»   » ರಾಜ್ ಮೊಮ್ಮಗನ ಚಿತ್ರಕ್ಕೆ ಶುಭ ಕೋರಿದ ರಾಜ್ ಪುತ್ರರು

ರಾಜ್ ಮೊಮ್ಮಗನ ಚಿತ್ರಕ್ಕೆ ಶುಭ ಕೋರಿದ ರಾಜ್ ಪುತ್ರರು

Posted By:
Subscribe to Filmibeat Kannada

ಡಾ.ರಾಜ್ ಮೊಮ್ಮಗ ವಿನಯ್ ರಾಜ್ ಕುಮಾರ್‌ ಅಭಿನಯಿಸುತ್ತಿರುವ ಮೂರನೇ ಚಿತ್ರದ ಪೋಸ್ಟರ್ ಬಿಡುಗಡೆಯಾಗಿ ಕುತೂಹಲ ಹುಟ್ಟುಹಾಕಿತ್ತು. ಈ ಚಿತ್ರದಲ್ಲಿ ವಿನಯ್ ರಾಜ್ ಕುಮಾರ್ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.

ಇದೀಗ, ಈ ಚಿತ್ರಕ್ಕೆ 'ಅನಂತು ವರ್ಸಸ್ ನುಸ್ರತ್' ಎಂದು ಹೆಸರಿಡಲಾಗಿದ್ದು, ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿದೆ. ಚಿತ್ರದ ಮೊದಲ ದೃಶ್ಯಕ್ಕೆ ಡಾ.ರಾಜ್ ಪುತ್ರರಾದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಕ್ಲಾಪ್ ಮಾಡಿ ಶುಭ ಕೋರಿದರು.

ಮುಂದಿನ ಚಿತ್ರದಲ್ಲಿ 'ಲಾಯರ್' ಆದ ವಿನಯ್ ರಾಜ್ ಕುಮಾರ್

ananthu versus nusrath movie launched

ಈ ಚಿತ್ರವನ್ನ ಸುಧೀರ್‌ ಶಾನುಭೋಗ್ ನಿರ್ದೇಶಿಸುತ್ತಿದ್ದು, ಮಾಣಿಕ್ಯ ಪ್ರೊಡಕ್ಷನ್ಸ್‌ನಡಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಸುನಾದ್ ಗೌತಮ್ ಅವರ ಸಂಗೀತ ಚಿತ್ರಕ್ಕಿದೆ.

English summary
Kannada Actor Vinay Rajkumar starrer 3rd Kannada Movie 'Ananthu versus Nusrath' launched. The movie is direted by sudhir shanbhag
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada