»   » 'ವೆಂಕಟ್ ಲವ್' ಬಗ್ಗೆ 'ಸೂಪರ್ ಜೋಡಿ' ನಿರೂಪಕ ಅಕುಲ್ ಹೇಳಿದಿಷ್ಟು.!

'ವೆಂಕಟ್ ಲವ್' ಬಗ್ಗೆ 'ಸೂಪರ್ ಜೋಡಿ' ನಿರೂಪಕ ಅಕುಲ್ ಹೇಳಿದಿಷ್ಟು.!

Posted By:
Subscribe to Filmibeat Kannada

ನಟ ಹುಚ್ಚ ವೆಂಕಟ್ ಮತ್ತು ರಚನಾ ಲವ್ ಸ್ಟೋರಿ ಬಗ್ಗೆ ಅಕುಲ್ ಬಾಲಾಜಿ ಮಾತನಾಡಿದ್ದಾರೆ. 'ಸೂಪರ್ ಜೋಡಿ' ಕಾರ್ಯಕ್ರಮದ ನಿರೂಪಕರಾಗಿದ್ದ ಅಕುಲ್ ಇವರಿಬ್ಬರ ಬಗ್ಗೆ ನಡೆದ ಘಟನೆಯನ್ನು ಬಿಚ್ಚಿಟಿದ್ದಾರೆ.

ವೆಂಕಟ್ 'ಹುಚ್ಚು' ಪ್ರೀತಿ ಬಗ್ಗೆ 'ಸೂಪರ್ ಜೋಡಿ' ರಚನಾ ಬಿಚ್ಚಿಟ್ಟ ರಿಯಲ್ ಕಹಾನಿ

ಅಕುಲ್ ಬಾಲಾಜಿ ನಿರೂಪಣೆ ಮಾಡಿ ಕೊಡುತ್ತಿರುವ 'ಸೂಪರ್ ಜೋಡಿ' ಕಾರ್ಯಕ್ರಮದಲ್ಲಿ ಹುಚ್ಚ ವೆಂಕಟ್ ಮತ್ತು ರಚನಾ ಜೋಡಿಯಾಗಿದ್ದರು. ಜೊತೆಗೆ ವೆಂಕಟ್ ಸಹ ಸ್ಫರ್ಧಿ ರಚನಾ ಜೊತೆ ಪ್ರೀತಿ ಗೀತಿ ಅಂತ ಶುರು ಮಾಡಿದ್ದರಂತೆ. ಈ ಇಬ್ಬರನ್ನು ಹತ್ತಿರದಿಂದ ನೋಡಿರುವ ಅಕುಲ್ ಕಾರ್ಯಕ್ರಮದಲ್ಲಿ ಆದ ಸತ್ಯ ಅನುಭವವನ್ನ ಈಗ ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ...

ವೆಂಕಟ್ ಮಾಡಿದ್ದು ತಪ್ಪು

''ಆತ್ಮಹತ್ಯೆ ಎನ್ನುವುದು ಸಣ್ಣ ವಿಷಯವಲ್ಲ. ವೆಂಕಟ್ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದು ತಪ್ಪು. ಇದು ಚಿಕ್ಕ ಮಕ್ಕಳ ಆಟ ಅಲ್ಲ... ಈ ವಿಷಯದಲ್ಲಿ ಹುಡುಗಾಟ ಮಾಡಬಾರದು.'' - ಅಕುಲ್ ಬಾಲಾಜಿ, ನಿರೂಪಕ

ಬಲವಂತ ಮಾಡಬೇಡಿ

''ಹುಚ್ಚ ವೆಂಕಟ್ ನಿಜವಾಗಿಯೂ ಪ್ರೀತಿ ಮಾಡುತ್ತಿದ್ದು, ಅದನ್ನು ರಚನಾ ಕೂಡ ಒಪ್ಪಿದರೆ ಪರವಾಗಿಲ್ಲ. ಆದರೆ ಆಕೆ ಇಷ್ಟ ಇಲ್ಲ ಅಂತ ಹೇಳಿದ ಮೇಲೆ ಮತ್ತೆ ಬಲವಂತ ಮಾಡುವುದು ಸರಿಯಲ್ಲ''. - ಅಕುಲ್ ಬಾಲಾಜಿ, ನಿರೂಪಕ

ನಾನು ತಮಾಷೆ ಮಾಡುತ್ತಿದ್ದೆ...

''ಸೂಪರ್ ಜೋಡಿ' ಕಾರ್ಯಕ್ರಮದಲ್ಲಿ ಇಬ್ಬರ ಸ್ನೇಹ ನೋಡಿ ನಾನು ತಮಾಷೆ ಮಾಡುತ್ತಿದ್ದೆ. ಆಗ ಹುಚ್ಚ ವೆಂಕಟ್ ನನಗೆ ಪ್ರೀತಿ, ಮದುವೆ ಯಾವುದು ಬೇಡ ಅಂತ ಹೇಳಿದ್ದರು''. - ಅಕುಲ್ ಬಾಲಾಜಿ, ನಿರೂಪಕ

ಸಾಕಷ್ಟು ಜನರು ಕೇಳಿದ್ದರು

''ಕಾರ್ಯಕ್ರಮದಲ್ಲಿ ಇಬ್ಬರ ಫ್ರೆಂಡ್ ಶಿಪ್ ಮತ್ತು ಹೊಂದಾಣಿಕೆ ನೋಡಿ ಇಬ್ಬರು ಮದುವೆ ಆಗ್ತಾರ? ಅಂತ ಸಾಕಷ್ಟು ಜನ ನನ್ನನ್ನು ಕೇಳಿದ್ದರು. ಆಗ ಆ ವಿಷಯ ನನಗೆ ಗೊತ್ತಿಲ್ಲ ಅಂತ ನಾನು ಉತ್ತರಿಸುತ್ತಿದ್ದೆ.'' - ಅಕುಲ್ ಬಾಲಾಜಿ, ನಿರೂಪಕ

ಬೆಸ್ಟ್ ಫ್ರೆಂಡ್ ಎಂದಿದ್ದರು

''ಕಾರ್ಯಕ್ರಮದಲ್ಲಿ ಒಮ್ಮೆ ರಚನಾ ಬಗ್ಗೆ ಕೇಳಿದಾಗ ಆಕೆ ನನಗೆ ಬೆಸ್ಟ್ ಫ್ರೆಂಡ್ ಅಷ್ಟೆ ಅಂತ ವೆಂಕಟ್ ಹೇಳಿದ್ದರು. ಆದರೆ ಕಾರ್ಯಕ್ರಮ ಮುಗಿದು ಎರಡು ತಿಂಗಳು ಕಳೆದಿದೆ. ಈ ಮಧ್ಯೆ ಅವರ ನಡುವೆ ಏನಾಗಿದೆ ಎಂಬುದು ನನಗೆ ಗೊತ್ತಿಲ್ಲ''. - ಅಕುಲ್ ಬಾಲಾಜಿ, ನಿರೂಪಕ

English summary
Anchor Akul Balaji Gave Clarity About Huchcha Venkat and Rachana Love Story in Super Jodi show

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada