಮೇಕಪ್ ಅಷ್ಟೊಂದು ಇಷ್ಟ ಇಲ್ಲ

ಮೇಕಪ್, ಹೇರ್ ಸ್ಟೈಲಿಷ್ಟ್ ನ್ನು ತಮ್ಮ ಜೊತೆಯಲ್ಲೇ ಸದಾ ಇರಿಸಿಕೊಳ್ಳೋ ರಾಗಿಣಿಗೆ ಮೇಕಪ್ ಅಂದ್ರೆ ಅಷ್ಟೊಂದು ಇಷ್ಟವಾಗಲ್ಲ. ಮೇಕಪ್ ಮಾಡದಿದ್ರೂ ಗ್ಲಾಮರ್ ಡಾಲ್ ಗ್ಲಾಮರ್ ಕಡಿಮೆ ಆಗಲ್ವಂತೆ.

ತುಂಬಾ ಸಿಂಪಲ್ ರಾಗಿಣಿ

ರಾಗಿಣಿ ಹೊರಗೆ ದೊಡ್ಡ ಹೀರೋಯಿನ್, ಗ್ಲಾಮರ್ ಡಾಲ್ ಆಗಿದ್ರೂ ಮನೆಯ ಒಳಗೆ ತುಂಬಾ ಸಿಂಪಲ್. ಅಮ್ಮ ಅಪ್ಪನಿಗೆ ಎಲ್ಲ ಕೆಲಸಗಳನ್ನ ಮಾಡಿಕೊಡ್ತಾರೆ.

ವಿಭಿನ್ನ ಪಾತ್ರಗಳನ್ನ ಮಾಡ್ಬೇಕು ಅನ್ನೋ ಆಸೆ

ಈಗಾಗ್ಲೇ ರಾಗಿಣಿ ಒಂದಕ್ಕಿಂತ ಮತ್ತೊಂದು ಭಿನ್ನ ಪಾತ್ರಗಳನ್ನ ಆಯ್ಕೆ ಮಾಡ್ಕೊಂಡಿದ್ದಾರೆ. ರವಿಮಾಮನ ಜೊತೆ 'ಶೃಂಗಾರ'ದ ಮಾಡೆಲ್, ಭಟ್ರ ಸಿನಿಮಾ 'ಪರಪಂಚ'ದಲ್ಲಿ ವೇಶ್ಯೆ ಪಾತ್ರ, 'ಅಮ್ಮ' ಸಿನಿಮಾದಲ್ಲಿ ವಿಭಿನ್ನ ಪಾತ್ರ. ಹೀಗೆ ಪ್ರತೀ ಸಿನಿಮಾಗೂ ಭಿನ್ನ ವಿಭಿನ್ನ ಪಾತ್ರ ಮಾಡೋ ಆಸೆ ರಾಗಿಣಿಗಿದೆ.

ಹಾರ್ಡ್ ವರ್ಕ್, ಡೆಡಿಕೇಷನ್ ಮುಖ್ಯ

ಐದೇ ವರ್ಷದಲ್ಲಿ ಪಂಚಭಾಷಾ ತಾರೆಯಾಗೋಕೆ ಸಾಧ್ಯವಾಗಿದ್ದು ಹಾರ್ಡ್ ವರ್ಕ್ನಿಂದ. ರಾಗಿಣಿ ಸಿನಿಮಾಗೆ ಕೊಡೋ ಡೆಡಿಕೇಷನ್ ಅವರನ್ನ ದೊಡ್ಡ ಹೀರೋಯಿನ್ ಮಾಡ್ತು ಅಂತಾರೆ ಗಾಂಧಿನಗರದ ಸಿನಿಮಾ ಮಂದಿ.

ಪಾತ್ರಕ್ಕೆ ಬೇಕಂತಾನೇ ಸ್ವಲ್ಪ ದಪ್ಪ ಆಗಿದ್ದಾರೆ

ಪರಪಂಚ ಚಿತ್ರದ ವೇಶ್ಯೆ ಪಾತ್ರಕ್ಕೆ ಮತ್ತು ಪಂಚಭಾಷಾ ಅಮ್ಮ ಚಿತ್ರಕ್ಕಾಗಿ ರಾಗಿಣಿ ತುಂಬಿದ ತೊಂಡೆ ಹಣ್ಣಿನಂತಾಗಿದ್ದಾರೆ. ಪಾತ್ರಗಳಿಗೆ ತಕ್ಕಂತೆ ತಯಾರಾಗೋ ಈ ಗಿಣಿಯ ಡೆಡಿಕೇಷನ್ ಸೂಪರ್ ಅಂತ ಹೇಳಲೇಬೇಕು.

English summary
An interesting facts about actress Ragini Dwivedi. After actress Kushboo, Dwivedi is the only Indian actress to have a fan club named after her. The glamour doll loves flowers like Rose, Jasmine. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada