»   » ಅನನ್ಯ ಕಾಸರವಳ್ಳಿ ಕಿರುಚಿತ್ರಕ್ಕೆ ದೊಡ್ಡ ಪುರಸ್ಕಾರ

ಅನನ್ಯ ಕಾಸರವಳ್ಳಿ ಕಿರುಚಿತ್ರಕ್ಕೆ ದೊಡ್ಡ ಪುರಸ್ಕಾರ

Posted By:
Subscribe to Filmibeat Kannada

ಪುಣೆಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಕನ್ನಡತಿ ಅನನ್ಯ ಕಾಸರವಳ್ಳಿ ಯವರು ನಿರ್ದೇಶಿಸಿದ ಕಿರು ಚಿತ್ರ "ಕಪ್ಪು ಕಲ್ಲಿನ ಸೈತಾನ"(Devil of the black stone ) ಕ್ಕೆ ವಿದ್ಯಾರ್ಥಿ ಚಿತ್ರ ವಿಭಾಗದಲ್ಲಿ ಶ್ರೇಷ್ಠ ಕಿರು ಚಿತ್ರ ಪ್ರಶಸ್ತಿ ಲಭಿಸಿದೆ.

ಫ಼್ರಾನ್ಸ್, ಫಿನ್ ಲ್ಯಾಂಡ್, ಇಂಗ್ಲೆಂಡ್, ಪೋಲೆಂಡ್, ಸ್ಪೆನ್,ರಷ್ಯಾ ಹಾಗೂ ಭಾರತದ ಕಿರುಚಿತ್ರಗಳು ಸ್ಪರ್ಧೆಯಲ್ಲಿದ್ದವು. ಸುಭಾಷ್ ಘಾಯ್ ಅವರು ನಿರ್ದೇಶಕರಾಗಿರುವ ವಿಸ್ಲಿಂಗ್ ವುಡ್ಸ್ ನವರು ಈ ಪ್ರಶಸ್ತಿಯನ್ನು ನೀಡಿದ್ದಾರೆ. ಚೆನ್ನೈ ನ ಎಲ್.ವಿ.ಪ್ರಸಾದ್ ಫಿಲ್ಮ್ ಅಂಡ್ ಟೆಲಿವಿಷನ್ ಅಕಾಡೆಮಿಯಲ್ಲಿ ನಿರ್ದೇಶನ ವಿಭಾಗದ ವಿದ್ಯಾರ್ಥಿನಿಯಾಗಿದ್ದ ಅನನ್ಯ ಕಾಸರವಳ್ಳಿ ಯವರು 2013 ರ ಶ್ರೇಷ್ಠ ವಿದ್ಯಾರ್ಥಿಯಾಗಿ ತೇರ್ಗಡೆಯಾಗಿದ್ದರು.ಹಾಗೂ ಇದೇ ಚಿತ್ರ ಆ ವರ್ಷದ ಶ್ರೇಷ್ಠ ವಿಧ್ಯಾರ್ಥಿ ಚಿತ್ರ ಪ್ರಶಸ್ತಿಯನ್ನೂ ಪಡೆದಿತ್ತು.

ಕನ್ನಡದ ಖ್ಯಾತ ಕಥೆಗಾರ ಬೋಳುವಾರ ಮೊಹಮ್ಮದ್ ಕುಯ್ನಿ ಯವರ ಇದೇ ಹೆಸರಿನ ಕಥೆಯಾಧಾರಿಸಿದ ಈ ಕಿರುಚಿತ್ರದಲ್ಲಿ ಕನ್ನಡದ ಹವ್ಯಾಸಿ ರಂಗ ಭೂಮಿ ಕಲಾವಿದರಾದ ಗೀತಾ ಸೂರತ್ಕಲ್,ಶೃಂಗೇರಿ ರಾಮಣ್ಣ, ಸುಮುಖ ಭಾರದ್ವಾಜ್, ಗಿರಿ ಮೊದಲಾದವರು ಅಭಿನಯಿಸಿದ್ದಾರೆ.

ಉದಿತ್ ಖುರಾನ ಅವರ ಛಾಯಾಗ್ರಹಣ, ಮಲ್ಲಪ್ಪನ್ ಅವರ ಸಂಕಲನ, ಐಸಾಕ್ ಥಾಮಸ್ ಕೊಟ್ಟುಕಪಲ್ಲಿ ಯವರ ಸಂಗೀತ, ಗಿರಿ ಯವರ ಕಲಾ ನಿರ್ದೇಶನ ಇರುವ ಈ ಚಿತ್ರ ಈಗಾಗಲೇ 8 ಚಿತ್ರೋತ್ಸವಗಳಲ್ಲಿ ಪ್ರದರ್ಶನ ಗೊಂಡಿದೆ.

Ananya Kasaravalli Devil of the black stone piff 2014 award

ಇನ್ನು ಮುಂಬಯಿಯಲ್ಲಿ ನಡೆಯಲಿರುವ ಮುಂಬೈ ಅಂತಾರಾಷ್ಟ್ರೀಯ ಕಿರು ಚಿತ್ರೋತ್ಸವ(MIFF), ಸಿಲಿಗುರಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕಿರು ಚಿತ್ರೋತ್ಸವ, ತಿರುವನಂತಪುರಂ ನಲ್ಲಿ ನಡೆಯಲಿರುವ ಸೈನ್ಸ್ ಚಿತ್ರೋತ್ಸವಕ್ಕೂ ಆಯ್ಕೆ ಯಾಗಿದೆ.

ಊರ ಹೊರವಲಯದಲ್ಲಿ ಬೀಡಿ ಕಟ್ಟುತ್ತಾ ಜೀವನಸಾಗಿಸುತ್ತಿರುವ ಮುದುಕಿ ಕುನ್ನಿಪಾತುಮ್ಮನ ಸಂಸಾರದ ಕಥೆ ಇದು. ವಿಧವೆ ಸೊಸೆ, ಪರಿತ್ಯಕ್ತೆ ಮಗಳು ಹಾಗೂ ಮೊಮ್ಮಗನೊಂದಿಗೆ ಬದುಕುತ್ತಿರುವ ಪಾತುಮ್ಮ ಸರ್ಕಾರ 2 ರೂಪಾಯಿಗೆ ಒಂದು ಕೆ.ಜಿ ಅಕ್ಕಿ ಕೊಡುತ್ತಿದೆಯೆಂದು ಗೊತ್ತಾದಾಗ ನಡೆಸುವ ಹಿಕ್ಮತ್ತಿನ ಕಥೆ ಇದು.

ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಪುತ್ರಿ ಅನನ್ಯ ಕಾಸರವಳ್ಳಿಯವರು ಎಲ್.ವಿ.ಪಿ ಅಕಾಡೆಮಿಯಲ್ಲಿನ ವಿದ್ಯಾರ್ಥಿ ದೆಸೆಯಲ್ಲಿ 4 ಕಿರುಚಿತ್ರಗಳನ್ನು ನಿರ್ದೇಶಿಸಿದ್ದು ಎಲ್ಲವೂ ಬೇರೆ ಬೇರೆ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಗೊಂಡು ಕೆಲವು ಪ್ರಶಸ್ತಿಗಳನ್ನೂ ಪಡೆದಿವೆ. ಮೊದಲ ಚಿತ್ರ 'ಸಾದತ್ ಹಸನ್ ಮಂಟೋ' ಅವರ ಉರ್ದು ಕಥೆಯನ್ನಾಧರಿಸಿದ್ದರೆ ಎರಡನೇ ಸಂಗೀತ ಚಿತ್ರ ಶಂಕರಾಚಾರ್ಯರ ಸೌಂದರ್ಯ ಲಹರಿಯ ಒಂದು ಶ್ಲೋಕವನ್ನು ಆಧರಿಸಿದೆ. ಅವರ ನಿರ್ದೇಶನದ ಸಾಕ್ಷ ಚಿತ್ರ "ಬಿಯಾಂಡ್ ಬೈನರಿ" ಕೂಡಾ ಬಹು ಮೆಚ್ಚುಗೆಗೆ ಪಾತ್ರವಾಗಿದೆ. 

English summary
Actress, Director Ananya Kasaravalli's 'Devil of the black stone' Short Film has won best movie award under student films category during the recently concluded Pune International Film Festival(PIFF)
Please Wait while comments are loading...