»   » ಪವರ್ ಸ್ಟಾರ್ ಪುನೀತ್ ನಿರ್ಮಾಣದ ಸಿನಿಮಾದಲ್ಲಿ ಅನಂತ್ ನಾಗ್ ನಟನೆ

ಪವರ್ ಸ್ಟಾರ್ ಪುನೀತ್ ನಿರ್ಮಾಣದ ಸಿನಿಮಾದಲ್ಲಿ ಅನಂತ್ ನಾಗ್ ನಟನೆ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ನಟ ಅನಂತ್ ನಾಗ್ ಅವರಿಗೆ ಈಗಲೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಇಂದಿನ ಪೀಳಿಗೆಯ ನಟರಿಗೂ ಪೈಪೋಟಿ ನೀಡುವಂತಹ ಪಾತ್ರಗಳನ್ನು ಅವರು ಮಾಡುತ್ತಿದ್ದಾರೆ. ಅದೇ ರೀತಿ ಈಗ ನಟ ಪುನೀತ್ ರಾಜ್ ಕುಮಾರ್ ನಿರ್ಮಾಣದ ಸಿನಿಮಾದಲ್ಲಿ ಅನಂತ್ ನಾಗ್ ನಟಿಸಲಿದ್ದಾರೆ.

ಪವರ್ ಸ್ಟಾರ್ ಪುನೀತ್ ನಿರ್ಮಾಣದ 'ಕವಲುದಾರಿ'ಯ ಫಸ್ಟ್ ಲುಕ್.!

ಪುನೀತ್ ನಿರ್ಮಾಣದ ಮೊದಲ ಸಿನಿಮಾ 'ಕವಲು ದಾರಿ' ಈಗಾಗಲೇ ಸಾಕಷ್ಟು ವಿಷಯಗಳಿಗೆ ಸದ್ದು ಮಾಡಿದೆ. ಆದರೆ ಈಗ ಚಿತ್ರದಲ್ಲಿ ನಟ ಅನಂತ್ ನಾಗ್ ಕೂಡ ನಟಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಅನಂತ್ ನಾಗ್ ಕಾಣಿಸಿಕೊಳ್ಳಲಿದ್ದಾರಂತೆ.

Ananth Nag will play an important role in Puneeth Rajkumar's 'Kavaludari'

ಈ ಹಿಂದೆ 'ಗೋಧಿ ಬಣ್ಣ ಸಾಧಾರಣ ಮೈ ಕಟ್ಟು' ಚಿತ್ರವನ್ನು ನಿರ್ದೇಶನ ಮಾಡಿದ್ದ ಹೇವಂತ್ ರಾವ್ 'ಕವಲು ದಾರಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅನಂತ್ ನಾಗ್ ಮತ್ತು ಹೇಮಂತ್ ರಾವ್ ಮತ್ತೆ ಒಂದಾಗಿದ್ದು, 'ಕವಲುದಾರಿ' ಚಿತ್ರದಲ್ಲಿ ಅನಂತ್ ನಾಗ್ ಅವರ ಪಾತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಪುನೀತ್ ನಿರ್ಮಾಣದ 'ಕವಲು ದಾರಿ' ಕುರಿತ ಲೇಟೆಸ್ಟ್ ಸುದ್ದಿ ಇದು..

Ananth Nag will play an important role in Puneeth Rajkumar's 'Kavaludari'

'ಕವಲು ದಾರಿ' ಚಿತ್ರದಲ್ಲಿ 'ಅಪರೇಷನ್ ಅಲಮೇಲಮ್ಮ' ಖ್ಯಾತಿಯ ನಟ ರಿಷಿ ನಾಯಕನಾಗಿದ್ದಾರೆ. ಚಿತ್ರದಲ್ಲಿ ರಿಷಿ ಕೆ.ಎಸ್.ಶ್ಯಾಮ್ ಎಂಬ ಪೊಲೀಸ್ ಅಧಿಕಾರಿಯ ಪಾತ್ರವನ್ನು ಮಾಡುತ್ತಿದ್ದಾರೆ. ಈ ಹಿಂದೆ ಚಿತ್ರಕ್ಕೆ 'ಅರ್ಧಸತ್ಯ' ಎಂಬ ಟೈಟಲ್ ಫಿಕ್ಸ್ ಆಗಿದ್ದು, ನಂತರ ಅದನ್ನು 'ಕವಲುದಾರಿ' ಎಂದು ಬದಲಾಯಿಸಲಾಗಿದೆ.

English summary
Kannada Actor Ananth Nag will play an important role in Power Star Puneeth Rajkumar's 'Kavaludari' movie. The movie is directed by Hemanth rao.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada