»   » 'ನನಗೆ ವೈರಿಗಳು ಇದ್ದಾರೆ, ಹಲ್ಲೆ ಕಾಮನ್' ಎಂದ ಹುಚ್ಚ ವೆಂಕಟ್.!

'ನನಗೆ ವೈರಿಗಳು ಇದ್ದಾರೆ, ಹಲ್ಲೆ ಕಾಮನ್' ಎಂದ ಹುಚ್ಚ ವೆಂಕಟ್.!

Posted By:
Subscribe to Filmibeat Kannada

ಮೂರು ದಿನಗಳ ಹಿಂದೆ, ಅಂದ್ರೆ ನವೆಂಬರ್ 29 ರಂದು ರಾತ್ರಿ ಹತ್ತು ಗಂಟೆ ಸುಮಾರಿಗೆ ಯಶವಂತಪುರದಲ್ಲಿ ಊಟ ತೆಗೆದುಕೊಂಡು ಹೋಗುತ್ತಿದ್ದಾಗ ಹುಚ್ಚ ವೆಂಕಟ್ ಮೇಲೆ ಯಾವಕನೋರ್ವ ಹಲ್ಲೆ ಮಾಡಿದ ಘಟನೆ ಇಂದು ಬೆಳಕಿಗೆ ಬಂದಿದೆ.

ಕೈಯಲ್ಲಿದ್ದ ಹೆಲ್ಮೆಟ್ ನಿಂದ ಹುಚ್ಚ ವೆಂಕಟ್ ತಲೆಗೆ ಯುವಕ ಥಳಿಸಿರುವ ಸಿಸಿಟಿವಿ ಫುಟೇಜ್ ಇಂದು ಮಾಧ್ಯಮಗಳ ಕೈಗೆ ಸಿಕ್ಕಿದೆ.

ಹುಚ್ಚ ವೆಂಕಟ್ ಮೇಲೆ ಹಲ್ಲೆ: ಯುವಕನಿಂದ ಫೈರಿಂಗ್ ಸ್ಟಾರ್ ಗೆ ಥಳಿತ

ಹಲ್ಲೆ ನಡೆದು ಮೂರು ದಿನಗಳು ಕಳೆದರೂ, ಇಲ್ಲಿಯವರೆಗೂ ಸೈಲೆಂಟ್ ಆಗಿದ್ದ ಹುಚ್ಚ ವೆಂಕಟ್ ಇಂದು ಮೌನ ಮುರಿದಿದ್ದಾರೆ. ಹಲ್ಲೆ ನಡೆದ ಮೇಲೂ ಪೊಲೀಸ್ ಕಂಪ್ಲೇಂಟ್ ಕೊಡದ ಹುಚ್ಚ ವೆಂಕಟ್, ಇವತ್ತು ಮಾಧ್ಯಮಗಳ ಮುಂದೆ ಬಂದು ''ನಾನು ಕೂಡ ಹೊಡೆದಿದ್ದೇನೆ. ಒದೆ ತಿಂದು ಸುಮ್ಮನೆ ಇರಲಿಲ್ಲ'' ಎಂಬ ಹೇಳಿಕೆ ನೀಡಿದ್ದಾರೆ. ಮುಂದೆ ಓದಿರಿ...

ಇದೆಲ್ಲ ಕಾಮನ್ ಬಿಡಿ..!

''ಒಂದೊಳ್ಳೆ ಕೆಲಸ ಮಾಡುವಾಗ ಇದೆಲ್ಲ ಕಾಮನ್. ಎಷ್ಟೋ ಜನರ ವಿರುದ್ಧ ನಾನು ಮಾತನಾಡಿದ್ದೇನೆ. ಹೀಗಾಗಿ ನನಗೆ ವೈರಿಗಳು ಇದ್ದಾರೆ. ಹಾಗಂತ ನಾನು ಹೆದರಿಕೊಂಡಿಲ್ಲ. ನನಗೆ ಪೊಲೀಸ್ ಸೆಕ್ಯೂರಿಟಿ ಇಲ್ಲ. ಸೆಕ್ಯೂರಿಟಿ ನನಗೆ ಬೇಕಾಗಿಲ್ಲ. ನಾನು ಯಾವಾಗಲೂ ಆರಾಮಾಗಿ ಒಂಟಿಯಾಗಿ ಇರಬೇಕು'' ಎಂದು ಮಾಧ್ಯಮಗಳಿಗೆ ಹುಚ್ಚ ವೆಂಕಟ್ ಹೇಳಿಕೆ ನೀಡಿದ್ದಾರೆ.

ಕುಡಿದುಕೊಂಡು ಬಂದು ಗಲಾಟೆ ಮಾಡಿದರು

''ಎರಡು ವರ್ಷದಿಂದ ನಾನು ಯಶವಂತಪುರದಲ್ಲಿ ಇದ್ದೇನೆ. ಯಾವತ್ತೂ ನನಗೆ ಅಲ್ಲಿ ಸಮಸ್ಯೆ ಆಗಿರಲಿಲ್ಲ. ಆದ್ರೆ, ಅವತ್ತು ಊಟ ತೆಗೆದುಕೊಂಡು ರಸ್ತೆಯಲ್ಲಿ ಹೋಗುತ್ತಿದ್ದಾಗ, ಯಾರೋ ಕುಡಿದುಕೊಂಡು ಬಂದು ಗಲಾಟೆ ಮಾಡಿದರು'' - ಹುಚ್ಚ ವೆಂಕಟ್

ನಾನೂ ಹೊಡೆದಿದ್ದೇನೆ

''ನಾನು ಕೂಡ ಹೊಡೆದಿದ್ದೇನೆ. ಒದೆ ತಿಂದು ಸುಮ್ಮನೆ ಇರಲಿಲ್ಲ. ಅದರ ಸಿಸಿಟಿವಿ ಫುಟೇಜ್ ನಿಮಗೆ (ಮಾಧ್ಯಮದವರಿಗೆ) ಸಿಕ್ಕಿಲ್ಲ ಅಷ್ಟೆ'' - ಹುಚ್ಚ ವೆಂಕಟ್

ದೊಡ್ಡ ವಿಷಯ ಮಾಡಲ್ಲ.!

''ಈಗಾಗಲೇ ನನ್ನ ಮೇಲೆ ಹಲವಾರು ಬಾರಿ ಹಲ್ಲೆ ನಡೆದಿದೆ. ಅದನ್ನೆಲ್ಲ ದೊಡ್ಡ ವಿಷಯ ಮಾಡಲು ಹೋಗಲ್ಲ. ದೊಡ್ಡ ವಿಷಯ ಆದರೆ ಕಂಪ್ಲೇಂಟ್, ಪೊಲೀಸ್, ಕೋರ್ಟ್, ಕೇಸ್ ಎಲ್ಲ ಆಗುತ್ತೆ.. ಇವೆಲ್ಲ ಯಾಕೆ ಬೇಕು. ಒಂದೊಳ್ಳೆ ಕೆಲಸ ಮಾಡುವಾಗ ಇದೆಲ್ಲ ಕಾಮನ್'' ಎಂದಿದ್ದಾರೆ ಹುಚ್ಚ ವೆಂಕಟ್

English summary
An unidentified man assaults Huccha Venkat on November 29th at Yeshwanthpur, Bengaluru. Huccha Venkat reacts about this issue.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada