»   » ಶ್ರೀ ಶ್ರೀ ಶ್ರೀ ಅನಂತ ಸ್ವಾಮಿಗಳಿಗೆ ಗಜಕೇಸರಿ ಯೋಗ

ಶ್ರೀ ಶ್ರೀ ಶ್ರೀ ಅನಂತ ಸ್ವಾಮಿಗಳಿಗೆ ಗಜಕೇಸರಿ ಯೋಗ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಸುಂದರಾಂಗ ನಟ ಅನಂತನಾಗ್ ಅವರು ಈಗ ಶ್ರೀ ಶ್ರೀ ಶ್ರೀ ಅನಂತ ಸ್ವಾಮಿಗಳಾಗಿ ಪದಗ್ರಹಣ ಮಾಡಿದ್ದಾರೆ! ಅವರಿಗೆ ಬಹುಶಃ ಗಜಕೇಸರಿ ಯೋಗ ಎಂದು ಕಾಣುತ್ತದೆ. ಈ ಯೋಗಾಯೋಗದಲ್ಲಿ ಅವರಿಗೆ ಸ್ವಾಮೀಜಿಯಾಗುವ ಭಾಗ್ಯ ಕೂಡಿಬಂದಿದೆ. ಇಷ್ಟಕ್ಕೂ ಯಾವ ಮಠಕ್ಕೆ ಅಂತೀರಾ?

ಅಯ್ಯೋ ಇದು ಗುರುಪ್ರಸಾದ್ ಅವರ ಮಠ ಅಲ್ಲ ಸ್ವಾಮಿ. ಇದು ರಾಕಿಂಗ್ ಸ್ಟಾರ್ ಯಶ್ ಮುಖ್ಯಭೂಮಿಕೆಯಲ್ಲಿರುವ ಗಜಕೇಸರಿ ಚಿತ್ರದ ಗೆಟಪ್. ಈ ಚಿತ್ರದಲ್ಲಿ ಅನಂತ್ ನಾಗ್ ಅವರು ಸ್ವಾಮೀಜಿಯಾಗಿ ಕಾಣಿಸುತ್ತಿದ್ದಾರೆ. ಆದರೆ ಇದು ತಮಾಷೆ ಮಾಡುವ ಪಾತ್ರವಲ್ಲ ಎನ್ನುತ್ತದೆ ಚಿತ್ರತಂಡ.

Anant Nag in Gajakesari

ಇತಿಹಾಸ ಪ್ರಸಿದ್ಧ ಮಠವೊಂದರ ಪೀಠಾಧ್ಯಕ್ಷರಾಗಿ ಅನಂತ ನಾಗ್ ಅವರು ಕಾಣಿಸುತ್ತಿದ್ದಾರೆ. ಚಿತ್ರದಲ್ಲಿ ಅವರದು ಗಂಭೀರ ಪಾತ್ರವಂತೆ. ಈ ಮಠದ 29ನೇ ಪೀಠಾಧ್ಯಕ್ಷರಾಗಿ ಅನಂತ್ ನಾಗ್ ದರ್ಶನ ನೀಡುತ್ತಿದ್ದಾರೆ.

ಈ ಭಾಗದ ಚಿತ್ರೀಕರಣವನ್ನು ಈಗಾಗಲೆ ಮೈಸೂರು ಅರಮನೆ, ಕೆಆರ್ಎಸ್ ನ ವೇಣುಗೋಪಾಲ ಸ್ವಾಮಿ ಆಲಯದಲ್ಲಿ ಚಿತ್ರೀಕರಿಸಲಾಗಿದೆ. ಅನಂತ್ ನಾಗ್ ಅವರು ತಮ್ಮ ವೃತ್ತಿ ಬದುಕಿನಲ್ಲಿ ಹಲವಾರು ರೀತಿಯ ಪಾತ್ರಗಳನ್ನು ಪೋಷಿಸಿದ್ದಾರೆ. ಆದರೆ ಈ ಪಾತ್ರ ಮಾತ್ರ ವಿಭಿನ್ನವಾಗಿದೆ.

ಆಧ್ಯಾತ್ಮದಲ್ಲಿ ಆಸಕ್ತಿ ಇರುವ ಅನಂತ್ ನಾಗ್ ಅವರ ಮನಸ್ಸಿಗೆ ಹತ್ತಿರವಾದ ಪಾತ್ರವೂ ಇದಾಗಿದೆ. ಇನ್ನು ಗಜಕೇಸರಿ ಚಿತ್ರದ ಬಗ್ಗೆ ಹೇಳುವುದಾದರೆ, ಈ ಚಿತ್ರಕ್ಕೆ ಛಾಯಾಗ್ರಹಕರಾಗಿ ಗುರುತಿಸಿಕೊಂಡಿರುವ ಎಸ್ ಕೃಷ್ಣ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ನಾಯಕಿ ಅಮೂಲ್ಯ.

Anant Nag in Gajakesari

ಸತ್ಯ ಹೆಗಡೆ ಅವರ ಛಾಯಾಗ್ರಹಣ ಇರುವ ಚಿತ್ರದ ಪಾತ್ರವರ್ಗದಲ್ಲಿ ಮಂಡ್ಯ ರಮೇಶ್, ಗಿರಿಜಾ ಲೋಕೇಶ್ ಮುಂತಾದವರಿದ್ದಾರೆ. ಗಜಕೇಸರಿ ಚಿತ್ರ ಈಗಾಗಲೆ ಎರಡನೇ ಹಂತದ ಚಿತ್ರೀಕರಣ ಮುಗಿಸಿದೆ. ಅನಂತ್ ನಾಗ್ ಅವರ ಇನ್ನೊಂದಿಷ್ಟು ಭಾಗದ ಚಿತ್ರೀಕರಣ ಆಗಸ್ಟ್ ನಲ್ಲಿ ನಡೆಯಲಿದೆ. (ಒನ್ಇಂಡಿಯಾ ಕನ್ನಡ)
English summary
Kannada films renowned actor Anant Nag appears in swamiji get up in film Gajakesari. Rocking Star Yash and Amoolya starrer 'Gajakesari' directed by ace cinematographer S Krishna.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada