»   » ಸೌಂದರ್ಯಾ ರಜನಿಕಾಂತ್ ಗೆ ಒಂದು ಬಹಿರಂಗ ಪತ್ರ

ಸೌಂದರ್ಯಾ ರಜನಿಕಾಂತ್ ಗೆ ಒಂದು ಬಹಿರಂಗ ಪತ್ರ

By: ರಾಘವ ದ್ವಾರ್ಕಿ
Subscribe to Filmibeat Kannada
<ul id="pagination-digg"><li class="next"><a href="/news/soundarya-rajinikanth-shattered-raghava-dwarki-dreams-084686.html">Next »</a></li></ul>

ಕನ್ನಡದ ಚಲನಚಿತ್ರ ನಿರ್ದೇಶಕ ರಾಘವ ದ್ವಾರ್ಕಿ ಅವರಿಗೆ ಎದುರಾದ ಒಂದು ಕಹಿ ಅನುಭವವನ್ನು ಅವರು ತಮ್ಮ ಫೇಸ್ ಬುಕ್ ನಲ್ಲಿ ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. 'ಮತ್ತೆ ಮುಂಗಾರು' ಚಿತ್ರದ ಸಮಯದಲ್ಲಿ ಸೌಂದರ್ಯ ಅಶ್ವಿನ್ ರಜನಿಕಾಂತ್ ಅವರು ಹೇಗೆಲ್ಲಾ ಆಟ ಆಡಿಸಿದರು ಎಂಬುದನ್ನು ಅವರ ಮಾತುಗಳಲ್ಲೇ ಓದಿ - ಸಂಪಾದಕ.

ಡಿಯರ್ ಸೌಂದರ್ಯ ರಜನಿಕಾಂತ್ ರವರೇ..ನಿಮ್ಮ ಮೊದಲ ಹೆಜ್ಜೆ 'ಕೊಚಡಿಯಾನ್'ಗೆ ನನ್ನ ಶುಭಾಶಯಗಳು. ನನ್ನ ಮುಖ ನೆನಪಿದ್ದರೆ..? ನಿಮಗೊಂದು ಕಥೆ ನೆನಪಿಸಬೇಕಿದೆ ಕೇಳಿ!

2010ರಲ್ಲಿ ನಾನು ಮತ್ತು ನನ್ನ ಟೀಂ ಸೇರಿ ಇ.ಕೃಷ್ಣಪ್ಪರವರ ಬ್ಯಾನರ್ ನಲ್ಲಿ 'ಮತ್ತೆ ಮುಂಗಾರು' ಎಂಬ ಚಿತ್ರ ಮಾಡಿದ್ದೆವು. ನಮ್ಮ ಜೀವವನ್ನು ಪಣಕ್ಕಿಟ್ಟು ಮಾಡಿದ್ದೆವು. ಚಿತ್ರಕ್ಕೆ (DI) ಡಿಜಿಟಲ್ ಇಂಟರ್ ಮೀಡಿಯೇಟ್ ಮಾಡಿಸಬಾರದು ಎಂಬುದೊಂದೇ ಒಂದು ಕಂಡಿಷನ್ ನಿರ್ಮಾಪಕರದ್ದಾಗಿತ್ತು. ದೇವರಂಥ ಮನುಷ್ಯ. ನನ್ನ ಬಲವಂತಕ್ಕೆ ಕೊನೆಗೂ ಒಪ್ಪಿದರು.

An open letter to Soundarya Rajinikanth

ಅಂಥಹ ಸಮಯದಲ್ಲೇ. ನಿಮ್ಮ ಆಕರ್ ಸಂಸ್ಥೆಯಿಂದ ನೇಮಕವಾಗಿದ್ದ ಗೀರಿಶ್ ಎಂಬ ಎಡಬಿಡಂಗಿ ಮಧ್ಯವರ್ತಿಯಿಂದ ನಿಮ್ಮ ಆಕರ್ ಸ್ಟುಡಿಯೋ ಬಗ್ಗೆ ತಿಳಿದು. ನಿಮ್ಮಲ್ಲಿ ಮಾಡಿಸುವ ನಿರ್ಧಾರವಾಯಿತು. ಕಾರಣ ನಿಮ್ಮ ತಂದೆಯ ಮೇಲಿರುವ ಗೌರವ, ಕನ್ನಡಿಗರೆಂಬ ಪ್ರೀತಿ, ನೋಡಬೇಕೆನ್ನುವ ಸ್ವಾರ್ಥ.

ಮತ್ತು ನಿಮ್ಮ ತಂದೆ ಕಂಡಕ್ಟರ್ ಆಗಿದ್ದ ಕಾಲದಲ್ಲೇ ನಮ್ಮ ತಂದೆ ಮತ್ತು ದೊಡ್ಡಪ್ಪನಿಗೆ ಆತ್ಮೀಯ ಗೆಳೆಯ ಎಂಬ ಅಭಿಮಾನದಿಂದ ನಿಮ್ಮಲ್ಲಿಗೆ ಬಂದೆ. ನೀವೇ ನಿಮ್ಮ ಛೇಂಬರಿನಲ್ಲಿ ಕೂರಿಸಿಕೊಂಡು ನಿಮ್ಮಲ್ಲಿಗೆ ಬಂದದ್ದಕೆ ಹೃದಯತುಂಬಿ ಮಾತನಾಡಿ ಥ್ಯಾಂಕ್ಸ್ ಹೇಳಿದ್ದಿರಿ!

ನಿಮ್ಮನ್ನು ಸಂಧಿಸಿದ್ದು ನನ್ನ ಜೀವನದ ಅತಿ ದೊಡ್ಡ ದುರಂತವಾಗಲಿದೆ ಎಂದು ನನಗನಿಸಲೇ ಇಲ್ಲ. ನನ್ನ ಮತ್ತು ನನ್ನ ಹುಡುಗರ ಕನಸಿನ 'ಮತ್ತೆ ಮುಂಗಾರು' ಸಿನಿಮಾ ಮುಳುಗಿ ಹೋಗಲು ಮೊದಲ ಕಾರಣಿಗರು ನೀವು..! ಥ್ಯಾಂಕ್ಸ್!

ದೂರದ ಬೆಟ್ಟವಾಗಿ ಹೋಯ್ತು ನಿಮ್ಮ ಸ್ಟುಡಿಯೊ. ಒಂದು ತಿಂಗಳಲ್ಲಿ ಮುಗಿಸಿಕೊಡುತ್ತೇನೆಂದು ಒಪ್ಪಿಕೊಂಡು 7 ತಿಂಗಳು ಮಾಡಿಬಿಟ್ರಿ...ಇದರಿಂದ ನನ್ನ ಮತ್ತು ನಿರ್ಮಾಕರ ಮಧ್ಯೆ ಬಿರುಕಾಗಿಹೋಯಿತು. ಮದರಾಸಿನ ಉರಿ ಬಿಸಿಲಲ್ಲಿ ನಿತ್ಯವೂ ನಿಮ್ಮ ಸ್ಟುಡಿಯೋಗೆ ಅಲೆದೆ, ನಿಮ್ಮಿಂದ ಕೆಲಸಗಳಾಗಲೇ ಇಲ್ಲ!

ನಿಮ್ಮ ಕಛೇರಿಯಲ್ಲಿ ನಿಮ್ಮ ಕೆಳಗೆ ಕೆಲಸ ಮಾಡುವವರು ಸುಳ್ಳು ಹೇಳಿ ಹೇಳಿ ನನ್ನನ್ನು ಗೋಳಾಡಿಸಿ ಬಿಟ್ರು, ನಿಮಗೆ ಗೊತ್ತಿದ್ದು ಸಹ ನನಗೆ ಚಿತ್ರಹಿಂಸೆ ಮಾಡಿಬಿಟ್ರಿ...ದಿನಕಳೆದಂತೆ ನಿರ್ಮಾಪಕರಿಗೆ ನನ್ನ ಮೇಲಿನ ಕೋಪ ತಾರಕಕ್ಕೇರಿತು...ಪರಿಸ್ಥಿತಿ ತಿಳಿದು ನಿಮಗೆ ಮನವರಿಕೆ ಮಾಡಿದೆ, ನಿಮಗೆ ನನ್ನ ಕೂಗು, ನೋವು ಕೇಳಿಸಲೇ ಇಲ್ಲ..!

ನಂತರ ತಿಳಿದದ್ದೆಂದರೆ.. ನೀವು ಬಹಳದಿನಗಳಿಂದ ನಿಮ್ಮ ಹುಡುಗರಿಗೆ ವರ್ಷಗಳಿಂದ ಸಂಬಳ ನೀಡಿಲ್ಲವೆಂದು.. ಆ ಹುಡಗರ ಗೋಳು ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದೆ.. ಚೆನ್ನ್ಯೆನ ಯಾವ ಸ್ಟುಡಿಯೋಗೆ ಹೋದರು ನಿಮ್ಮ ಹೆಸರು ಹೇಳುತ್ತಿದ್ದಂತೆ... ಕೆಲಸಗಳು ನಿಂತು ಹೋಗುತ್ತಿತ್ತು...!

<ul id="pagination-digg"><li class="next"><a href="/news/soundarya-rajinikanth-shattered-raghava-dwarki-dreams-084686.html">Next »</a></li></ul>
English summary
An open letter to Soundarya Rajinikanth Ashwin, a film graphic designer, producer and director who primarily works in the Tamil film industry by Kannada director Raghava Dwarki. The director shared his bad experience on his Facebook account, How Soundarya behaved at the time of 'Matte Mungaru' DI work at her 'AKAR' studio at Chennai.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada