»   » ಅನಂತ್ ನಾಗ್ ಜೀವನದಲ್ಲಿ 'ಹೊನ್ನಾವರ' ಅಮೂಲ್ಯವಾದ ಕ್ಷಣ ಯಾಕೆ.?

ಅನಂತ್ ನಾಗ್ ಜೀವನದಲ್ಲಿ 'ಹೊನ್ನಾವರ' ಅಮೂಲ್ಯವಾದ ಕ್ಷಣ ಯಾಕೆ.?

Subscribe to Filmibeat Kannada
For Quick Alerts
ALLOW NOTIFICATIONS
For Daily Alerts
  ಕನ್ನಡ ನಟ ಅನಂತ್ ನಾಗ್ ಹೊನ್ನಾವರದ ಹಳೇ ನೆನಪುಗಳನ್ನ ಮೆಲುಕು ಹಾಕಿದ್ದು ಹೀಗೆ | FILMIBEAT KANNADA

  ಕನ್ನಡದ ಚಿತ್ರರಂಗದ ಮಿಸ್ಟರ್ ಫರ್ಫೆಕ್ಸ್, ಸವ್ಯಸಾಚಿ ನಟ ಅನಂತ್ ನಾಗ್ 1948 ಸೆಪ್ಟಂಬರ್ 4 ರಂದು ಮುಂಬೈನಲ್ಲಿ ಹುಟ್ಟಿದ್ದರು. ನಂತರ ಅವರ ಕುಟುಂಬ ಕರ್ನಾಟಕದಲ್ಲಿ ನೆಲೆಕಂಡಿತ್ತು. ಅನಂತನಾಗ್ ನಾಗರಕಟ್ಟೆ ತಮ್ಮ ಜೀವನದ ಮೊದಲ ಆರು ವರ್ಷವನ್ನು ಕಾಸರಗೋಡಿನ ಹತ್ತಿರದ ಆನಂದಾಶ್ರಮದಲ್ಲಿ ಬೆಳೆದರು.

  ನಂತರ 5 ರಿಂದ 8ನೇ ತರಗತಿವರೆಗೂ ಹೊನ್ನಾವರದಲ್ಲಿ ಶಿಕ್ಷಣ ಅಭ್ಯಾಸ ಮಾಡಿದರು. ಆಮೇಲೆ ಹೆಚ್ಚಿನ ವಿಧ್ಯಾಭ್ಯಾಸ ಮಾಡಿಲು ಮುಂಬೈನ ಸೇಂಟ್ ಕ್ಸೇವೀಯರ್ ಶಾಲೆಗೆ ಸೇರಿದರು.

  ಮುಂಬೈನ ಮುಜುಗರದ ಶಾಲಾ ದಿನಗಳ ಬಗ್ಗೆ ಅನಂತ್ ಹೀಗಂದ್ರು?

  ಹೊನ್ನಾವರದಲ್ಲಿ ಓದುತ್ತಿದ್ದಾಗ ಶಾಲೆಗೆ ಟಾಪ್ ಆಗಿದ್ದ ಅನಂತ್ ನಾಗ್ ಮುಂಬೈಗೆ ಹೋದ್ಮೇಲೆ ತರಗತಿಯ ಕೊನೆಯ ಐದರ ಸ್ಥಾನದಲ್ಲಿರುತ್ತಿದ್ದರು. ಇದಕ್ಕೆ ಕಾರಣ, ನಾಟಕ, ಸಿನಿಮಾದ ಆಕರ್ಷಣೆ. ಅಲ್ಲಿಂದ, ಮರಾಠಿ ರಂಗಭೂಮಿ, ಕನ್ನಡ ಸಿನಿಮಾ ಹೀಗೆ ಅನಂತ್ ಅವರ ಹಾದಿಯೇ ಬದಲಾಯ್ತು. ಸಿನಿಲೋಕದಲ್ಲಿ ತಮ್ಮ ನೆಲೆಕಂಡುಕೊಂಡರು. ಇದೀಗ, ಅನಂತ್ ನಾಗ್ ಹೊನ್ನಾವರದಲ್ಲಿ ತಾವು ಕಳೆದ ತಮ್ಮ ಬಾಲ್ಯದ ದಿನಗಳನ್ನ ನೆನಪಿಸಿಕೊಂಡಿದ್ದಾರೆ. ಮುಂದೆ ಓದಿ....

  ನನ್ನ ಬಾಲ್ಯದ ನೆಚ್ಚಿನ ದಿನಗಳು ಹೊನ್ನಾವರ

  'ನಾನು ಬಾಲ್ಯದಲ್ಲಿ ಕಳೆದ ಅತ್ಯಂತ ಇಷ್ಟವಾದ ಸ್ಥಳ ಹೊನ್ನಾವರ ಎಂದು ಅನಂತ್ ನಾಗ್ ಹೇಳಿಕೊಂಡಿದ್ದಾರೆ. ಹೊನ್ನಾವರದಲ್ಲಿ ಅನಂತ್ ನಾಗ್ 5ನೇ ತರಗತಿಯಿಂದ 8ನೇ ಕ್ಲಾಸ್ ವರೆಗೂ ಓದಿದ್ದರು. ತಮ್ಮ ತಂದೆಯಿದ್ದ ಸ್ಥಳದಿಂದ 16 ಮೈಲಿ ದೂರದಲ್ಲಿ ಉಳಿದುಕೊಂಡು ಅನಂತ್ ನಾಗ್ ಓದುತ್ತಿದ್ದರಂತೆ.

  ರಾತ್ರೋರಾತ್ರಿ ಶಂಕರ್ ನೆನೆದು ಗದ್ಗದಿತರಾಗಿದ್ದ ಅನಂತ್ ನಾಗ್.!

  ಶಾಲೆಯಲ್ಲಿ ಟಾಪ್ 5ರಲ್ಲಿ ಇರುತ್ತಿದ್ದರು

  ಹೊನ್ನಾವರದಲ್ಲಿ ಅನಂತ್ ನಾಗ್ ಓದುತ್ತಿದಿದ್ದು ಕನ್ನಡ ಮಾಧ್ಯಮದಲ್ಲಿ. ತರಗತಿಯಲ್ಲಿ ಯಾವಾಗಲೂ ಟಾಪ್ 5ರಲ್ಲಿ ಅನಂತ್ ಇರುತ್ತಿದ್ದರಂತೆ. 'ಎಸಿಸಿ ಮತ್ತು ಎನ್.ಸಿ.ಸಿ ಗೇ ಸೇರಿದ್ದ ನಾನು ಆಗಲೇ ತುಂಬಾ ಶಿಸ್ತು ಮತ್ತು ಶ್ರದ್ಧೆಯಿಂದ ಇದ್ದೆ. ದೇಶಭಕ್ತಿ, ಸಮಾಜಮುಖಿ ಕೆಲಸಗಳನ್ನ ರೂಢಿಸಿಕೊಂಡೆ. ಈ ವೇಳೆ ರಾಷ್ಟ್ರದ ಹಲವು ನಾಯಕರನ್ನ ನೋಡಲು ಮತ್ತು ಮಾತನಾಡಿಸಲು ಅವಕಾಶ ಸಿಕ್ಕಿತ್ತು. ಅದು ನನಗೆ ಸಿಕ್ಕ ಅಮೂಲ್ಯವಾದ ದಿನಗಳು'' ಎಂದು ಅನಂತ್ ನಾಗ್ ನೆನಪಿಸಿಕೊಂಡಿದ್ದಾರೆ.

  ಅನಂತ್ ಅವರ ಸ್ವರ್ಗೀಯವಾಗಿದ್ದ ಬಾಲ್ಯ ವೀಕೆಂಡ್ ನಲ್ಲಿ ಬಹಿರಂಗ

  ಮುಂಬೈಗೆ ಹೋದ ಮೇಲೆ

  'ಅಲ್ಲಿಂದ ನಾನು ಮುಂಬೈಗೆ ಹೋದ ಮೇಲೆ ಸಂಪೂರ್ಣವಾಗಿ ಅಲ್ಲಿನ ಚಿತ್ರಣ ಬದಲಾಗಿತ್ತು. ಇಂಗ್ಲೀಷ್ ಮಾಧ್ಯಮದಲ್ಲಿ ಸೇರಿದೆ. ಶಾಲೆಯಲ್ಲಿ ಟಾಪ್ 5 ರಲ್ಲಿ ಇರುತ್ತಿದ್ದ ನಾನು ಇಲ್ಲಿ ಕೊನೆಯ ಐದರಲ್ಲಿ ಸ್ಥಾನ ಪಡೆಯುತ್ತಿದ್ದೆ. ಈ ದಿನಗಳಲ್ಲಿ ನನಗೆ ಈ ಸಿನಿಮಾ, ನಟನೆಯ ಕ್ಷೇತ್ರ ಪರಿಚಯವಾಯಿತು'' ಎಂದು ಅನಂತ್ ನಾಗ್ ತಮ್ಮ ಬಾಲ್ಯದ ಮರೆಯಲಾಗದ ಕ್ಷಣಗಳನ್ನ ಮೆಲುಕು ಹಾಕಿದ್ದಾರೆ.

  ಶಂಕರ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಸತ್ಯಕಥೆ ಬಿಚ್ಚಿಟ್ಟ ಅನಂತ್ ನಾಗ್

  ಅನಂತ್ ನಾಗ್ ಸಿನಿಮಾಗಳು

  1972 ರಲ್ಲಿ ಕನ್ನಡ ಚಿತ್ರ `ಸಂಕಲ್ಪ' ಮತ್ತು ಶ್ಯಾಮ ಬೆನಗಲ್ ರ `ಅಂಕುರ್' ಚಿತ್ರದಿಂದ ಸಿನಿಪಯಣ ಶುರು ಮಾಡಿದರು. ಅನಂತನಾಗ್ ನಟಿಸಿದ 7 ಹಿಂದಿ ಚಿತ್ರಗಳಲ್ಲಿ 6 ಚಿತ್ರಗಳನ್ನು ಶ್ಯಾಮ್ ಬೆನಗಲ್ ಅವರ ನಿರ್ದೆಶನದಲ್ಲಿ ನಟಿಸಿರುವುದು ವಿಶೇಷ. 1975 ರಲ್ಲಿ ತೆರೆಕಂಡ ದೊರೈ ಭಗವಾನ್ ನಿರ್ದೇಶನದ `ಬಯಲುದಾರಿ' ಚಿತ್ರದಲ್ಲಿ ಕಲ್ಪನಾ ಜೊತೆ ನಟಿಸಿ ಕನ್ನಡ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರಾದರು. ಅಲ್ಲಿಂದ ಶುರುವಾದ ಅನಂತನಾಗರ ಚಿತ್ರಜೀವನ ಸುಮಾರು 250 ಕ್ಕೂ ಹೆಚ್ಚು ಚಿತ್ರಗಳನ್ನು ದಾಟಿ ಮುನ್ನುಗ್ಗುತ್ತಿದೆ.

  English summary
  Actor Anant Nag says he often reminisces his childhood days, especially those that he spent in Honnavar.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more