»   » ವಾವ್, ಅನಂತನಾಗ್ ಹೀರೋ ಅಟ್ ಅರುವತ್ತಾರು!

ವಾವ್, ಅನಂತನಾಗ್ ಹೀರೋ ಅಟ್ ಅರುವತ್ತಾರು!

Posted By:
Subscribe to Filmibeat Kannada

'ಬಯಲು ದಾರಿ' ಚಿತ್ರದ ಹಾಲು ಗಲ್ಲದ ಮುದ್ದಾದ ಹೀರೋ ಪಾತ್ರದಲ್ಲಿ, 'ನೋಡಿ ಸ್ವಾಮಿ ನಾವಿರೋದು ಹೀಗೆ' ಚಿತ್ರದಲ್ಲಿ ಗೃಹಸ್ಥನಾಗಿ, 'ಆಕ್ಸಿಡೆಂಟ್' ಚಿತ್ರದಲ್ಲಿ ಪ್ರಭಾವಿ ರಾಜಕಾರಣಿಯಾಗಿ, 'ಗೌರಿ ಗಣೇಶ' ಚಿತ್ರದಲ್ಲಿ ಚಾಲಾಕಿ ಯುವಕನಾಗಿ, ಬೆಳದಿಂಗಳ ಬಾಲೆ ಚಿತ್ರದಲ್ಲಿ 'ಅಮರ ಪ್ರೇಮಿ'ಯಾಗಿ, ಹಾಲಿವುಡ್ ನಲ್ಲಿ 'ಸೈಂಟಿಸ್ಟ್' ಆಗಿ, 'ಮುಂಗಾರು ಮಳೆ' ಚಿತ್ರದಲ್ಲಿ ಅಪ್ಪನಾಗಿ...ಹೀಗೆ, ನಾಲ್ಕು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಭಿನ್ನ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಅನಂತ್ ನಾಗ್, ಇದೀಗ ಹೊಸ ಸರ್ಪ್ರೈಸ್ ನೀಡಿದ್ದಾರೆ. [ಭಟ್ಟರ 'ಪ್ಲಸ್' ಸಿನಿಮಾ]

ಹಿಂದೆಂದೂ ಕಂಡಿರದ ಸಖತ್ ಸ್ಟೈಲಿಶ್ ಲುಕ್ ನಲ್ಲಿ ಅನಂತ್ ನಾಗ್ ಕಾಣಿಸಿಕೊಂಡಿದ್ದಾರೆ. ನೀವು ನಂಬಲೇಬೇಕಾಗಿರುವ ಮತ್ತೊಂದು ವಿಷಯ ಅಂದ್ರೆ, ವರ್ಷಗಳ ನಂತ್ರ ಬೆಳ್ಳಿತೆರೆ ಮೇಲೆ ಅನಂತ್ ನಾಗ್ ಮತ್ತೆ 'ಹೀರೋ' ಆಗಿದ್ದಾರೆ. ಅದು 66ರ ಹರೆಯದಲ್ಲಿ..! ಸ್ಲೈಡ್ ಗಳಲ್ಲಿ ಅನಂತ್ ನಾಗ್ 'ಹೊಸ' ರೂಪದ ದರ್ಶನ ಇದೆ. ಕ್ಲಿಕ್ ಮಾಡಿ. [ಪೊಲೀಸ್ ಗೆಟಪ್ಪಲ್ಲಿ ಯೋಗರಾಜ್ ಭಟ್]

'ಅನಂತ'ನ ಅವತಾರ

ನಿಮ್ಮ ಕಣ್ಣನ್ನ ನೀವೇ ನಂಬೋಕೆ ಅಸಾಧ್ಯ ಅನಿಸಿದ್ರೂ, ಇದು ಹಂಡ್ರೆಡ್ ಪರ್ಸೆಂಟ್ ನಿಜ. ಇದೇ ಅನಂತ್ ನಾಗ್ ರ ಹೀರೋ ಗೆಟಪ್. ಅಂದ್ಹಾಗೆ ಅನಂತ್ ನಾಗ್ ಗೆ ಇಷ್ಟು ವರ್ಷಗಳ ಬಳಿಕ ಮತ್ತೆ ಹೀರೋ ಪಟ್ಟ ಕೊಟ್ಟಿರೋ ನಿರ್ದೇಶಕರು ಯಾರು ಗೊತ್ತಾ? ಯೋಗರಾಜ್ ಭಟ್ಟರ ಶಿಷ್ಯ ಗಡ್ಡಾ ವಿಜಿ.

ಅಂದು 'ದ್ಯಾವ್ರೆ', ಇಂದು 'ಪ್ಲಸ್'

ಜೈಲಿನಲ್ಲಿರುವ ಖೈದಿಗಳ ವ್ಯಥೆಯನ್ನ 'ದ್ಯಾವ್ರೇ' ಮೂಲಕ ತೆರೆಗೆ ತಂದಿದ್ದ ಗಡ್ಡಾವಿಜಿ ನಿರ್ದೇಶಿಸ್ತಾಯಿರುವ ಹೊಸ ಸಿನಿಮಾ 'ಪ್ಲಸ್'. 'ರಿಯಲ್ ಸ್ಟಾರ್' ಸ್ಟೈಲ್ ನಲ್ಲಿ ಸಿಂಬಲ್ ಇಟ್ಟು ಸಿನಿಮಾಗೆ ಚಾಲನೆ ನೀಡಿರುವ ಗಡ್ಡಾವಿಜಿ ಚಿತ್ರದಲ್ಲಿ ಅನಂತ್ ನಾಗ್ ಹೀರೋ..! '

ಅನಂತ್ ''ಪ್ಲಸ್'' ಪಾಯಿಂಟ್

ಹೀರೋ ಯಾರು ಅನ್ನುವುದನ್ನ ಸದ್ಯಕ್ಕೆ ರಿವೀಲ್ ಮಾಡಲ್ಲ' ಅಂತ ಹೀರೋ ಇಲ್ಲದೆ ಮುಹೂರ್ತ ಮುಗಿಸಿದ್ದ ಗಡ್ಡಾವಿಜಿ, ಇದೀಗ ಅನಂತ್ ನಾಗ್ ರವರೇ 'ಪ್ಲಸ್' ಪಾಯಿಂಟ್ ಅಂತ ಒಪ್ಪಿಕೊಂಡಿದ್ದಾರೆ.

'ಉದ್ಯಮಿ'ಯಾದ ಅನಂತ್ ನಾಗ್

ಅಸಲಿಗೆ 'ಪ್ಲಸ್' ಚಿತ್ರದಲ್ಲಿ ಅನಂತ್ ನಾಗ್ ದೊಡ್ಡ ಉದ್ಯಮಿ. ಇಂಡಸ್ಟ್ರಿಯಲಿಸ್ಟ್ ಆಗಿ ಅಭಿನಯಿಸುತ್ತಿರುವ ಅನಂತ್, ಸ್ವಲ್ಪ ಸ್ಟೈಲಿಶ್ ಆಗಿ ಕಾಣಬೇಕು ಅಂತ ಅನಂತ್ ನಾಗ್ ಕೈಲಿ ಚೆಸ್, ಪೆಗ್, ಗಾಲ್ಫ್ ಸ್ಟಿಕ್ ಕೊಟ್ಟು ಸ್ಪೆಷಲ್ ಗೆಟಪ್ ಹಾಕಿಸಿದ್ದಾರಂತೆ ಗಡ್ಡಾವಿಜಿ.

ಶಾಕಿಂಗ್ ಗೆಟಪ್ಪೊಂದು ಬಾಕಿ ಐತಿ..!

ಈ ಸ್ಟೈಲಿಶ್ ಗೆಟಪ್ ಜೊತೆಗೆ ಅನಂತ್ ಇನ್ನೂ ಎರಡು ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಎರಡು ಲುಕ್ ಗಳು ಶಾಕಿಂಗ್ ಆಗಿರುತ್ತವೆ ಅಂತ 'ಫಿಲ್ಮಿಬೀಟ್ ಕನ್ನಡ' ಗೆ ನಿರ್ದೇಶಕ ಗಡ್ಡಾವಿಜಿ ತಿಳಿಸಿದ್ದಾರೆ.

'ಬಿ ಪಾಸಿಟೀವ್' ರೋಲ್

ಟೈಟಲ್ ಮತ್ತು ಅನಂತ್ ಲುಕ್ ನಿಂದ ಕುತೂಹಲ ಕೆರಳಿಸುತ್ತಿರುವ ನಿರ್ದೇಶಕ ಗಡ್ಡಾವಿಜಿ, 'ಅನಂತ್ ನಾಗ್ ಅಭಿನಯಿಸಿರುವ ಪಾತ್ರ ತುಂಬಾ ಪಾಸಿಟೀವ್ ಆಟಿಟ್ಯೂಡ್ ಇರುವಂತದ್ದು. ದೊಡ್ಡ ಉದ್ಯಮಿಯಾದರೂ, ನಾಯಕನಿಗೆ ಕೆಲ ನ್ಯೂನತೆಗಳಿರುತ್ತವೆ. ಅದನ್ನೆಲ್ಲಾ ಮೆಟ್ಟಿ ನಿಂತು ಪಾಸಿಟಿವ್ ಆಗಿ ಜೀವನ ನಿಭಾಯಿಸುವ ವ್ಯಕ್ತಿಯ ಕಥೆ ಈ ''ಪ್ಲಸ್'' ಅಂತಾರೆ ಗಡ್ಡಾವಿಜಿ.

ಅನಂತ್ ಗೆ ಜೋಡಿ ಯಾರು..?

ಈ ಪ್ರಶ್ನೆಗೆ ಗಡ್ಡಾ ವಿಜಿ ಉತ್ತರ ಕೊಡ್ಲಿಲ್ಲ..! ಅನಂತ್ ನಾಗ್ ಬಿಟ್ರೆ ಬಾಕಿ ತಾರಾಗಣವನ್ನು ಸಸ್ಪೆನ್ಸ್ ನಲ್ಲಿಟ್ಟಿದ್ದಾರೆ.

ಮುಂದೈತಿ ಸರ್ಪ್ರೈಸ್ ಪ್ಯಾಕೇಜ್

ಯೋಗರಾಜ್ ಭಟ್ ನಿರ್ಮಿಸುತ್ತಿರುವ ಈ ಚಿತ್ರದ ಶೂಟಿಂಗ್ ಭರದಿಂದ ಸಾಗ್ತಿದೆ. ಸದ್ಯಕ್ಕೆ 'ಅನಂತ್ ನ ಹೊಸ ಅವತಾರ'ದ ದರ್ಶನ ಮಾಡಿಸಿರುವ ನಿರ್ದೇಶಕರು ಬಾಕಿ ತಾರಾಗಣವನ್ನ ಸಸ್ಪೆನ್ಸ್ ಆಗಿ ಇಟ್ಟಿದ್ದಾರೆ. ಅಲ್ಲಿಗೆ, 'ಪ್ಲಸ್' ಚಿತ್ರತಂಡದಿಂದ ಮತ್ತಷ್ಟು ಸರ್ಪ್ರೈಸ್ ಎಲೆಮೆಂಟ್ ಇದೆ ಅಂತರ್ಥ.

ಅನಂತ್ ತಮ್ಮ ಶಂಕರ್ ನಾಗ್ ಅವರ 60 ನೇ ಹುಟ್ಟುಹಬ್ಬ

ಅಂದ್ಹಾಗೆ, ಅನಂತ್ ತಮ್ಮ ಶಂಕರ್ ನಾಗ್ ಅವರ 60 ನೇ ಹುಟ್ಟುಹಬ್ಬ ಇವತ್ತು, ನವೆಂಬರ್ 9. ['ಶಂಕರಣ್ಣ'ನ ಬಗ್ಗೆ ನೀವು ಕೇಳರಿಯದ ಸಂಗತಿಗಳು]

English summary
Anant Nag playing a lead role in the movie Plus. Surprising element is, at the age of 66 Anant Nag is roped in to play a Hero. Anant Nag will be portraying Business magnate in the movie and his stylish look is revealed.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada