»   » ವಿವೇಕ್ ಜೊತೆ ಅನಂತ್ ನಾಗ್ ಪುತ್ರಿ ಪ್ರೇಮವಿವಾಹ

ವಿವೇಕ್ ಜೊತೆ ಅನಂತ್ ನಾಗ್ ಪುತ್ರಿ ಪ್ರೇಮವಿವಾಹ

Posted By:
Subscribe to Filmibeat Kannada

ನಮ್ಮ ನಿಮ್ಮೆಲ್ಲರ ಪ್ರೀತಿಯ ಸಪ್ತಭಾಷಾ ನಟ ಅನಂತ್ ನಾಗ್ ಹಾಗೂ ಅವರ ಧರ್ಮಪತ್ನಿ ಗಾಯತ್ರಿ ಅನಂತ್ ನಾಗ್ ಅವರ ಪುತ್ರಿ ಅದಿತಿ ಅವರಿಗೆ ಕಂಕಣಭಾಗ್ಯ ಕೂಡಿಬಂದಿದೆ. ಇದೇ ನವೆಂಬರ್ 10ರಂದು ಅದಿತಿ ಸಪ್ತಪದಿ ತುಳಿಯುತ್ತಿದ್ದಾರೆ.

ಅನಂತ್ ನಾಗ್ ಪುತ್ರಿ ಅದಿತಿ ಕೈಹಿಡಿಯುತ್ತಿರುವ ಅದೃಷ್ಟವಂತ ವಿವೇಕ್. ಇವರದು ಪುತ್ತೂರಿನ ವಿಟ್ಲ ಸಮೀಪದ ಚಂದಾಡಿ. ಇಬ್ಬರೂ ಬಹಳ ಕಾಲದಿಂದ ಒಬ್ಬರನ್ನೊಬ್ಬರು ಮನಸಾರೆ ಪ್ರೀತಿಸಿದ್ದರು. ಈಗ ಗುರುಹಿರಿಯರ ಆಶೀರ್ವಾದ ಪಡೆದು ನೂತನ ದಾಂಪತ್ಯ ಜೀವನ ಆರಂಭಿಸುತ್ತಿದ್ದಾರೆ.

Anant Nag and Gayathri

ಮಗಳ ಮದುವೆ ನಿಮಿತ್ತ ಅನಂತ್ ನಾಗ್ ಅವರು ಚಿತ್ರರಂಗಕ್ಕೆ ನವೆಂಬರ್ 15ರ ತನಕ ರಜೆ ಹಾಕಿದ್ದಾರೆ. ಹಾಗಾಗಿ ಅವರು ಯಾವುದೇ ಚಿತ್ರೀಕರಣದಲ್ಲೂ ಭಾಗಿಯಾಗುತ್ತಿಲ್ಲ. ಅನಂತ್ ನಾಗ್ ಅವರು ಬಹಳಷ್ಟು ಚಿತ್ರಗಳಲ್ಲಿ ಪ್ರೇಮ ವಿವಾಹವನ್ನು ಬೆಂಬಲಿಸುವ ಹಿರಿಯರಾಗಿ, ಮಾವನಾಗಿ, ತಂದೆಯಾಗಿ ಅಭಿನಯಿಸಿದ್ದಾರೆ.

ಈಗವರು ರಿಯಲ್ ಲೈಫ್ ನಲ್ಲೂ ಅಂತಹದ್ದೇ ಒಂದು ಸಂಭ್ರಮ ಗಳಿಕೆ ಇದು. ಈ ಮದುವೆಗೆ ಕನ್ನಡ ಚಿತ್ರರಂಗದ ಸಾಕಷ್ಟು ಕಲಾವಿದರು ಆಗಮಿಸುವ ನಿರೀಕ್ಷೆ ಇದೆ. ಮದುವೆ ಮುಹೂರ್ತ, ಮದುವೆ ಸ್ಥಳ ಎಲ್ಲಿ ಎಂಬ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. (ಏಜೆನ್ಸೀಸ್)

English summary
Kannada cinema's finest actor and politician Anant Nag and Gayathri's daughter Aditi to tie the knot with Puttur groom Vivek on 10th November.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada